ಸಾರಾಂಶ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರು. ೬ ಕೋಟಿ ಅನುದಾನ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆ ಅಭಿವೃದ್ದಿಗೆ ರು. ೫ ಕೋಟಿ ರೂ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು.
ಪುತ್ತೂರು: ಪುತ್ತೂರು ಹಾಗೂ ವಿಟ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರು. ೬ ಕೋಟಿ ಅನುದಾನ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆ ಅಭಿವೃದ್ದಿಗೆ ರು. ೫ ಕೋಟಿ ರೂ ಅನುದಾನ ನೀಡುವಂತೆ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದರು.ಗುರುವಾರ ಸಚಿವರನ್ನು ಭೇಟಿಯಾದ ಶಾಸಕರು ವಿಟ್ಲ ಹಾಗೂ ಪುತ್ತೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಅಗತ್ಯದ ಬೇಡಿಕೆಯಾಗಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇದ್ದೂ ಇನ್ನೂ ಅದು ಈಡೇರಿಲ್ಲ. ವಿಟ್ಲ ಹಾಗೂ ಪುತ್ತೂರು ಭಾಗದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡುವ ಮೂಲಕ ದಲಿತ ಸಮುದಾಯದ ಬೇಡಿಕೆಗೆ ಮನ್ನನೆ ನೀಡಬೇಕಿದೆ. ಈ ಉದ್ದೇಶದಿಂದ ಸರಕಾರ ಎರಡೂ ಕಡೆಗಳಲ್ಲಿ ಭವನ ನಿರ್ಮಾಣಕ್ಕೆ ಪ್ರತ್ಯೇಕ ಅನುದಾನವನ್ನು ಒದಗಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.
ರಸ್ತೆ ಅಭಿವೃದ್ದಿಗೆ ಅನುದಾನದ ಬೇಡಿಕೆ:ಸಮಾಜ ಕಲ್ಯಾಣ ಇಲಾಖೆಯಿಂದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಸಚಿವರಿಗೆ ಮನವಿ ಸಲ್ಲಿಸಿದರು. ಇಲಾಖೆಯ ಅನುದಾನದಿಂದ ಕಾಲನಿಗಳ ರಸ್ತೆಯನ್ನು ಅಭಿವೃದ್ದಿ ಮಾಡಲು ಸಹಕಾರ ನೀಡಲು ಕನಿಷ್ಟ ರೂ. ೫ ಕೋಟಿ ಅನುದಾನ ಒದಗಿಸುವಂತೆಯೂ ಶಾಸಕರು ಮನವಿ ಸಲ್ಲಿಸಿದರು.ಪುತ್ತೂರು ಮತ್ತು ವಿಟ್ಲದಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ದಲಿತ ಸಮುದಾಯದ ಮುಖಂಡರು ನನ್ನನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಅನುದಾನ ನೀಡುವಂತೆ ಸಚಿವರಿಗೆ ಮನವಿ ಮಾಡಿದ್ದೇನೆ. ಖಂಡಿತವಾಗಿಯೂ ಅನುದಾನ ಸಿಗುತ್ತದೆ ಎಂಬ ನಂಬಿಕೆ ಇದೆ.-ಅಶೋಕ್ ರೈ, ಪುತ್ತೂರು ಶಾಸಕ.
;Resize=(128,128))
;Resize=(128,128))