ಸಾರಾಂಶ
Misconduct at JJM: Demand for action against engineer
-ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ಶಹಾಪುರದಲ್ಲಿ ಪ್ರತಿಭಟನೆ, ಮನವಿ
-----ಕನ್ನಡಪ್ರಭ ವಾರ್ತೆ ಶಹಾಪುರ
ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಡಿ ಜೆಜೆಎಂ ಯೋಜನೆ 2020-21 ರಿಂದ 2024-25 1ನೇ ಮತ್ತು 4ನೇಯ ಫೇಸ್‌ವರೆಗೆ ಇರುವ ಕಾಮಗಾರಿಯಲ್ಲಿ ಅಕ್ರಮ ಅವ್ಯವಹಾರ ನಡೆದಿದ್ದು, ಕಾಮಗಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಂಪೂರ್ಣ ನಿರ್ಲಕ್ಷ್ಯವಹಿಸಿದ್ದಾರೆ. ಅಣಬಿ, ಶಿರವಾಳ, ಹೋತಪೇಟ ಗ್ರಾಮಗಳ ಈ ಯೋಜನೆ ಹಳ್ಳ ಹಿಡಿದಿದೆ. ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸರ್ ಎಂ. ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದಿಂದ ನಗರದ ಗ್ರಾಮೀಣ ಕಿರು ನೀರು ಸರಬರಾಜು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಅಣಬಿ ಮಾತನಾಡಿ, ಬಹುತೇಕ ಹಳ್ಳಿಗಳಲ್ಲಿ ನಾಮ್ ಕೆ ವಾಸ್ತೆ ಎಂಬಂತೆ ನಲ್ಲಿಗಳನ್ನು ಜೋಡಿಸುತ್ತಿದ್ದು, ಮನೆಗಳ ಮಾಲೀಕರ ಗಮನಕ್ಕೆ ತರದೆ ಕಟ್ಟೆ, ಗೋಡೆ ಮೇಲೆ ನಲ್ಲಿಗಳನ್ನು ಕೂಡಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮನೆ ಮಾಲೀಕರ ಮತ್ತು ಮನೆಗಳ ನಂಬರ್ ಬೇರೆ ಇದ್ದರೂ ಒಂದೇ ನಂಬರ್‌ನಲ್ಲಿ ನೀಡುವ ಮೂಲಕ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ತನಿಖೆ ನಡೆಸಿ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದಲಿತ ಮತ್ತು ಮೈನಾರಿಟಿ ಜಿಲ್ಲಾಧ್ಯಕ್ಷ ನಿಂಗಣ್ಣ ಕದ್ರಾಪುರ್, ಜಿಲ್ಲಾ ಉಪಾಧ್ಯಕ್ಷ ಇಸ್ಮಾಯಿಲ್ ತಿಮ್ಮಾಪುರಿ, ಸುನೀಲ್ ಹಳಿಸಗರ್. ಡಿಎಸ್ಎಸ್ ಬಸವರಾಜ್ ನಾಟೇಕಾರ್, ನಾಗು ಹೆಗ್ಗಣದೊಡ್ಡಿ, ಹನುಮಂತ ಪರಶುರಾಮ್ ಸಿಂಗನಹಳ್ಳಿ, ರಾಜು ಗೋಗಿ, ಮೌನೇಶ್ ಜಾರಕಿಹೊಳಿ, ವಿಶ್ವರಾಜ, ಭೋಜಪ್ಪ ಮುಂಡಾಸ್, ಮರಿಯಪ್ಪ ಗೋಲಗೇರಿ, ಸೋಪಣ್ಣ ಗೋಲಗೇರಿ, ಅಮ್ಲಪ್ಪ ಮದ್ನಾಳ, ಅಂಬರೀಶ್ ಶಿರವಾಳ ಇದ್ದರು.-----
ಫೋಟೊ: ಶಹಾಪುರದಲ್ಲಿ ಜೆಜೆಎಂ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ತನಿಖೆಗೆ ಒತ್ತಾಯಿಸಿ ನಗರದ ಕಿರು ನೀರು ಸರಬರಾಜು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.19ವೈಡಿಆರ್4