ಜಾಮೀಯಾ ಮಸೀದಿಯು ವಕ್ಫ್ ಬೋರ್ಡ್ ಗೆ ಸೇರಿದ್ದರೂ, ಮಸೀದಿಗೆ ಸೇರಿರುವ 50 ಅಂಗಡಿಗಳ ಬಾಡಿಗೆ ಪಡೆದು ನಕಲಿ ರಸೀದಿಗಳನ್ನು ನೀಡಿರುವುದಲ್ಲದೆ ಬಾಡಿಗೆದಾರರಿಗೆ ಬೇರೆ ಬಾಬತ್ತಿನ ರಸೀದಿಗಳನ್ನು ನೀಡುವ ಮೂಲಕ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ ಲಕ್ಷಾಂತರ ರುಪಾಯಿಗಳ ಅವ್ಯವಹಾರ ನಡೆಸಿದ್ದು,ಇದಕ್ಕೆ ಜಿಲ್ಲಾ ವಕ್ಫ್ ಬೋರ್ಡ್ ಸಿ.ಇ.ಓ ಶಮ್ಸ್ ಬೆಂಬಲ ಇದೆ.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅವ್ಯವಹಾರದಲ್ಲಿ ಶಾಮೀಲಾಗಿರುವುದರಿಂದ ನಗರ ಬಾರ್‌ಲೈನ್‌ನಲ್ಲಿರುವ ಜಾಮೀಯಾ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ ಷಾ ಅಲಿ ಅವರಿಂದ ಲಕ್ಷಾಂತರ ರು.ಗಳ ಅವ್ಯವಹಾರ ನಡೆದಿದೆ ಎಂದು ಮುಸ್ಲಿಂ ಅಲ್ಪಸಂಖ್ಯಾತರ ಮುಖಂಡರು ಆರೋಪಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಾಮೀಯಾ ಮಸೀದಿಯು ವಕ್ಫ್ ಬೋರ್ಡ್ ಗೆ ಸೇರಿದ್ದರೂ, ಮಸೀದಿಗೆ ಸೇರಿರುವ 50 ಅಂಗಡಿಗಳ ಬಾಡಿಗೆ ಪಡೆದು ನಕಲಿ ರಸೀದಿಗಳನ್ನು ನೀಡಿರುವುದಲ್ಲದೆ ಬಾಡಿಗೆದಾರರಿಗೆ ಬೇರೆ ಬಾಬತ್ತಿನ ರಸೀದಿಗಳನ್ನು ನೀಡುವ ಮೂಲಕ ಮಸೀದಿಯ ಸ್ವಯಂ ಘೋಷಿತ ಅಧ್ಯಕ್ಷ ಲಕ್ಷಾಂತರ ರುಪಾಯಿಗಳ ಅವ್ಯವಹಾರ ನಡೆಸಿದ್ದು,ಇದಕ್ಕೆ ಜಿಲ್ಲಾ ವಕ್ಫ್ ಬೋರ್ಡ್ ಸಿ.ಇ.ಓ ಶಮ್ಸ್ ಬೆಂಬಲ ಇದೆ ಎಂದು ಆರೋಪಿಸಿದರು.

ಮುಖಂಡ ಸಗೀರ್ ಸೇಠ್ ಮಾತನಾಡಿ, ಪ್ರಸ್ತುತ ಮಸೀದಿಯಲ್ಲಿ ಯಾವುದೇ ಸಮಿತಿ ಇಲ್ಲದಿದ್ದರೂ ಮಸೀದಿಯನ್ನು ವಕ್ವ್ ಬೋರ್ಡ್ ವಶಕ್ಕೆ ಪಡೆಯುವಂತೆ ಆದೇಶ ಇದ್ದರೂ ಸಹ ಷಾ ಅಲಿ ನಾನೇ ಅಧ್ಯಕ್ಷ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಕಳೆದ ಐದು ವರ್ಷಗಳಿಂದ ಐವತ್ತು ಅಂಗಡಿಗಳ ಬಾಡಿಗೆ ಪಡೆಯುತ್ತಿದ್ದು ಸಮುದಾಯಕ್ಕೆ ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ ಮತ್ತು ಅಭಿವೃದ್ಧಿಪಡಿಸಿಲ್ಲ. ಇದರ ಬಗ್ಗೆ ರಾಜ್ಯ ವಕ್ಫ್ ಸಚಿವ ಬಿ.ಜಡ್. ಜಮೀರ್ ಅಹ್ಮದ್ ರವರಿಗೆ ದೂರು ಸಲ್ಲಿಸಿದ್ದು,ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ವಕ್ಫ್ ಮಂಡಳಿಗೆ ಪತ್ರ ಬರೆದಿದ್ದಾರೆ ಆದರೆ ಏನೂ ಪ್ರಯೋಜನ ಆಗಿಲ್ಲ ಎಂದು ದೂರಿದರು.ಜಿಲ್ಲಾ ವಕ್ಫ ಮಂಡಳಿಯ ಸಿ.ಇ.ಓ ಮಾಜ್ ಉದ್ದೀನ್ ಸ್ವಯಂ ಘೋಷಿತ ಅಧ್ಯಕ್ಷರಿಂದ ಲೆಕ್ಕ ಪತ್ರಗಳನ್ನು ಪಡೆಯಲು ವಿಫಲರಾಗಿದ್ದು ಕಳೆದ ಐದು ವರ್ಷಗಳಿಂದ ಬದಲಾಣೆ ಮಾಡುವಂತೆ ಹಾಗೂ ಆಡಳಿತ ಅಧಿಕಾರಿಯನ್ನು ನೇಮಿಸುವಂತೆ ಸ್ಥಳೀಯ ಜನತೆ ಹೋರಾಟ ನಡೆಸುತ್ತಿದ್ದಾರೆ. ಮಸೀದಿಗೆ ಆಡಳಿತ ಅಧಿಕಾರಿಯನ್ನು ತಕ್ಷಣ ನೇಮಿಸಬೇಕು,ಪ್ರಸ್ತುತ ಸ್ವಯಂ ಘೋಷಿತ ಅಧ್ಯಕ್ಷರ ಬಗ್ಗೆ ತನಿಖೆ ನಡೆಸಬೇಕು,ಲೆಕ್ಕ ಪತ್ರಗಳ ಪರಿಶೀಲನೆ ಮಾಡಿ ಆಗಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ದುರುಪಯೋಗ ಪಡಿಸಿಕೊಂಡಿರು ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.ಒಂದು ವಾರದ ಒಳಗೆ ಸಮಸ್ಯೆಯನ್ನು ವಕ್ಫ್ ಬೋರ್ಡ್ ಅಧಿಕಾರಿಗಳು ಬಗೆಹರಿಸದಿದ್ದರೆ ಜಿಲ್ಲಾ ವಕ್ಫ್‌ ಕಚೇರಿಗೆ ಬೀಗ ಹಾಕಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡರಾದ ಸೈಯದ್ ಫಕ್ರೂದೀನ್, ನೂರ್ ಅಹ್ಮದ್, ಏಜಾಜ್ ಅಹ್ಮದ್, ಎಲ್.ಮುಷೀರ್ ಅಹ್ಮದ್, ಅಬ್ದುಲ್ ಬಷೀರ್, ಮಹಮೊಬ್ ಪಾಷ, ಸಲೀಮ್ ಅಹ್ಮದ್, ಮೊಹಮ್ಮದ್ ಮುಷೀರ್, ಮಹಮ್ಮದ್ ಪಾಷ, ಸೈಯದ್ ಅಫ್ಸರ್ ಇದ್ದರು.