ದುಷ್ಕರ್ಮಿಗಳಿಂದ ಹೊಲಕ್ಕೆ ಬೆಂಕಿ: ಬೆಳೆ ಸಂಪೂರ್ಣ ಭಸ್ಮ

| Published : Feb 19 2025, 12:45 AM IST

ಸಾರಾಂಶ

ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಪರಿಣಾಮ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ, 60 ನಿಂಬೆ 20 ಹಲಸು 20 ಜಂಬು ನೆರಳೇ ಹಾಗೂ ನೂರು ಮಾವಿನ ಗಿಡಗಳಿಗೆ ಬೆಂಕಿ ವ್ಯಾಪಿಸಿ ಫಸಲಿಗೆ ಬಂದಿದ್ದ ಎಲ್ಲಾ ಸಸಿಗಳು ಸುಟ್ಟು ಭಸ್ಮವಾಗಿದೆ

ಪಾವಗಡ: ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಿಣಾಮ ಬೆಂಕಿ ವ್ಯಾಪಿಸಿ 14 ಎಕರೆ ಜಮೀನಿನ ಪೈಕಿ 3 ಎಕರೆಯಲ್ಲಿ ಬೆಳೆದಿದ್ದ 50 ಸಾವಿರ ಮೌಲ್ಯದ ಬೆಳೆ ಸಂರ್ಪೂಣ ಸುಟ್ಟು ಕರಕಲಾಗಿದೆ ಎಂದು ರೈತ ಬ್ಯಾಡನೂರು ಸಿದ್ದಲಿಂಗೇಶ್ವರ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಮಂಗಳವಾರ ಪಟ್ಟಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರೈತ ಸಿದ್ದಲಿಂಗೇಶ್ವರ ಬ್ಯಾಡನೂರು ಗ್ರಾಮದ ವಾಸಿಯಾಗಿದ್ದು, ಇದೇ ಗ್ರಾಮದ ನಮಗೆ ಸೇರಿದ್ದ ಸರ್ವೆ ನಂ. 265ರಲ್ಲಿ 14 ಎಕರೆ ಜಮೀನಿದೆ. ಹೊಲದಲ್ಲಿ ವಿವಿಧ ರೀತಿಯ ಬೆಳೆ ಬೆಳೆಯಲಾಗುತ್ತಿದೆ. ನಾವು ಹೊಲದಲ್ಲಿ ಇಲ್ಲದ ವೇಳೆ ಇದೇ ಫೆ. 18ರ ಮಧ್ಯಾಹ್ನ ನಮ್ಮ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾದ ಪರಿಣಾಮ 3 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೊಗರಿ, 60 ನಿಂಬೆ 20 ಹಲಸು 20 ಜಂಬು ನೆರಳೇ ಹಾಗೂ ನೂರು ಮಾವಿನ ಗಿಡಗಳಿಗೆ ಬೆಂಕಿ ವ್ಯಾಪಿಸಿ ಫಸಲಿಗೆ ಬಂದಿದ್ದ ಎಲ್ಲಾ ಸಸಿಗಳು ಸುಟ್ಟು ಭಸ್ಮವಾಗಿದೆ ಎಂದು ದೂರಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಜಮೀನಿನಲ್ಲಿ ಬೆಂಕಿ ವ್ಯಾಪಿಸಿ ಎತ್ತರಕ್ಕೆ ಉರಿಯುತ್ತಿತ್ತು. ರಕ್ಷಣೆ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದ ಹಿಂದೆ ಜಮೀನಿನ ಸುತ್ತ ತಂತಿ ಬೇಲಿ ಹಾಕಿಸಿದ್ದು ಹುಲ್ಲು ಜಾಸ್ತಿ ಬೆಳೆದಿದ್ದ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ಕರೆ ಮಾಡಿದರೂ ಸಮಯಕ್ಕೆ ಅಗ್ನಿಶಾಮಕ ದಳ ಬರಲು ಸಾಧ್ಯವಾಗಲಿಲ್ಲ. ಬೆಂಕಿ ಅವಘಡದಿಂದ ಬೆಳೆ ನಷ್ಟವಾಗಿದೆ. ಘಟನೆ ತುಂಬಾ ಅತಂಕ ತಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಕುರಿತು ನನ್ನಗೆ ಅನುಮಾನವಿದ್ದ ಸ್ಥಳೀಯ ವ್ಯಕ್ತಿಗಳು ದುರುದ್ದೇಶದಿಂದ ಬೆಳೆಗೆ ಬೆಂಕಿ ಇಟ್ಟಿರಬಹುದು.

ಹೀಗಾಗಿ ಬೆಂಕಿಯಿಂದ ಅಗಿರುವ ಬೆಳೆ ನಷ್ಟ ಕುರಿತು ದಾಖಲೆ ಸಮೇತ ತಹಸೀಲ್ದಾರ್‌ ಹಾಗೂ ತನಿಖೆ ನಡೆಸಿ ಸೂಕ್ತ ಕ್ರಮವಹಿಸುವಂತೆ ಸ್ಥಳೀಯ ವ್ಯಕ್ತಿಗಳ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಲಾಗಿದೆ. ಘಟನೆ ಪರಿಣಾಮ 50 ಸಾವಿರ ರು.ಗಳಷ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ದುಷ್ಕರ್ಮಿಗಳು ಪತ್ತೆಯಾಗಬೇಕು. ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಿ ನನಗೆ ನ್ಯಾಯ ಹಾಗೂ ರಕ್ಷಣೆ ನೀಡುವ ಮೂಲಕ ಸಂಬಂಧಪಟ್ಟ ಇಲಾಖೆಯಿಂದ ಪರಿಹಾರ ಕಲ್ಪಿಸಿಕೊಡುವಂತೆ ಸಂತ್ರಸ್ತ ರೈತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ತಾಲೂಕಿನ ಶೈಲಾಪುರ ಗ್ರಾಮದ ಹೊರವಯದ ಹೊಲಕ್ಕೆ ಬೆಂಕಿ.

ಇದರ ಬೆನ್ನಲ್ಲೆ ತಾಲೂಕಿನ ಶೈಲಾಪುರ ಗ್ರಾಮದ ಹೊರವಲಯದ ಜಮೀನಿನಲ್ಲಿ ಕೀಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ರೈತ ನಾರಾಯಣಪ್ಪನಿಗೆ ಸೇರಿದ್ದ 25 ತೆಂಗಿನ ಗಿಡ ಹಾಗೂ ಬೆಳೆಗೆ ಆಳವಡಿಸಿದ್ದ ಡ್ರಿಪ್‌ ಪೈಪುಗಳು ಸಂಪೂರ್ಣ ಸುಟ್ಟುಹೋದ ಘಟನೆ ನಡೆದಿದೆ.

ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಇಲ್ಲಿನ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಹೆಚ್ಚಿನ ಅನಾಹುತ ತಪ್ಪಿಸುವ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಕಂದಾಯ ಹಾಗೂ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದಾವಿಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ಫೋಟೋ 18ಪಿವಿಡಿ3.18ಪಿವಿಜಿ3 18ಪಿವಿಜಿ4

ಮೂರು ಎಕರೆಯಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿರುವುದು.