ಸಾರಾಂಶ
ಪಶುಗಳ ಔಷಧವನ್ನು ಮನುಷ್ಯರ ಬಳಕೆಗೆ ಯಾವುದೇ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಮಾಡಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್
ಪಶುಗಳ ಔಷಧವನ್ನು ಮನುಷ್ಯರ ಬಳಕೆಗೆ ಯಾವುದೇ ಸರ್ಕಾರಿ ಆಸ್ಪತ್ರೆಗೆ ಪೂರೈಕೆ ಮಾಡಿಲ್ಲ. ಆದರೆ ಕಂಪನಿಯೊಂದು ಪೂರೈಸಿದ ಔಷಧಗಳ ಮೇಲೆ ಪಶು ಸಂಗೋಪನೆಯ ಔಷಧಿ ಎಂದು ತಪ್ಪಾಗಿ ಲೇಬಲ್ ಅಂಟಿಸಿ ವಿತರಿಸಿತ್ತು. ವಿಷಯ ತಿಳಿದ ನಂತರ ಆ ಕಂಪನಿಗೆ ದಂಡ ವಿಧಿಸಿ ಆ ಎಲ್ಲ ಔಷಧಗಳನ್ನು ಕಂಪನಿಗೆ ವಾಪಸ್ ಕಳಿಸಿ ಹೊಸ ಔಷಧಗಳನ್ನು ಪಡೆಯಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.ಬಿಜೆಪಿಯ ಛಲವಾದಿ ಟಿ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂಪನಿ ಪೂರೈಸಿದ್ದ ಔಷಧಿಗಳನ್ನು ಏಳು ಪ್ರಯೋಗಾಲಯಗಳಿಗೆ ಕಳಿಸಿ ಪರೀಕ್ಷೆ ಮಾಡಿಸಲಾಗಿದೆ. ಅವುಗಳು ಪಶುಗಳ ಔಷಧವಲ್ಲ ಎಂದು ವರದಿ ಬಂದಿದೆ. ನಂತರ ಆ ಔಷಧ ಪೂರೈಕೆ ಮಾಡಿದ ಕಂಪನಿಗೆ ಶೇ.1ರಷ್ಟು ದಂಡ ವಿಧಿಸಲಾಗಿದೆ. ಜತೆಗೆ ಔಷಧಿಗಳನ್ನು ವಾಪಸ್ ಕಳಿಸಿ ಹೊಸದನ್ನು ಪಡೆಯಲಾಗಿದೆ ಎಂದರು.