ಜನಸಂಪರ್ಕ ಸಭೆಗೆ ಬಾರದ ಮೆಸ್ಕಾಂ, ಪೊಲೀಸ್ ಇಲಾಖೆ ಅಧಿಕಾರಿಗಳ ಮೇಲೆ ಶಾಸಕ ಆನಂದ್ ತರಾಟೆ

| Published : Nov 06 2025, 01:45 AM IST

ಸಾರಾಂಶ

ಕಡೂರು, ಜನಸಂಪರ್ಕ ಸಭೆಗೆ ಹಾಜರಾಗದ ಮೆಸ್ಕಾಂ ಎಂಜಿನಿಯರ್, ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ವಹಿಸಲು ಶಾಸಕ ಕೆ.ಎಸ್.ಆನಂದ್ ತಹಸೀಲ್ದಾರ್ ಗೆಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಜನಸಂಪರ್ಕ ಸಭೆಗೆ ಹಾಜರಾಗದ ಮೆಸ್ಕಾಂ ಎಂಜಿನಿಯರ್, ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಕಾನೂನು ಕ್ರಮ ವಹಿಸಲು ಶಾಸಕ ಕೆ.ಎಸ್.ಆನಂದ್ ತಹಸೀಲ್ದಾರ್ ಗೆಸೂಚಿಸಿದರು.

ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಗ್ರಾಪಂ ಮಟ್ಟದ ‘ಜನಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿ ಮಾತನಾಡಿ ದರು. ತಾಲೂಕು ದಂಡಾಧಿಕಾರಿಗಳೆ ಸಭೆಗೆ ಬಂದಿದ್ದರೂ ನೆಪ ಒಡ್ಡಿ ಮೆಸ್ಕಾಂ ಎಂಜಿನಿಯರ್‌ ಸಭೆಗೆ ಬಾರದಿರುವುದನ್ನು ಆಕ್ಷೇಪಿಸಿದ ಶಾಸಕರು ನೂರಾರು ಟಿಸಿಗಳನ್ನು ಮಾರಾಟದ ಸಂತೆ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಸಭೆಗೆ ಬಂದರೆ ಅವರ ವ್ಯಾಪಾರ ನಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರು ಸಭೆಯಲ್ಲಿದ್ದ ಅಬಕಾರಿ ಅಧಿಕಾರಿ ಮತ್ತು ಪೊಲೀಸ್‌ಸರಿಗೆ ಈ ಬಗ್ಗೆ ಮಾಹಿತಿ ಕೇಳಿದಾಗ ಪಿಎಸ್‌ಐ ಗೈರಾಗಿದ್ದನ್ನು ಕಂಡ ಶಾಸಕರು ಗರಂ ಆದರು. ಕೂಡಲೆ ಪಿಎಸ್‌ಐ ಸಭೆಗೆ ಬಂದು ಮಾಹಿತಿ ನೀಡಲು ಸೂಚಿಸಿದರು. ಅಬಕಾರಿ ಅಧಿಕಾರಿ ಗಳ ತರಾಟೆಗೆ ತೆಗೆದುಕೊಂಡು ಅಕ್ರಮವಾಗಿ ಮದ್ಯ ಮಾರಾಟದ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದರು.ಇದೇ ರೀತಿ ಯಗಟಿ ವ್ಯಾಪ್ತಿಯ ಸೋಮನಹಳ್ಳಿಗೆ ಬರಲು ಸಾಧ್ಯವಾಗದೆ. ಇದ್ದ ಯಗಟಿ ಪಿಎಸ್‌ಐ ವಿರುದ್ಧ ಶಾಸಕರು ಕಿಡಿಕಾರಿದರು. ಅಬಕಾರಿ ಅಂಗಡಿಗಳಲ್ಲಿ ಪೊಲೀಸರು ಶಾಮೀಲಾಗಿ ತಿಂಗಳ ಮಾಮೂಲಿ ವಸೂಲಿ ಜೋರಾಗಿ ನಡೆಯುತ್ತಿದ್ದು ಪಿಎಸ್‌ಐ ಇಂದ ಮೇಲಾಧಿಕಾರಿಗಳಿಗೆ ಮಾಮೂಲಿ ಸರಬರಾಜಾಗುತ್ತಿದೆ. ಇದಕ್ಕಾಗಿ ಯಾರು ಎಲ್ಲಿ ಮಾರಾಟ ಮಾಡಿದರು. ದೂರು ದಾಖಲಿಸದೆ ಇರುವುದರ ವಿರುದ್ಧ ಕೋಪಗೊಂಡು ಅಧಿಕಾರಿಗಳ ವರ್ತನೆ ಖಂಡಿಸಿದರು. ಕೂಡಲೆ ಅಕ್ರಮ ಮಾರಾಟ ಗಾರರ ವಿರುದ್ಧ ಕೇಸು ದಾಖಲಿಸಲು ಆದೇಶಿಸಿದರು.ಸೋಮನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ಮನೆಮನೆಗಳಲ್ಲಿ ನಡೆಯುತ್ತಿದೆ. ಶಾಲಾ ಮಕ್ಕಳು ದುಶ್ಚಟ ಗಳಿಗೆ ದಾಸರಾಗುತ್ತಿದ್ದಾರೆ ಇದನ್ನು ನಿಯಂತ್ರಿಸಲು ಅಬಕಾರಿ ಮತ್ತು ಪೊಲೀಸ್ ಇಲಾಖೆಗೆ ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಚಂದ್ರಶೇಖರನಾಯ್ಕ ದೂರಿದರು.

ಸೋಮನಹಳ್ಳಿ ಕಾಲೋನಿ ನಿವಾಸಿಗರಿಗೆ ನೀರಿನಿಂದ ಚರ್ಮರೋಗ ಬರುತ್ತಿದ್ದು ಇದರ ಬಗ್ಗೆ ಆರೋಗ್ಯ ಇಲಾಖೆ ಸೂಕ್ತ ಕ್ರಮ ವಹಿಸಿ ಕಾಲೋನಿಯಲ್ಲಿ ಕ್ಯಾಂಪ್ ನಡೆಸಿ ಚರ್ಮರೋಗ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

ಬಡವರು ಕೂಲಿ ಕಾರ್ಮಿಕರೆ ಹೆಚ್ಚಿಇರುವ ಈ ಗ್ರಾಮದಲ್ಲಿ ನೂರಾರು ಜನ ಮನೆ, ನಿವೇಶನಗಳಿಲ್ಲದೆ ಅರ್ಜಿ ಸಲ್ಲಿಸಿದ್ದಾರೆ, ತಹಸೀಲ್ದಾರ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಒಂದು ವಾರದೊಳಗೆ 5 ಎಕರೆ ಭೂಮಿ ಗುರುತಿಸಿ ಮಾಹಿತಿ ನೀಡ ಬೇಕು ಬಡವರಿಗೆ ನಿವೇಶನ ನೀಡಲು ಜನವರಿಯಲ್ಲಿ ಮುಂದಾಗಲಿದ್ದೇವೆ ಎಂದರು.ಆಸ್ಪತ್ರೆಯಲ್ಲಿ ದಾದಿಯರಿಲ್ಲದೆ ಸಮಸ್ಯೆಯಾಗುತ್ತಿದೆ ಎಂಬ ದೂರಿಗೆ ಕೂಡಲೆ ಆರೋಗ್ಯಾಧಿಕಾರಿ ರಾತ್ರಿ ಪಾಳಿಯಲ್ಲಿ ನರ್ಸ್ ಗಳು ಆಸ್ಪತ್ರೆಯಲ್ಲಿ ಇರುವ ವ್ಯವಸ್ಥೆ ಮಾಡಲು ಸೂಚಿಸಿದರು.ಹಕ್ಕುಪತ್ರ, ನಿವೇಶನ, ತೋಟದ ಮನೆಗಳಿಗೆ ಈಸ್ವತ್ತು ಹಾಗೂ ರಸ್ತೆ, ಚರಂಡಿ ನಿರ್ಮಾಣಕ್ಕೆ ಅರ್ಜಿ ಗಳು ಬಂದಿದ್ದು ಗ್ರಾಪಂ ಅಧಿಕಾರಿಗಳು ಬಗೆಹರಿಸುವ ಮಾಹಿತಿ ನೀಡಿದರು.

ಗ್ರಾಪಂ ಅಧ್ಯಕ್ಷ ಸತೀಶ್‌ನಾಯ್ಕ, ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ, ಮಂಗಳ, ಲತ ದೇವರಾಜು, ರತ್ನಿಬಾಯಿ, ಶೋಭಾರಾಣಿ, ಅರುಣ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಕಂದಾಯ ಇಲಾಖೆ ಆರ್‌ಐ ರವಿಕುಮಾರ್, ಪಿಡಿಒ ತನುಜ ಇದ್ದರು.5ಕೆಕೆಡಿಯು1ಕಡೂರು ತಾಲೂಕು ಸೋಮನಹಳ್ಳಿಯಲ್ಲಿ ಶಾಸಕ ಕೆ.ಎಸ್.ಆನಂದ್ ಅಧ್ಯಕ್ಷತೆಯಲ್ಲಿ ನಡೆದ ಜನಸಂಪರ್ಕ ಸಭೆಯನ್ನು ಗ್ರಾ.ಪಂ.ಅಧ್ಯಕ್ಷ ಸತೀಶ್‌ನಾಯ್ಕ ಉದ್ಘಾಟಿಸಿದರು.ತಹಸೀಲ್ದಾರ್,ಇಒ ಮತ್ತಿತರರು ಇದ್ದರು.