ಎಸ್ಸಿ- ಎಸ್ಟಿ ಅನುದಾನ ದುರ್ಬಳಕೆ: ೯ರಂದು ಶಾಸಕರ ಮನೆ ಎದುರು ಪ್ರತಿಭಟನೆ

| Published : Aug 08 2024, 01:38 AM IST

ಎಸ್ಸಿ- ಎಸ್ಟಿ ಅನುದಾನ ದುರ್ಬಳಕೆ: ೯ರಂದು ಶಾಸಕರ ಮನೆ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಕೋಮುವಾದಿ ಭ್ರಷ್ಟ ಪಕ್ಷವೆಂದು ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ಬೆಂಬಲಿಸಿದ್ದೇವೆ. ಆದರೆ ನಮಗೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ.

ಕನ್ನಡ ಪ್ರಭವಾರ್ತೆ ಮಾಲೂರು

‘ನಮ್ಮ ಮತ ನಮ್ಮ ತುತ್ತು ಬೇಕಾ’ ಎಂಬ ಶೀರ್ಷಿಕೆಯಡಿ ಜಿಲ್ಲೆಯ ಎಸ್ಸಿ- ಎಸ್ಟಿ ಶಾಸಕರ ನಿವಾಸದ ಬಳಿ ಕೋಲಾರ ಜಿಲ್ಲಾ ದಲಿತರ ಪ್ರತಿರೋಧ ಪಡೆ ವತಿಯಿಂದ ಪ್ರತಿಭಟನೆ ನಡೆಸಿ ಸದನದಲ್ಲಿ ದಲಿತರ ಪರ ಧ್ಚನಿ ಎತ್ತಲು ಒತ್ತಾಯಿಸಲಾಗುವುದು ಎಂದು ಅಂಬೇಡ್ಕರ್‌ ವಾದ ಜಿಲ್ಲಾ ಸಂಚಾಲಕ ಲಕ್ಕೂರ್ ವೆಂಕಟೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಸ್ ಸಿಪಿ, ಟಿಎಸ್‌ಪಿ ೩೯ ಸಾವಿರ ಕೋಟಿ ರು.ಗಳ ದುರ್ಬಳಕೆ ಮಾಡಿಕೊಂಡಿರುವುದನ್ನು ಖಂಡಿಸಿ ಜಿಲ್ಲೆಯಲ್ಲಿ ಪ್ರತಿರೋಧ ಪಡೆ ವತಿಯಿಂದ ಹಿರಿಯ ದಲಿತ ಮುಖಂಡ ಎನ್.ವೆಂಕಟೇಶ್ ಗಡ್ಡಂ, ಬರಹಗಾರ ಕೋಟಿಗಾನಹಳ್ಳಿ ರಾಮಯ್ಯ ಅವರ ನೇತೃತ್ವದಲ್ಲಿ ‘ನಮ್ಮ ಮತ ನಮ್ಮ ತುತ್ತು ಬೇಕಾ’ ಎಂಬ ಶೀರ್ಷಿಕೆಯಡಿ ಜಿಲ್ಲೆಯ ಎಸ್ಸಿ-ಎಸ್ಟಿ ಶಾಸಕರ ನಿವಾಸದ ಬಳಿ ಪ್ರತಿಭಟನೆ ನಡೆಸಿ ಸದನದಲ್ಲಿ ಧ್ವನಿ ಎತ್ತಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಬಿಜೆಪಿ ಕೋಮುವಾದಿ ಭ್ರಷ್ಟ ಪಕ್ಷವೆಂದು ವಿಧಾನಸಭಾ ಚುನಾವಣೆಯಲ್ಲಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಾಂಗದವರು ಬೆಂಬಲಿಸಿದ್ದೇವೆ. ಆದರೆ ನಮಗೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಎಸ್ ಸಿಪಿ, ಟಿಎಸ್‌ಪಿ ಪರಿಶಿಷ್ಟರ ೩೯ ಸಾವಿರ ಕೋಟಿ ರು. ಹಣವನ್ನು ಕಾಂಗ್ರೆಸ್ ಸರ್ಕಾರವು ದುರ್ಬಳಕೆ ಮಾಡಿಕೊಂಡಿದ್ದು, ಇದರ ಬಗ್ಗೆ ಸದನದಲ್ಲಿ ಧ್ವನಿಯತ್ತಿ ಸಮುದಾಯದವರಿಗೆ ಸರ್ಕಾರದಿಂದ ಬರುವ ಪಾಲು ಹಿಂದಿರುಗಿಸಲು ಹಿರಿಯ ದಲಿತ ಮುಖಂಡರಾದ ಎನ್.ವೆಂಕಟೇಶ ಹಾಗೂ ಕೋಟಿಗಾನಹಳ್ಳಿ ರಾಮಯ್ಯ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ದಲಿತರ ಪ್ರತಿರೋಧ ಪಡೆಯನ್ನು ರಚಿಸಿ ‘ನಮ್ಮ ಮತ ನಮ್ಮ ತುತ್ತು ಬೇಕಾ’ ಎಂಬ ಶೀರ್ಷಿಕೆ ಅಡಿ ಎಸ್‌ಸಿ-ಎಸ್‌ಟಿ ಶಾಸಕರ ನಿವಾಸದ ಬಳಿ ಆಗಸ್ಟ್ ೯ ರಂದು ಬೆಳಗ್ಗೆ ೧೧ ಕ್ಕೆ ಏಕಕಾಲದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮುನಿನಾರಾಯಣ, ಮುಖಂಡರಾದ ಸುರೇಶ್, ಚಂದ್ರಕಾಲ, ಬರಗೂರು ಶಂಕರ್, ತಿಮ್ಮರಾಜು, ಮುನಿಯಮ್ಮ, ಜ್ಯೋತಿ, ಕಾಂತರಾಜು, ಹುಲಿಮಂಗಲ ಶಂಕರ್, ಚಿನ್ನಮ್ಮ, ರಮಾದೇವಿ, ಎಲ್ಲಪ್ಪ, ಮಂಜಮ್ಮಇನ್ನಿತರರು ಹಾಜರಿದ್ದರು.