ಸಾರಾಂಶ
ಅಪ್ರಾಪ್ತೆಯನ್ನು ಕೆಲ್ವಿನ್ ಜೂನ್ ೨೩ರಂದು ಇನ್‌ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದ. ಪರಿಚಯ ಮಾಡಿದ ನಾಲ್ಕನೇ ದಿನದಲ್ಲಿ ಭೇಟಿಯಾಗುವ ಉದ್ದೇಶದಲ್ಲಿ ಆಕೆಯ ಮನೆ ಬಳಿಗೆ ಕಾರಿನಲ್ಲಿ ಬಂದಿದ್ದ. ಬಳಿಕ ಅಪ್ರಾಪ್ತೆಯನ್ನು ಕರೆದೊಯ್ದು ಕುತ್ತಾರು ಸಮೀಪ ಲಾಡ್ಜ್‌ವೊಂದರಲ್ಲಿ ರೂಮ್ ಕೇಳಿದ್ದಾನೆ. ಆದರೆ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ರೂಂ ಕೊಟ್ಟಿರಲಿಲ್ಲ. ಆದ್ದರಿಂದ ಆರೋಪಿ ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯ ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ.
ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ನಾಲ್ಕೇ ದಿನದಲ್ಲಿ ಕೃತ್ಯ
ಉಳ್ಳಾಲ: ಇನ್‌ಸ್ಟಾಗ್ರಾಂನಲ್ಲಿ ನಾಲ್ಕು ದಿನಗಳ ಹಿಂದೆ ಅಪ್ರಾಪ್ತೆಯ ಪರಿಚಯ ಮಾಡಿಕೊಂಡ ಯುವಕನೋರ್ವ ಆಕೆಯನ್ನು ಪುಸಲಾಯಿಸಿ ಕರೆದೊಯ್ದು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿರುವ ಘಟನೆ ಶುಕ್ರವಾರ ಸಂಜೆ ಬೆಳಕಿಗೆ ಬಂದಿದೆ.ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಡ್ಯಾರ್ ವಳಚ್ಚಿಲ್ ನಿವಾಸಿ ಕೆಲ್ವಿನ್ (೨೪) ಎಂಬಾತನನ್ನು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.ಅಪ್ರಾಪ್ತೆಯನ್ನು ಕೆಲ್ವಿನ್ ಜೂನ್ ೨೩ರಂದು ಇನ್‌ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದ. ಪರಿಚಯ ಮಾಡಿದ ನಾಲ್ಕನೇ ದಿನದಲ್ಲಿ ಭೇಟಿಯಾಗುವ ಉದ್ದೇಶದಲ್ಲಿ ಆಕೆಯ ಮನೆ ಬಳಿಗೆ ಕಾರಿನಲ್ಲಿ ಬಂದಿದ್ದ. ಬಳಿಕ ಅಪ್ರಾಪ್ತೆಯನ್ನು ಕರೆದೊಯ್ದು ಕುತ್ತಾರು ಸಮೀಪ ಲಾಡ್ಜ್‌ವೊಂದರಲ್ಲಿ ರೂಮ್ ಕೇಳಿದ್ದಾನೆ. ಆದರೆ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿ ರೂಂ ಕೊಟ್ಟಿರಲಿಲ್ಲ. ಆದ್ದರಿಂದ ಆರೋಪಿ ಸೋಮೇಶ್ವರ ಸಮುದ್ರ ತೀರದಲ್ಲಿ ಕಾರೊಳಗಡೆಯೇ ಅತ್ಯಾಚಾರವೆಸಗಿದ್ದಾನೆ. ನಂತರ ಆಕೆಯ ಮನೆಯವರೆಗೂ ಕಾರಿನಲ್ಲಿ ಬಿಟ್ಟುಹೋಗಿದ್ದಾನೆ.ಬೆಳಗ್ಗೆ ಮತ್ತು ಸಂಜೆ ಕಾರಿನಲ್ಲಿ ಅಪ್ರಾಪ್ತೆಯನ್ನು ಕರೆದೊಯ್ಯುವುದನ್ನು ಮನೆ ಸಮೀಪದವರು ಗಮನಿಸಿದ್ದರು. ರಾತ್ರಿ ಹೊತ್ತಲ್ಲಿ ಅಪ್ರಾಪ್ತೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರ ಬಳಿ ಪರಿಶೀಲಿಸಿದಾಗ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿ ಕೆಲ್ವಿನ್, ಪೈಂಟಿಂಗ್ ವೃತ್ತಿಯನ್ನು ನಡೆಸುತ್ತಿದ್ದಾನೆ.