ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನವನ್ನ ನೋಡಲು ಆಗಮಿಸಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಕೆಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಫೋಟೋಗೆ ಫೋಸು ಕೊಟ್ಟಿದ್ದು ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನವನ್ನ ನೋಡಲು ಆಗಮಿಸಿದ್ದ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ಕೆಂಬ್ರಿಡ್ಜ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಫೋಟೋಗೆ ಫೋಸು ಕೊಟ್ಟಿದ್ದು ಅಲ್ಲದೆ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಚರ್ಚೆ ನಡೆಸಿದರು.ಸುವರ್ಣ ಸೌಧ, ಅಧಿವೇಶನ ಮತ್ತಿತರ ವಿಷಯವಾಗಿ ವಿದ್ಯಾರ್ಥಿಗಳ ಜೊತೆ ಮಾತಿಗಿಳಿದ ಸಚಿವರು, ಮುಂದೆ ನೀವೂ ಎಂ.ಎಲ್.ಎ ಆಗ್ತೀರಾ ಎಂದು ಕೇಳುತ್ತಿದ್ದಂತೆ ಮಾತಿನ ಗದ್ದಲಕ್ಕಿಳಿದಿದ್ದ ವಿದ್ಯಾರ್ಥಿಗಳು ಥ್ರಿಲ್ ಆದರು. ಯಾರಾದರೂ ಎಂಎಲ್ ಎ ಅಗ್ತಿರಾ ಎಂದು ಕೇಳಿದ ಸಚಿವರ ಪ್ರಶ್ನೆಗೆ ಯಾವೊಬ್ಬ ವಿದ್ಯಾರ್ಥಿಯೂ ಅಗ್ತಿನಿ ಅಂತಾ ಹೇಳಲಿಲ್ಲ. ಯಾಕೆ ನಿಮಗೆ ಯಾರಿಗೂ ಎಂಎಲ್ಎ ಆಗಬೇಕು ಅನಿಸುತ್ತಿಲ್ಲ. ಒಳಗೆ ಹೋಗಿ ಬನ್ನಿ, ಆಗಾಲಾದರೂ ಯಾರಾದರು ಆಗ್ತೇನೆ ಅಂತಾ ಹೇಳಬಹುದು ಎಂದು ವಿದ್ಯಾರ್ಥಿಗಳನ್ನು ಒಳಗೆ ಕಳಿಸಿದರು.
ಹೀಗೆಯೇ ಮಾತು ಮುಂದುವರೆದಾಗ, ನಾವೂ ಆಗಬಹುದಾ ಸರ್ ಎಂದು ವಿದ್ಯಾರ್ಥಿನಿಯೋರ್ವಳು ಕೇಳುತ್ತಿದ್ದಂತೆ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ನಿಗದಿತ ವಯೋಮಿತಿ ನಂತರ ಸಮಾಜದ ಸೇವೆಗಾಗಿ ಜನಪ್ರತಿನಿಧಿ ಆಗಲು ಮುಂದಾಗಿ ಎಂದು ಹೇಳಿ ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನಾಡಿದರು.ಅಲ್ಲಿದ್ದ ಅಧಿಕಾರಿಗಳು ಹಾಗೂ ಮುಖಂಡರಿಗೆ ಇವರು ನಮ್ಮ ಕ್ಷೇತ್ರದಿಂದ ಬಂದಿದ್ದಾರೆ ಎಂದು ಹೆಮ್ಮೆಯಿಂದ ಪರಿಚಯಿಸಿಕೊಟ್ಟರು. ಇದಾದ ಮೇಲೆ ಚಿದ್ಯಾರ್ಥಿಗಳಿಗೆ ಸಂಗೊಳ್ಳಿ ರಾಯಣ್ಣ ಕುರಿತು ವಿವರಿಸಿದರಲ್ಲದೆ, ಅವರ ಸಮಾಧಿ ಇಲ್ಲಿಯೇ ನಂದಗಢದಲ್ಲಿದೆ ನೋಡಿಕೊಂಡು ಬನ್ನಿ ಎಂದರು.
ನಂದಗಡ ಬಳಿ ನಮ್ಮ ಇಲಾಖೆಯಿಂದ ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಮಾಡಿದ್ದೇವೆ . ಅದಿನ್ನು ಉದ್ಘಾಟನೆ ಆಗಿಲ್ಲ. ಆದರೆ ನೀವು ಅಲ್ಲಿಗೆ ಹೋಗುವುದಾದರೆ ನಾನು ನಿಮಗೆ ಅವಕಾಶ ನೀಡಲು ಹೇಳುತ್ತೇನೆ ಎಂದಾಗ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಖುಷಿ. ಮುಗಿಬಿದ್ದು ಸೆಲ್ಫಿ ತೆಗೆಸಿಕೊಂಡರು. ಇದಾದ ಮೇಲೆ ವಿದ್ಯಾರ್ಥಿಗಳಿಗೆ ಶುಭಾಷಯ ಹೇಳಿ ಸಾಗುತ್ತಿದ್ದಂತೆ, ಮುಂದೆ ಮತ್ತೊಂದು ಶಾಲೆಯ ವಿದ್ಯಾರ್ಥಿಗಳು ಬಂದು ನಮ್ಮ ಜೊತೆ ಫೋಟೊ ತೆಗೆಸಿಕೊಳ್ಳಿ ಎಂದಾಗ ಆಯ್ತು ಎಂದು ಅವರೊಂದಿಗೂ ಫೋಟೊ ತೆಗೆಸಿಕೊಂಡರು.ಪಿಎಸ್ ಮಧಸೂದನರಡ್ಡಿ, ಆಪ್ತ ಸಹಾಯಕರಾದ ಮಹೇಶ, ಜಗದೀಶ ಇದ್ದರು.