ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಪೂರ್ಣಗೊಳ್ಳದೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲು ಗ್ರಾಮಕ್ಕೆ ಬಂದ ಶಾಸಕ ಬಾಲಕೃಷ್ಣ ವಿರುದ್ಧ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಜನರು ವಿರೋಧ ವ್ಯಕ್ತಪಡಿಸಿದರು. ಆ ನಂತರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಲಿತ ಗುಂಪಿನ ನಡುವೆ ಮಾತಿನ ಚಕಮಕಿಯೇ ನಡೆಯಿತು. ಈ ಸಮುದಾಯ ಭವನ ಉದ್ಘಾಟನೆಯ ದಿನಾಂಕವು ಕೂಡ ನಾವು ಶಾಸಕರಿಗೆ ತಿಳಿಸಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಜೋಗಿಪುರ ಗ್ರಾಮದಲ್ಲಿ ಸಮುದಾಯ ಭವನ ಪೂರ್ಣಗೊಳ್ಳದೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಲು ಗ್ರಾಮಕ್ಕೆ ಬಂದ ಶಾಸಕ ಬಾಲಕೃಷ್ಣ ವಿರುದ್ಧ ಅದೇ ಗ್ರಾಮದ ಕಾಂಗ್ರೆಸ್ ಬೆಂಬಲಿತ ಜನರು ವಿರೋಧ ವ್ಯಕ್ತಪಡಿಸಿದರು. ಆ ನಂತರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಲಿತ ಗುಂಪಿನ ನಡುವೆ ಮಾತಿನ ಚಕಮಕಿಯೇ ನಡೆಯಿತು.

ಇದೇ ಸಂದರ್ಭದಲ್ಲಿ ಜೋಗಿಪುರದ ಗ್ರಾಮಸ್ಥ ನಂದನ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳ ಹಿಂದೆಯೇ ಸಮುದಾಯ ಭವನ ನಿರ್ಮಾಣಕ್ಕಾಗಿ ಜಾಗವನ್ನು ಮೀಸಲಿಡಲಾಯಿತು. ಈ ಜಾಗವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾಗವಾಗಿದೆ. ಈ ಸ್ಥಳದಲ್ಲಿ ಸಮುದಾಯ ಭವನವನ್ನು ನಿರ್ಮಿಸಲು ಅಂದು ತಿಳಿಸಲಾಯಿತು. ಅದರಂತೆ ಸಮುದಾಯ ಭವನ ಕೂಡ ನಿರ್ಮಾಣವಾಗಿದ್ದು ಈ ಸಮುದಾಯ ಭವನಕ್ಕೆ ಕೆಲವು ಮೂಲ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ವಿದ್ಯುತ್ ಹಾಗೂ ಅಡುಗೆಮನೆ ಈ ಮೂಲಭೂತ ಸೌಕರ್ಯಗಳು ಪೂರ್ಣಗೊಳ್ಳದೆ ಇಂದು ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲು ಶಾಸಕರು ಆಗಮಿಸಿರುವುದು ಸರಿಯಿಲ್ಲ. ಜೊತೆಗೆ ಸ್ಥಳೀಯ ಗ್ರಾಮಸ್ಥರನ್ನು ಕೂಡ ಶಾಸಕರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಆಹ್ವಾನಿಸಿಲ್ಲ. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಒಟ್ಟಾರೆ ಸೇರಿಕೊಂಡು ಯಾವುದೇ ಮೂಲ ಉದ್ದೇಶದಿಂದ ಈ ಸಮುದಾಯ ಭವನವನ್ನು ಉದ್ಘಾಟನೆ ನೆರವೇರಿಸುತ್ತಿರುವುದು ಸರಿಯಲ್ಲ. ಜೆಡಿಎಸ್ ಬೆಂಬಲಿತ ಪಕ್ಕದ ಗ್ರಾಮದವರನ್ನು ಕರೆತಂದು ಇಂದು ಗ್ರಾಮದಲ್ಲಿ ಗೂಂಡಾ ವರ್ತನೆಯನ್ನು ಶಾಸಕರು ತೋರುತ್ತಿದ್ದಾರೆ. ಈ ಹಿಂದೆ ಇದೇ ಶಾಸಕರ ಜೊತೆಯಲ್ಲೇ ಇದ್ದು ಇಂತಹ ಅನೇಕ ಗುಂಪುಗಾರಿಕೆ ಕೆಲಸಗಳನ್ನು ಮಾಡಿಸುತ್ತಿರುವುದನ್ನು ನಮ್ಮ ಕಣ್ಣಮುಂದೆ ನಾವು ನೋಡಿದ್ದೇವೆ ಹಾಗೂ ಈ ಸಮುದಾಯ ಭವನಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದರೆ ಇನ್ನು ಕಾಮಗಾರಿಯು ಮುಕ್ತಾಯವಾಗಿರುವುದಿಲ್ಲ. ಈ ಸಮುದಾಯ ಭವನ ಉದ್ಘಾಟನೆಯ ದಿನಾಂಕವು ಕೂಡ ನಾವು ಶಾಸಕರಿಗೆ ತಿಳಿಸಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥ ನಟೇಶ್ ಮಾತನಾಡಿ. ತಾಲೂಕಿನಲ್ಲಿ ಸ್ಥಳೀಯ ಶಾಸಕರ ಗೂಂಡಾವರ್ತನೆ ಹೆಚ್ಚಾಗಿದೆ. ಗ್ರಾಮ ಗ್ರಾಮಗಳ ನಡುವೆ ಹಾಗೂ ಸ್ಥಳೀಯ ಗ್ರಾಮಸ್ಥರ ನಡುವೆ ಭಿನ್ನಾಭಿಪ್ರಾಯದ ಮಾತುಗಳನ್ನು ಆಡಿ ಸ್ಥಳೀಯ ಸ್ಥಳೀಯ ಗ್ರಾಮಸ್ಥರನ್ನು ಹಣದ ಆಮಿಷವನ್ನು ಒಡ್ಡಿ ಮತ್ತು ಕಾಮಗಾರಿಯ ಆಸೆಯನ್ನು ತೋರಿಸಿ ಸ್ಥಳೀಯ ಗ್ರಾಮಸ್ಥರಿಗೆ ಗ್ರಾಮಸ್ಥರ ನಡುವೆ ಜಗಳವಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಸ್ಥಳೀಯ ಶಾಸಕರು ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ನಿಮ್ಮ ಗ್ರಾಮಕ್ಕೆ ಎಷ್ಟು ಅನುದಾನ ಬೇಕು ಎಂದು ಆಸೆಯನ್ನು ಒಡ್ಡುವುದು ಮುಖ್ಯ ಉದ್ದೇಶವಾಗಿದೆ. ಈ ಉದ್ದೇಶದ ಪ್ರಕಾರ ಯಾವುದೇ ಕಾಮಗಾರಿಗಳನ್ನು ನೀಡದೆ ಇಂತಿಷ್ಟು ಹಣ ಎಂದು ಶಾಸಕರ ಬೆಂಬರಿಗೆ ನೀಡಿರುವ ಅನೇಕ ಸಂಗತಿಗಳು ನಡೆದಿವೆ ಎಂದರು.