ಸಾರಾಂಶ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಸರ್ವಜನಾಂಗಗಳ ಅಭಿವೃದ್ಧಿ ಜೊತೆಗೆ ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅವರ ಪುತ್ರ ಎಸ್.ಮಧು ಬಂಗಾರಪ್ಪ ಅವರ ತಂದೆ ಹಾದಿಯಲ್ಲಿ ಸಾಗಿ ಬಡವರ ಪರ ಧ್ವನಿ ಎತ್ತುವ ಜೊತೆಗೆ ರಕ್ಷಣೆ ನೀಡುವ ನಾಯಕರಾಗಿದ್ದಾರೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿ. ಪಾಟೀಲ್ ಆನವಟ್ಟಿಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಆನವಟ್ಟಿ
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಸರ್ವಜನಾಂಗಗಳ ಅಭಿವೃದ್ಧಿ ಜೊತೆಗೆ ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದರು. ಅವರ ಪುತ್ರ ಎಸ್.ಮಧು ಬಂಗಾರಪ್ಪ ಅವರ ತಂದೆ ಹಾದಿಯಲ್ಲಿ ಸಾಗಿ ಬಡವರ ಪರ ಧ್ವನಿ ಎತ್ತುವ ಜೊತೆಗೆ ರಕ್ಷಣೆ ನೀಡುವ ನಾಯಕರಾಗಿದ್ದಾರೆ ಎಂದು ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದಗೌಡ ಬಿ. ಪಾಟೀಲ್ ಶ್ಲಾಘಿಸಿದರು.ಶಿಕ್ಷಣ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರ ಜನ್ಮದಿನ ಅಂಗವಾಗಿ, ಬಂಗಾರಪ್ಪ ಅಭಿಮಾನಿಗಳ ಬಳಗ, ಮಧು ಬಂಗಾರಪ್ಪ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಲಕ್ಷಾಂತರ ಬಡವರ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಗಿ ಮಾಲ್ಟ್, ಹೆಚ್ಚುವರಿ ಮೊಟ್ಟೆ, ಚಕ್ಕಿಗಳನ್ನು ವಿತರಣೆ ಮಾಡಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಹೋಬಳಿ ಮಟ್ಟಕ್ಕೊಂದು ಕೆಪಿಎಸ್ ಮಾದರಿ ಶಾಲೆ ತೆರೆಯುವ ಯೋಜನೆ ರೂಪಿಸಿದ್ದಾರೆ. ಶೈಕ್ಷಣಿಕ ಕ್ರಾಂತಿ ಮೂಲಕ ಬಡವರ ಅಭಿವೃದ್ಧಿ ಸಾಧ್ಯವಿದೆ ಎಂಬುವುದರಲ್ಲಿ ನಂಬಿಕೆ ಇರಿಸಿರುವ ಮಧು ಬಂಗಾರಪ್ಪ ಅವರು, ನಿರಂತರವಾಗಿ ಬಿಡುವು ಇಲ್ಲದೇ ಶಿಕ್ಷಣ ಇಲಾಖೆ ಸುಧಾರಣೆಗೆ ಪರಿಶ್ರಮ ಪಡುತ್ತಿರುವ ಸಚಿವರ ಕಾರ್ಯವೈಖರಿ ಜನಮೆಚ್ಚುಗೆಗೆ ಕಾರಣವಾಗಿದೆ ಎಂದರು.ಪಟ್ಟಣ ಪ್ರಮುಖ ಬೀದಿಗಳಲ್ಲಿ ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ಮತ್ತು ಶಾಲಾ ಮಕ್ಕಳಿಗೆ ಪೆನ್ನು, ನೋಟ್ ಪುಸ್ತಕ ಹಾಗೂ ಸಿಹಿ ಹಂಚುವ ಮೂಲಕ ಮಧು ಬಂಗಾರಪ್ಪ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿ, ಅವರ ಜನ್ಮದಿನವನ್ನು ಸಂಭ್ರಮಿಸಿದರು.
ಜಿ.ಪಂ. ಮಾಜಿ ಸದಸ್ಯ ಶಿವಲಿಂಗೇಗೌಡ, ಮುಖಂಡರಾದ ಅನೀಶ್‌ಗೌಡ ಪಾಟೀಲ್, ಎಲ್.ಜಿ. ಮಾಲತೇಶ್ ಲಕ್ಕವಳ್ಳಿ, ಹಬಿಬುಲ್ಲಾ ಹವಾಲ್ದಾರ್, ದೇವರಾಜ್ ತ್ಯಾವರೆತೆಪ್ಪ, ಚಾಂದ್ ನೂರಿ, ಬಸವರಾಜ್ ಅಗಸನಹಳ್ಳಿ, ಚಂದ್ರಪ್ಪ ಮಾಸ್ತರ್ ವೃತ್ತಿಕೊಪ್ಪ ಇದ್ದರು.- - - -ಕೆಪಿ2ಎನ್‌ಟಿ1ಇಪಿ:
ಸಚಿವ ಎಸ್.ಮಧು ಬಂಗಾರಪ್ಪ ಜನ್ಮದಿನ ಅಂಗವಾಗಿ ಆನವಟ್ಟಿಯ ಸಮುದಾಯ ಸರ್ಕಾರಿ ಆಸ್ಪತ್ರೆಯಲ್ಲಿ ಅಭಿಮಾನಿ ಬಳಗ, ಕಾರ್ಯಕರ್ತರು ರೋಗಿಗಳಿಗೆ ಹಣ್ಣು, ಬ್ರೇಡ್ ವಿತರಣೆ ಮಾಡುವ ಮೂಲಕ ಸಚಿವರ ಹುಟ್ಟುಹಬ್ಬ ದಿನವನ್ನು ಸಂಭ್ರಮಿಸಿದರು.