ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್
ರೈಲ್ವೆ ಸಚಿವ ವಿ ಸೋಮಣ್ಣ ಕುಣಿಗಲ್ ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸ್ವಾಗತ ಮಾಡಿ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.ಹಾಸನ ಕಡೆಯಿಂದ ವಿಶೇಷ ರೈಲಿನಲ್ಲಿ ಬಂದ ಸಚಿವ ವಿ ಸೋಮಣ್ಣ ಹಾಗೂ ಉನ್ನತ ಅಧಿಕಾರಿಗಳ ತಂಡ ಗುರುವಾರ ಸಂಜೆ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದಾಗ ಬಿಜೆಪಿ ಮುಖಂಡ ಡಿ.ಕೃಷ್ಣಕುಮಾರ್ ಹಾಗೂ ಬಿಜೆಪಿ ತಾಲೂಕು ಅಧ್ಯಕ್ಷ ಬಲರಾಮ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಬಿಎನ್ ಜಗದೀಶ್ ಸೇರಿದಂತೆ ಹಲವಾರು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಮನವಿ ಸಲ್ಲಿಸಿದರು. ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ವಿಶೇಷವಾದ ರೈಲು ಸಂಚಾರ, ಕುಣಿಗಲ್ ಪಟ್ಟಣದಲ್ಲಿ ಹಾಳಾಗಿರುವ ರೈಲ್ವೆ ಮೇಲ್ ಸೇತುವೆ ದುರಸ್ತಿ, ತಪೋ ಕ್ಷೇತ್ರ ಕಗ್ಗೆರೆಗೆ ರೈಲ್ವೆ ನಿಲ್ದಾಣ, ಕುಣಿಗಲ್ ಪಟ್ಟಣದ ಜೆಜೆಎಂ ಯೋಜನೆ ಅಡಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವಾರು ಬೇಡಿಕೆಗಳನ್ನು ಸಲ್ಲಿಸಲಾಯಿತು. ಕುಣಿಗಲ್ ನಾಗರಿಕರ ಹಾಗೂ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಸಚಿವ ವಿ.ಸೋಮಣ್ಣ ಆದಷ್ಟು ಬೇಗ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ತಕ್ಷಣ ಮತ್ತು ತಿರುಪತಿ ಮಾರ್ಗವಾಗಿ ಹೊಸ ರೈಲನ್ನು ಆರಂಭಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್, ಅಧ್ಯಕ್ಷ ಬಲರಾಮ, ಜೆಡಿಎಸ್ ತಾಲೂಕು ಅಧ್ಯಕ್ಷ ಬಿಎನ್ ಜಗದೀಶ್ ಹಾಗೂ ರೈಲ್ವೆ ಅಧಿಕಾರಿಗಳಾದ ಕೃಷ್ಣಾರೆಡ್ಡಿ, ರಾಕೇಶ್ ಶರ್ಮಾ, ಯೋಗೇಶ್, ಸಂತೋಷ್, ಕುಮಾರ್, ರೈಲ್ವೆ ಕಾರ್ಮಿಕರ ಸಂಘದ ಅಧ್ಯಕ್ಷ ಗಂಗಾಧರ್, ಕಾರ್ಯದರ್ಶಿ ವೆಂಕಟೇಶ್, ಇತರರು ಇದ್ದರು.