ಮಿಕ್ಸ್ ಬಾಕ್ಸಿಂಗ್ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆ: ಕೊಡಗಿನ 7 ಮಂದಿ ಆಯ್ಕೆ

| Published : Oct 13 2025, 02:03 AM IST

ಮಿಕ್ಸ್ ಬಾಕ್ಸಿಂಗ್ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆ: ಕೊಡಗಿನ 7 ಮಂದಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಕೊಡಗಿನ 7 ಮಂದಿ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರಾಷ್ಟ್ರೀಯ ಮಿಕ್ಸ್ ಬಾಕ್ಸಿಂಗ್ ಫೆಡರೇಷನ್ ಈಚೆಗೆ ಕನಕಪುರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ತೀರ್ಪುಗಾರರ ಪರೀಕ್ಷೆಯಲ್ಲಿ ಕೊಡಗಿನ 7 ಮಂದಿ ಆಯ್ಕೆಯಾಗಿದ್ದಾರೆ.ರಾಜ್ಯಮಟ್ಟದ ಪರೀಕ್ಷೆಯಲ್ಲಿ 20 ಮಂದಿ ಪಾಲ್ಗೊಂಡಿದ್ದರು. ಕೊಡಗಿನ ಶರಣ್ಯ ಎ.ಶೆಟ್ಟಿ, ಬಿ.ಕೆ. ಮನ್ವಿತ್‌ಮೋಹನ್, ಸುರೇಶ್ ಪೂಜಾರಿ, ವೃಂದ, ಎನ್.ಎಸ್. ಅಜಯ್, ಪಿ. ಯಶಸ್ ಮತ್ತು ಯು.ಸಿ. ಕೃತಿಕ್ ರಾಷ್ಟ್ರೀಯ ತೀರ್ಪುಗಾರರಾಗಿ ಆಯ್ಕೆಯಾದರು.ಈ ಸಂದರ್ಭ ಕರ್ನಾಟಕ ಮಿಕ್ಸ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಮಾಸ್ಟರ್, ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಎನ್.ಸಿ. ಸುದರ್ಶನ್, ಹಿರಿಯ ತರಬೇತುದಾರ ಹೊನ್ನಗಂಗಪ್ಪ ಇದ್ದರು.