ಮುಕ್ತಿ ಬಾವುಟವನ್ನು 61 ಲಕ್ಷಕ್ಕೆ ಕೂಗಿ ಪಡೆದ ಸಚಿವ ಸುಧಾಕರ್‌

| Published : Mar 27 2024, 01:09 AM IST

ಮುಕ್ತಿ ಬಾವುಟವನ್ನು 61 ಲಕ್ಷಕ್ಕೆ ಕೂಗಿ ಪಡೆದ ಸಚಿವ ಸುಧಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಈ ಬಾರಿಯೂ ಸಚಿವ ಡಿ.ಸುಧಾಕರ್ ಪಾಲಾಗಿದೆ.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇತಿಹಾಸ ಪ್ರಸಿದ್ಧ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಮುಕ್ತಿ ಬಾವುಟ ಈ ಬಾರಿಯೂ ಸಚಿವ ಡಿ.ಸುಧಾಕರ್ ಪಾಲಾಗಿದೆ. ಮಂಗಳವಾರ ನಡೆದ ರಥೋತ್ಸವ ವೇಳೆ ಸಚಿವ ಸುಧಾಕರ್ ಬರೊಬ್ಬರಿ 61 ಲಕ್ಷ ರು.ಗಳಿಗೆ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ಕೂಗಿ ತಮ್ಮದಾಗಿಸಿಕೊಂಡರು. ಕಳೆದ ವರ್ಷವೂ ಸುಧಾಕರ್ ಮುಕ್ತಿ ಬಾವುಟವನ್ನು 55 ಲಕ್ಷ ರು.ಗಳಿಗೆ ಕೂಗಿ ಪಡೆದಿದ್ದರು.

ಸರ್ಕಾರಿ ಸವಾಲು ರು.1 ಕೋಟಿಯಿಂದ ಹರಾಜು ಪ್ರಾರಂಭವಾಯಿತು. ಆರಂಭದಲ್ಲಿ ಹೀರೆಹಳ್ಳಿ ಮಲ್ಲೇಶ್ ರು.5 ಲಕ್ಷಕ್ಕೆ ಮುಕ್ತಿ ಬಾವುಟದ ಹರಾಜು ಕೂಗಿದರು. ನಂತರ ತಿಮ್ಮನಹಳ್ಳಿ ರಾಜಣ್ಣ, ಚಿತ್ರದುರ್ಗದ ಮಹಾಂತೇಶ್, ದಾವಣಗೆರೆಯ ವಜ್ರ ಮಹೇಶ್, ಹೊನ್ನಾಳಿಯ ನಾಗೇಶ್ ಅವರು ಹರಾಜಿನ ಮೊತ್ತ ಏರಿಸುತ್ತಾ ಸಾಗಿದರು. ಕೊನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ 61 ಲಕ್ಷಕ್ಕೆ ಕೂಗಿ ಹರಾಜು ಪ್ರಕ್ರಿಯೆ ಅಂತಿಮಗೊಳಿಸಿದರು. ನಂತರ ದೊಡ್ಡ ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.