ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಕೇಸ್

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣ ಮಾಸುವ ಮುನ್ನವೇ ಅಪ್ರಾಪ್ತ ದಲಿತ ಯುವಕನ ಮೇಲೆ ಮುಸ್ಲಿಂ ಯುವಕರ ಗುಂಪು ದಾಳಿ ನಡೆಸಿ ಹಲ್ಲೆ ನಡೆಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಮುಂದುವರಿದಿದೆ. ಗುರುವಾರ ಮಧ್ಯಾಹ್ನ 2.30ರ ಸುಮಾರಿಗೆ ಶಾಲೆ ಮುಗಿಸಿಕೊಂಡು ದಲಿತ ಯುವಕ ನೊಂದಿಗೆ ಮುಸ್ಲಿಂ ಯುವತಿ ನಗರದ ಸಂತೆ ಮೈದಾನದ ಬಳಿ ಬೈಕ್‌ನಲ್ಲಿ ಹೋಗುವಾಗ ಇಬ್ಬರು ಮುಸ್ಲಿಂ ಯುವಕರು ಅಡ್ಡಗಟ್ಟೆ ಬೆದರಿಕೆ ಹಾಕಿದ ಘಟನೆ ನಡೆದಿದೆ.

ಸುಮಾರು ಎಂಟು ಮಂದಿ ಮುಸ್ಲಿಂ ಯುವಕ ಗುಂಪು ಯುವಕ, ಯುವತಿಯ ಬಳಿ ಪ್ರಶ್ನಿಸುವುದಕ್ಕೆ ಆರಂಭಿಸಿದ್ದಾರೆ. ಈ ವೇಳೆ ಮುಸ್ಲಿಂ ಯುವತಿ ಭಯಭೀತಿಗೊಂಡು ಅಲ್ಲಿಂದ ತೆರಳಿದ್ದಾಳೆ. ಈ ವೇಳೆ ಮುಸ್ಲಿಂ ಯುವತಿಯೊಂದಿಗೆ ಇರುವುದಕ್ಕೆ ಮುಸ್ಲಿಂ ಯುವಕರ ಗುಂಪು ದಲಿತ ಯುವಕನ ಮೇಲೆ ನೈತಿಕ ಪೊಲೀಸ್‌ ಗಿರಿ ನಡೆಸಿ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ.ಮುಸ್ಲಿಂ ಯುವತಿ ಹಾಗೂ ದಲಿತ ಯುವಕ ಎರಡೂ ಕುಟುಂಬಸ್ಥರು ಪರಸ್ಪರ ಪರಿಚಿತರು, ಯುವಕ, ಯುವತಿ ಸ್ನೇಹಿತರಾಗಿದ್ದು, ಇನ್ನೂ ಅಪ್ರಾಪ್ತರಾಗಿದ್ದಾರೆ.ದೊಂಬಿ, ಗಲಾಟೆ ಹಾಗೂ ಅಟ್ರಾಸಿಟಿ ಕೇಸ್ಘಟನೆಗೆ ಸಂಬಂಧಿಸಿದಂತೆ ಒಟ್ಟು ಎಂಟು ಮಂದಿ ವಿರುದ್ಧ ವಿವಿಧ ಸೆಕ್ಸನ್‌ ಅಡಿ ಪ್ರಕರಣ ದಾಖಲಿಸಲಾಗಿದೆ. ದೂರು ಕೇಳಿ ಬರುತ್ತಿದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ವರಿಷ್ಠಾಧಿಕಾರಿ ನಗರ ಪೊಲೀಸ್‌ ಠಾಣೆಗೆ ಆಗಮಿಸಿದ್ದರು.---ಬಾಕ್---

ದಲಿತ ಯುವಕನ ತಾಯಿ ಮೇಲೆ ಮುಗಿದಿದ್ದ ಮುಸ್ಲಿಂ ಗುಂಪು


ದಲಿತ ಯುವಕ ತಾಯಿ ಪಲ್ಲವಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ ಬಳಿಕ ಠಾಣೆ ಮುಂಭಾಗದಲ್ಲಿ ಘಟನೆ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡಲು ಮುಂದಾದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಗುಂಪು ಮಹಿಳೆ ಮೇಲೆ ಮುಗಿಬಿದ್ದ ಘಟನೆ ನಡೆಯಿತು. ಈ ವೇಳೆ ಎಚ್ಚೆತ್ತ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಜಯಕುಮಾರ್‌, ಗುಂಪಿನ ವಿಡಿಯೋ ಚಿತ್ರೀಕರಣ ಮಾಡಿ, ಎಲ್ಲರ ಮೇಲೂ ಪ್ರಕರಣ ದಾಖಲಿಸೋಣ ಎಂದು ಸಿಬ್ಬಂದಿಗೆ ಸೂಚನೆ ನೀಡುತ್ತಿದಂತೆ ಸ್ಥಳದಿಂದ ಇಡೀ ಗುಂಪು ಜಾಗ ಖಾಲಿ ಮಾಡಿದೆ.

---ಬಾಕ್ಸ್‌---

ಹಿಂದೂ ಹುಡುಗ, ಮುಸ್ಲಿಂ ಹುಡುಗಿಯನ್ನು ಡ್ರಾಪ್‌ ನೀಡಲು ಹೋಗಿದ್ದೆ, ತಪ್ಪಾಗಿದೆ

ಆ ಹುಡುಗಿ ನಮಗೆ ಗೊತ್ತಿರುವ ಹುಡುಗಿಯಾಗಿದ್ದು, ನಮ್ಮ ಮನೆಗೆ ಬರುತ್ತಿದ್ದಳು. ಹುಷಾರಿಲ್ಲ ಎಂದಿದ್ದಕ್ಕೆ ಆಕೆಯನ್ನ ಮನೆಗೆ ಬಿಡಲು ನಮ್ಮ ಮಗ ಹೋಗಿದ್ದನ್ನು. ಆಗ ರಸ್ತೆ ಮಧ್ಯೆ 30 ಜನ ಅಡ್ಡ ಹಾಕಿ ಪ್ರಶ್ನೆ ಮಾಡುತ್ತಿದ್ದರು. ರಸ್ತೆಯಲ್ಲಿ ಬೇಡ ಅಂತ ನಾನೇ ಮಾತನಾಡೋದಕ್ಕೆ ಮನೆಗೆ ಕರೆತಂದೆ. ಆಗ ಮನೆ ಬಳಿ 60 ಜನ ಹುಡುಗರು ಬಂದಿದ್ದರು. ಅವರಲ್ಲಿ 2-3 ಜನ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದರು. ಹಿಂದೂ ಹುಡುಗ, ಮುಸ್ಲಿಂ ಹುಡುಗಿಯನ್ನು ಬೈಕಿನಲ್ಲಿ ಡ್ರಾಪ್ ಮಾಡಿದ್ದೆ ಇಷ್ಟಕ್ಕೆಲ್ಲಾ ಕಾರಣ. ಹುಡುಗ ಹಾಗೂ ಹುಡುಗಿ ಇಬ್ಬರದು ತಪ್ಪಿಲ್ಲ. ಆದರೆ, ಮಧ್ಯದಲ್ಲಿ ಇರುವವರು ಸಣ್ಣದನ್ನು ದೊಡ್ಡದ್ದು ಮಾಡುತ್ತಿದ್ದಾರೆ ಎಂದು ದಲಿತ ಯುವಕನ ತಾಯಿ ಪಲ್ಲವಿ ವಿವರಿಸಿದ್ದಾರೆ.-- ಬಾಕ್ಸ್‌...

ನೈತಿಕ ಪೊಲೀಸ್‌ ಗಿರಿ ಸಹಿಸಲ್ಲ: ಎಸ್‌ಪಿ

ನಗರದಲ್ಲಿ ನೈತಿಕ ಪೊಲೀಸ್‌ ಗಿರಿ ನಡೆಸಿದರೆ ಸಹಿಸಲ್ಲ. ತಲೆ ಮರೆಸಿಕೊಂಡವರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್‌ ದಯಾಮ ತಿಳಿಸಿದ್ದಾರೆ.

ಪ್ರಕರಣದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಇದು ಮೇಲ್ನೋಟಕ್ಕೆ ನೈತಿಕ ಪೊಲೀಸ್ ಗಿರಿ ಎಂದು ಕಂಡು ಬರುತ್ತಿದೆ. ಬಾಲಕ‌, ಬಾಲಕಿ ಅಪ್ರಾಪ್ತರು, ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಇಬ್ಬರು ಯುವಕರು ಬಂದು ಬೈಕ್ ಅಡ್ಡ ಹಾಕಿ ದ್ದಾರೆ. ಇನ್ನೂ ಕೆಲವರು ಬೆದರಿಕೆ ಹಾಕಿದ್ದಾರೆ. ಅಪ್ರಾಪ್ತ ಬಾಲಕನ‌ ಮನೆಗೆ ತೆರಳಿ ಕೆಲವರು ಹಲ್ಲೆ ಮಾಡಲು ‌ಯತ್ನಿಸಿದ್ದಾರೆ. ತನಿಖೆ ನಡೆಸಲಾಗುತ್ತಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ರಾತ್ರಿ, ಹಗಲು 2 ಪಾಳಿಯಲ್ಲಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ರಂಜಾನ್ ಇರುವುದರಿಂದ ಸಂಪೂರ್ಣ ಭದ್ರತೆ ಮಾಡಲಾಗಿದೆ. ಯಾವುದೇ ನೈತಿಕ ಪೊಲೀಸ್ ಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.