ಸಾರಾಂಶ
ಕನ್ನಡಪ್ರಭ ವಾರ್ತೆ ನವಲಗುಂದ
ಪಟ್ಟಣದ ಗಣಪತಿ ದೇವಸ್ಥಾನದಲ್ಲಿ ವಿಘ್ನೇಶ್ವರನ ದರ್ಶನ ಪಡೆದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರಕ್ಕೆ ಸಚಿವ ಸಂತೋಷ ಲಾಡ್ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.ಪಟ್ಟಣದ ವಿನಾಯಕಪೇಟ್, ಗಾಂಧಿ ಮಾರುಕಟ್ಟೆ, ತಿಪ್ಪಯ್ಯನ ಕೂಟ್, ಹುಗ್ಗಿ ಓಣಿ, ರಾಮಲಿಂಗ ಓಣಿ, ಗ್ರಾಮದೇವಿ ಕೂಟ್, ಚಾವಡಿ, ಕಳ್ಳಿಮಠ ಓಣಿ, ತೆಗ್ಗಿನಕೇರಿ ಓಣಿ, ಲಿಂಗರಾಜ ಸರ್ಕಲ್ ನಂತರ ಗಾಂಧಿ ಮಾರುಕಟ್ಟೆಗೆ ಬಂದು ರೋಡ್ ಶೋ ಮುಕ್ತಾಯಗೊಂಡಿತು.
ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಗ್ಗಲಿಗೆ, ಡೊಳ್ಳು ಪದಗಳ ಮೂಲಕ ಮೆರವಣಿಗೆಗೆ ಮೆರಗು ತಂದರು. ದಾರಿಯುದ್ದಕ್ಕೂ ಕಾಂಗ್ರೆಸ್ ಪರ ಘೋಷಣೆಗಳು ಕೇಳಿಬಂದವು.ರೋಡ್ ಶೋದಲ್ಲಿ ಶಾಸಕ ಎನ್.ಎಚ್. ಕೋನರಡ್ಡಿ, ವರ್ಧಮಾನಗೌಡ ಹಿರೇಗೌಡರ, ಮಂಜು ಮಾಯಣ್ಣವರ, ಮಾಂತೇಶ ಭೋವಿ, ಮಂಜು ಜಾಧವ, ಜೀವನ ಪವಾರ, ಸುರೇಶ ಮೇಟಿ, ಪಕ್ರಾಶ ಶಿಗ್ಲಿ, ವಿಜಯಪ್ಪಗೌಡ ಪಾಟೀಲ, ಡಿ.ಕೆ. ಹಳ್ಳದ, ಈರಣ್ಣ ಶಿಡಗಂಟಿ, ಹುಸೇನಬಿ ಧಾರವಾಡ, ಅನ್ನಪೂರ್ಣಾ ಸುಣಗಾರ, ಏಕನಾಥ ಜಾಧವ, ಲೋಕಾಪೂರಿ, ಹನಮಂತಪ್ಪ ಕುಕನೂರ ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಗೆಲುವಿಗೆ ಎಲ್ಲ ಸಮುದಾಯಗಳ ಮತ ಬೇಕುಕನ್ನಡಪ್ರಭ ವಾರ್ತೆ ಧಾರವಾಡಎಲ್ಲ ಸಮುದಾಯದವರನ್ನು ಸಮನಾಗಿ ತೆಗೆದುಕೊಂಡು ಹೋಗೋ ಪಕ್ಷ ಅಂದ್ರೆ ಕಾಂಗ್ರೆಸ್. ಚುನಾವಣೆಯಲ್ಲಿ ಒಂದೇ ಸಮುದಾಯದ ಮತಗಳು ಬಂದರೆ ಗೆಲ್ಲುತ್ತೇವೆ ಎನ್ನಲಾಗದು. ಗೆಲ್ಲುವ ಅಭ್ಯರ್ಥಿಗೆ ಎಲ್ಲ ಸಮುದಾಯದ ಮತಗಳು ಬರಬೇಕು. ನಾನಂತೂ ಎಲ್ಲ ಸಮುದಾಯಗಳ ಮನ ಗೆಲ್ಲುವಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಕುರುಬ ಸಮಾಜದ ಅಭ್ಯರ್ಥಿ. ಬರೀ ಕುರುಬ ಸಮಾಜ ಮಾತ್ರವಲ್ಲದೇ ಎಲ್ಲ ಸಮುದಾಯದ ಮತಗಳನ್ನು ಕೇಳುತ್ತಿದ್ದೇನೆ. ಉತ್ತಮ ಸ್ಪಂದನೆಯೂ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುತ್ತೇವೆ. ಈಗಾಗಲೇ ಜಿಲ್ಲೆಯ 14 ಜಿಪಂ ಕ್ಷೇತ್ರಗಳಲ್ಲಿ ಅದ್ದೂರಿ ಪ್ರಚಾರ ಮಾಡುತ್ತಿದ್ದೇನೆ. ಎಲ್ಲ ಮುಖಂಡರನ್ನು ಗಮನಕ್ಕೆ ತೆಗೆದುಕ್ಕೊಂಡು ಪ್ರಚಾರ ಮಾಡುತ್ತಿದ್ದೇವೆ ಎಂದರು.ಗೆಲುವಿಗೆ ಎಲ್ಲ ಸಮುದಾಯಗಳ ಮತ ಬೇಕುಕನ್ನಡಪ್ರಭ ವಾರ್ತೆ ಧಾರವಾಡಎಲ್ಲ ಸಮುದಾಯದವರನ್ನು ಸಮನಾಗಿ ತೆಗೆದುಕೊಂಡು ಹೋಗೋ ಪಕ್ಷ ಅಂದ್ರೆ ಕಾಂಗ್ರೆಸ್. ಚುನಾವಣೆಯಲ್ಲಿ ಒಂದೇ ಸಮುದಾಯದ ಮತಗಳು ಬಂದರೆ ಗೆಲ್ಲುತ್ತೇವೆ ಎನ್ನಲಾಗದು. ಗೆಲ್ಲುವ ಅಭ್ಯರ್ಥಿಗೆ ಎಲ್ಲ ಸಮುದಾಯದ ಮತಗಳು ಬರಬೇಕು. ನಾನಂತೂ ಎಲ್ಲ ಸಮುದಾಯಗಳ ಮನ ಗೆಲ್ಲುವಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಹೇಳಿದರು.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ನಾನು ಕುರುಬ ಸಮಾಜದ ಅಭ್ಯರ್ಥಿ. ಬರೀ ಕುರುಬ ಸಮಾಜ ಮಾತ್ರವಲ್ಲದೇ ಎಲ್ಲ ಸಮುದಾಯದ ಮತಗಳನ್ನು ಕೇಳುತ್ತಿದ್ದೇನೆ. ಉತ್ತಮ ಸ್ಪಂದನೆಯೂ ಇದೆ. ಈ ಬಾರಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸುತ್ತೇವೆ. ಈಗಾಗಲೇ ಜಿಲ್ಲೆಯ 14 ಜಿಪಂ ಕ್ಷೇತ್ರಗಳಲ್ಲಿ ಅದ್ದೂರಿ ಪ್ರಚಾರ ಮಾಡುತ್ತಿದ್ದೇನೆ. ಎಲ್ಲ ಮುಖಂಡರನ್ನು ಗಮನಕ್ಕೆ ತೆಗೆದುಕ್ಕೊಂಡು ಪ್ರಚಾರ ಮಾಡುತ್ತಿದ್ದೇವೆ ಎಂದರು.