ಸಾರಾಂಶ
ಕೂಡಲೇ ಕ್ರಮಕ್ಕೆ ಆಮ್ ಆದ್ಮಿ ಪಕ್ಷ ಆಗ್ರಹ, ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳ ತೆರವಿಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಶ್ಚಿಮಘಟ್ಟ ಪ್ರದೇಶದಲ್ಲಿರುವ ಅರಣ್ಯ ಒತ್ತುವರಿ ಮಾಡಿರುವ ಅಕ್ರಮ ತೋಟಗಳು, ಅನಧಿಕೃತ ರೆಸಾರ್ಟ್, ಹೋಂ ಸ್ಟೇಗಳನ್ನು ತೆರವುಗೊಳಿಸಲು ರಚಿಸಲಾಗಿರುವ ಪಶ್ಚಿಮಘಟ್ಟ ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ಕೂಡಲೇ ಕಾರ್ಯಾಚರಣೆ ಆರಂಭಿಸಬೇಕೆಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ನೀಡಿರುವ ನಿರ್ದೇಶನವನ್ನು ಪರಿಸರವಾದಿಗಳು ಹಾಗೂ ಆಮ್ ಆದ್ಮಿ ಪಕ್ಷ ಸ್ವಾಗತಿಸಿದೆ.
ಈ ಆದೇಶ ಮಾಡಿರುವುದು ಅತ್ಯಂತ ಸಮಯೋಚಿತ ಮತ್ತು ಸ್ವಾಗತಾರ್ಹ. ರಾಜ್ಯದಲ್ಲಿ ಪಶ್ಚಿಮಘಟ್ಟ ಹಾದು ಹೋಗಿರುವ ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ ಮತ್ತು ದಕ್ಷಿಣ ಹಾಗೂ ಉತ್ತರ ಕನ್ನಡ ಜಿಲ್ಲೆ ಸೇರಿ ದಂತೆ ಹಾಸನ ಮತ್ತು ಕೊಡಗು ಜಿಲ್ಲೆಗಳ ಘಟ್ಟ ಪ್ರದೇಶಕ್ಕೆ ಈ ಆದೇಶ ಅನ್ವಯವಾಗಲಿದೆ ಎಂದು ಭದ್ರಾ ವೈಲ್ಡ್ ಲೈಫ್ ಕನ್ಸರ್ವೇಶನ್ ಟ್ರಸ್ಟ್ ಡಿ.ವಿ. ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ, ವೈಲ್ಡ್ ಕ್ಯಾಟ್- ಸಿ ಶ್ರೀದೇವ್ ಹುಲಿಕೆರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪಶ್ಚಿಮಘಟ್ಟ ಈ ಜಿಲ್ಲೆಯಷ್ಟೇ ಅಲ್ಲ, ಅದು ಹಾದು ಹೋಗುವ ಎಲ್ಲಾ ಜಿಲ್ಲೆಗಳ ಬೆನ್ನುಹುರಿ ಇದ್ದಂತೆ. ವಿಶ್ವದ ಅತ್ಯಂತ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿರುವ ಪಶ್ಚಿಮಘಟ್ಟ 50ಕ್ಕೂ ಹೆಚ್ಚು ನದಿಗಳ ಉಗಮ ಸ್ಥಾನವೂ ಆಗಿದೆ. ಈ ಬೆಟ್ಟ ಪ್ರದೇಶ ದಲ್ಲಿ ಆಗುವ ಯಾವುದೇ ರೀತಿ ಪ್ರಾಕೃತಿಕ ಬದಲಾವಣೆ ಜಲ ಸಂಪನ್ಮೂಲದ ಮೇಲೆ ಪರಿಣಾಮ ಬೀರುವುದಲ್ಲದೆ, ವಾತಾವರಣದ ಏರುಪೇರಿಗೂ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಈ ಎಲ್ಲವನ್ನುಅತ್ಯಂತ ಸೂಕ್ಷ್ಮವಾಗಿ ಗಮನಿಸಿರುವ ಸಚಿವರು ಈ ಆದೇಶ ಹೊರಡಿಸಿದ್ದು, ಪಶ್ಚಿಮಘಟ್ಟದ ಶೋಲಾ ಅರಣ್ಯ ಗಳನ್ನು ತೆಳುವಾಗಿಸಿ ಕಾಫಿ ತೋಟ, ಮನೆ, ಹೋಂಸ್ಟೇ, ರೆಸಾರ್ಟ್ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿರುವುದು ಅವರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲೇ ಸಚಿವರು ಅವುಗಳನ್ನು ತೆರವುಗೊಳಿಸುವ ಆದೇಶ ಹೊರಡಿಸಿದ್ದಾರೆ.ಈ ರೀತಿ ಅಕ್ರಮ ನಿರ್ಮಾಣ ಹಾಗೂ ಕಾಫಿ ತೋಟಗಳನ್ನು ವಸತಿ ಯೋಜನೆ ಹೆಸರಿನಲ್ಲಿ ಸಣ್ಣ ಸಣ್ಣ ತಾಕುಗಳಾಗಿ ( ಜಮೀನಿನ ಭಾಗಗಳು) ನಿರ್ಮಿಸಿ ಭೂ ಪರಿವರ್ತಿಸುವ ಒಂದು ದೊಡ್ಡ ಮಾಫಿಯಾ ಇದರ ಹಿಂದಿದೆ. ಹಿಂದೆ ಕೆಲವು ರಾಜಕಾರಣಿಗಳೂ ಸೇರಿದಂತೆ ಕೆಲವು ಅಧಿಕಾರಿಗಳೂ ಸಹ ಇರುವ ಶಂಕೆ ನಮಗಿದೆ.ಪ್ರಕೃತಿ ಪ್ರೀತಿಸುವ ಹಾಗೂ ಅದರ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಅರಿತಿರುವ ಸಚಿವರಿಂದ ಮಾತ್ರ ಪಶ್ಚಿಮಘಟ್ಟದ ಸಂರಕ್ಷಣೆ ಸಾಧ್ಯ ಎಂದು ಭಾವಿಸುತ್ತಾ, ಸಚಿವರು ಇಟ್ಟಿರುವ ದಿಟ್ಟ ಹೆಜ್ಜೆ ಹಾಗೂ ಕೈಗೊಂಡಿರುವ ದೃಢ ನಿರ್ಧಾರ, ಪಶ್ಚಿಮ ಘಟ್ಟದಂತಹ ಅತೀ ಸೂಕ್ಷ್ಮ ಪ್ರದೇಶವನ್ನು ಉಳಿಸಲು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.ಪೋಟೋ ಪೈಲ್ ನೇಮ್ 5 ಕೆಸಿಕೆಎಂ 3ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶ.