ಸಾರಾಂಶ
ಶಿಗ್ಗಾಂವಿ: ಬಸವ ತತ್ವ ಆಧಾರದ ಮೇಲೆ ದೀನದಲಿತರ, ಕಡು ಬಡವರು, ರೈತರು, ಸಣ್ಣ ಸಣ್ಣ ಸಮಾಜದ ಕಾರ್ಯಕರ್ತರು ಮುಖ್ಯವಾಹಿನಿಗೆ ಬರಬೇಕಾದರೆ ಅದು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ಪಟ್ಟಣದಲ್ಲಿ ಶಿಗ್ಗಾಂವಿ ಸವಣೂರ ಕ್ಷೇತ್ರದ ಆದಿಜಾಂಬವ ಜನಾಂಗದ ವತಿಯಿಂದ ನಡೆದ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ೩೦ ವರ್ಷಗಳ ನಂತರ ನಮಗೆ ಕ್ಷೇತ್ರದಲ್ಲಿ ಸ್ವಾತಂತ್ರ‍್ಯ ಸಿಕ್ಕಿದೆ ಎಂದರು. ಸುಳ್ಳು ಬಂಡವಾಳ ಮಾಡಿಕೊಂಡು ಜಾತಿ, ಒಗ್ಗಟ್ಟು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ತಾಕತ್ ಇದ್ದರೆ ವಕ್ಫ್ ಕಾಯ್ದೆಯನ್ನು ಕೇಂದ್ರ ಸರಕಾರ ರದ್ದು ಮಾಡಲಿ ಎಂದು ಸವಾಲೆಸೆದರು. ನಮ್ಮ ಸಮಾಜದ ಸದಸ್ಯರಿಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅವಕಾಶ ಮಾಡಿ ಕೊಡಿ ಹಾಗೂ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೆ ಬಂದಾಗ ಕೆಲಸವನ್ನು ಮಾಡಿಕೊಡಬೇಕು ಎಂದು ಜೋಡೆತ್ತಿನ ಹತ್ತಿರ ಮನವಿ ಮಾಡಿದರು. ಶಾಸಕ ಯಾಸೀರಖಾನ ಪಠಾಣ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನವನ್ನು ರಚಿಸದೇ ಇದ್ದರೇ ಇಂದು ಜನ ಸಾಮಾನ್ಯ ಹಾಗೂ ರೈತ ಕುಟುಂಬದಿಂದ ಬಂದಂತಹ ನಾನು ಶಾಸಕನಾಗಲು ಸಂವಿಧಾನವೇ ಕಾರಣ. ಅಲ್ಲದೇ ನಮ್ಮ ಸರಕಾರದ ಪಂಚ ಗ್ಯಾರಂಟಿಗಳು ನನ್ನ ಗೆಲುವಿಗೆ ಶ್ರೀರಕ್ಷೆಯಾಗಿವೆ. ಕ್ಷೇತ್ರದ ಪ್ರತಿಯೊಂದು ದೀನ ದಲಿತರ ಓಣಿಗಳಲ್ಲಿ ಸಮಗ್ರ ಅಭಿವೃದ್ಧಿ ಹಾಗೂ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆ ಮಾಡುವುದು ಹಾಗೂ ಉಳಿದ ಸಣ್ಣ ಸಣ್ಣ ಸಮಾಜದ ಅಭಿವೃದ್ಧಿಯನ್ನು ಅಧಿವೇಶನದ ಬಳಿಕ ಮಾಡಲು ಸಂಕಲ್ಪ ಮಾಡಿದ್ದೇನೆ ಎಂದರು. ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಮಾತನಾಡಿ, ಸರ್ವ ಜನಾಂಗದ ಅಭಿವೃದ್ಧಿಗೋಸ್ಕರ ನೀಡಿದ ಸಂವಿಧಾನ ವಿಶ್ವದಲ್ಲಿ ಶ್ರೇಷ್ಠ ಸಂವಿಧಾನ ಹಾಗೂ ಸಂವಿಧಾನ ರಚಿಸಿ ಬಡವರ ಪರವಾಗಿ ಅನೇಕ ಕೆಲಸಗಳನ್ನು ಮಾಡಿ ದೀನ ದಲಿತರ, ಕಡು ಬಡವರ ಸಮಗ್ರ ಅಭಿವೃದ್ಧಿಗೆ ಸಂವಿಧಾನ ಕಾರಣವಾಗಿದೆ. ಆ ನಿಟ್ಟಿನಲ್ಲಿ ಕಾಂಗ್ರೆಸ ಸರಕಾರ ಬಡವರ ಪಾಲಿಗೆ ಕಾಮಧೇನು ಆಗಿದೆ. ವಿಶ್ವದಲ್ಲಿ ಭಾಗ್ಯಗಳ ಸರದಾರ ಯಾರಾದರೂ ಇದ್ದರೆ ಅದು ಸಿಎಂ ಸಿದ್ದರಾಮಯ್ಯ ಎಂದರು. ಮುಖಂಡ ಮಂಜುನಾಥ ತಿಮ್ಮಾಪೂರ, ಬಿ.ಸಿ.ಪಾಟೀಲ, ಪ್ರೇಮಾ ಪಾಟೀಲ, ವಸಂತಾ ಬಾಗೂರ, ಮಲ್ಲಮ್ಮ ಸೋಮನಕಟ್ಟಿ, ಭೀಮಣ್ಣಾ ಹೊಟ್ಟುರ, ಬಸವರಾಜ, ಯಲ್ಲಪ್ಪ ಹರಿಜನ, ಸುರೇಶ ಹರಿಜನ ಸೇರಿದಂತೆ ಶೇಖಪ್ಪ ಮಣಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))