ಇಂಡಿಯನ್ ಸುಲ್ತಾನ್ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಅಜ್ಜು ಬೇಪಾರಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಅವರು ಮತಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ಸಂಬಂಧ ಹೊಂದಿದ್ದು, ಸಮಸ್ಯೆ ಹೇಳಿಕೊಂಡು ಬಂದವರಿಗೆ ತಕ್ಷಣ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.

ರೋಣ: ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಪಟ್ಟಣದ 19ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ರಕ್ತದಲ್ಲಿ ಪತ್ರ ಬರೆದು ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಿದರು. ರಕ್ತದಿಂದ ಬರೆದ ಪತ್ರಗಳನ್ನು ಭಾನುವಾರ ಅಂಚೆ ಮೂಲಕ ರವಾನಿಸಲಾಯಿತು.

ಈ ವೇಳೆ ಇಂಡಿಯನ್ ಸುಲ್ತಾನ್ ಸ್ಪೋರ್ಟ್ಸ್‌ ಕ್ಲಬ್ ಅಧ್ಯಕ್ಷ ಅಜ್ಜು ಬೇಪಾರಿ ಮಾತನಾಡಿ, ಶಾಸಕ ಜಿ.ಎಸ್. ಪಾಟೀಲ ಅವರು ಮತಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ರಾಜಕೀಯವಾಗಿ ಮಾತ್ರವಲ್ಲದೆ, ಭಾವನಾತ್ಮಕ ಸಂಬಂಧ ಹೊಂದಿದ್ದು, ಸಮಸ್ಯೆ ಹೇಳಿಕೊಂಡು ಬಂದವರಿಗೆ ತಕ್ಷಣ ಸ್ಪಂದಿಸುತ್ತಾ ಬಂದಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದಾರೆ. ಸದಾ ಅಭಿವೃದ್ಧಿಪರ ಚಿಂತನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಗೊಂಡಿದ್ದಾರೆ‌. ಈಗಾಗಲೇ 5 ಬಾರಿ ಬಹುಮತದ ಗೆಲುವು ಸಾಧಿಸಿ, ಕಾಂಗ್ರೆಸ್‌ಗೆ, ಸರ್ಕಾರಕ್ಕೆ ಬಲ ತುಂಬುತ್ತಾ ಬಂದಿದ್ದಾರೆ. ರಾಜಕೀಯ ಜೀವನದ ಮುಸ್ಸಂಜೆಯಲ್ಲಿರುವ ಶಾಸಕ ಜಿ.ಎಸ್. ಪಾಟೀಲ ಅವರನ್ನು ಸಚಿವರನ್ನಾಗಿ ನೇಮಕ ಮಾಡಲೇಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಸನಗೌಡ ಹಾವನಗೌಡ್ರ, ದುದೂಸಾಬ ಇಟಗಿ, ಸಂಗಪ್ಪ ವಕ್ರದ, ಮೌಲಾನಬಿ ತುಗ್ಗಲಡೋಣಿ, ಬೇಗಂಬೀ ಮಾನ್ವಿ, ಇಬ್ರಾಹಿಂ ಜಮಾದಾರ, ದದ್ದು ಜಮಾದಾರ, ಸೈಯದ್ ಬೇಪಾರಿ, ಚಾಂದಸಾಬ್ ನಾಲಬಂದ, ಈರಪ್ಪ ಹೊಸಳ್ಳಿ, ಉಸ್ಮಾನ ಮಕಾನದಾರ, ರಿಜ್ವಾನ್ ದಾವಲಖಾನ್, ದಸ್ತಗೀರ ಬಳ್ಳಾರಿ, ಬಸಯ್ಯ ಅಂಗಡಿ, ರೆಹಮಾನ್ ಸಾಬ್ ಕೋಲಕಾರ ಮುಂತಾದವರಿದ್ದರು.