ಸಂಡೂರಿನ ಕುಂದುಕೊರತೆ ಕುರಿತು ಸದನದ ಗಮನ ಸೆಳೆದ ಶಾಸಕಿ ಅನ್ನಪೂರ್ಣ

| Published : Dec 19 2024, 12:32 AM IST

ಸಂಡೂರಿನ ಕುಂದುಕೊರತೆ ಕುರಿತು ಸದನದ ಗಮನ ಸೆಳೆದ ಶಾಸಕಿ ಅನ್ನಪೂರ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ರೇಡಿಯೋಲಾಜಿಸ್ಟ್, ಹೆರಿಗೆ ತಜ್ಞರ ಕೊರತೆ ಇದೆ.

ಸಂಡೂರು: ಶಾಸಕಿ ಅನ್ನಪೂರ್ಣ ತುಕಾರಾಂ ತಾವು ಮೊದಲ ಬಾರಿಗೆ ಭಾಗವಹಿಸುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ಬುಧವಾರ ತಾಲೂಕಿನ ಕುಂದುಕೊರತೆಗಳ ಬಗ್ಗೆ ಸದನದ ಗಮನ ಸೆಳೆದು, ಅವುಗಳ ಪರಿಹಾರಕ್ಕಾಗಿ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಿದ್ದಾರೆ.ಸಂಡೂರಿನ ೧೦೦ ಬೆಡ್‌ನ ಸಾರ್ವಜನಿಕ ಆಸ್ಪತ್ರೆಯನ್ನು ೨೦೦ ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಿರುವ ಕ್ರಮಕ್ಕಾಗಿ ಆರೋಗ್ಯ ಸಚಿವರಿಎ ಅಭಿನಂದನೆ ಸಲ್ಲಿಸಿದ ಶಾಸಕಿ ಈ.ಅನ್ನಪೂರ್ಣ ತುಕಾರಾಂ, ಆಸ್ಪತ್ರೆಯಲ್ಲಿ ಈವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ತಜ್ಞರು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಈ ಹುದ್ದೆ ಖಾಲಿ ಇದೆ. ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರು, ರೇಡಿಯೋಲಾಜಿಸ್ಟ್, ಹೆರಿಗೆ ತಜ್ಞರ ಕೊರತೆ ಇದೆ. ಹೀಗಾಗಿ ಸಂಡೂರಿನ ಜನತೆ ಚಿಕಿತ್ಸೆಗಾಗಿ ಬಳ್ಳಾರಿ, ಹೊಸಪೇಟೆ ಹಾಗೂ ಕೂಡ್ಲಿಗಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಂಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರು ಕೊರತೆಯನ್ನು ನೀಗುಸುವಂತೆ ಆರೋಗ್ಯ ಸಚಿವರಿಗೆ ಮನವಿ ಮಾಡಿದರು.

ಗಣಿಗ್ರಾಮವಾಗಿರುವ ಸ್ವಾಮಿಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಅಲ್ಲಿ ಸಿಬ್ಬಂದಿ ಕೊರತೆ ಇದೆ. ಅಲ್ಲಿಗೆ ಸಿಬ್ಬಂದಿ ನೇಮಿಸಲು, ಗಡಿ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ತಾಲೂಕು ಕೇಂದ್ರದಲ್ಲಿ ವಿದ್ಯಾರ್ಥಿನಿಲಯ ತೆರೆಯಲು, ತೋರಣಗಲ್ಲಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಲು ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಸಂಡೂರಿನಲ್ಲಿ ನರ್ಸಿಂಗ್ ಕಾಲೇಜು ಮಂಜೂರು ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಸಚಿವರಿಗೆ ಮನವಿ ಮಾಡಿದರು.

ಬೆಳಗಾವಿಯ ಅಧಿವೇಶನದಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಂ ಸಂಡೂರು ತಾಲೂಕಿನ ಕುಂದು-ಕೊರತೆ ಕುರಿತು ಸದನದ ಗಮನ ಸೆಳೆದರು.