ಸಾರಾಂಶ
ಜನರು ಬೆಚ್ಚಗೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ಪಟ್ಟಣದ ಗರಿಮೆ ಹಿರಿಮೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶ್ಲಾಘಿಸಿದರು. ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಃಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡುವುದು ಹೆಮ್ಮೆಯ ವಿಷಯ. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ. ನಿಮ್ಮ ಉತ್ತಮ ಆರೋಗ್ಯದಿಂದ ಪಟ್ಟಣದ ಉತ್ತಮ ಆರೋಗ್ಯ ಸಾಧ್ಯ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಜನರು ಬೆಚ್ಚಗೆ ಮಲಗಿರುವ ಹೊತ್ತಿನಲ್ಲಿ ತಾವೆದ್ದು ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ಪಟ್ಟಣದ ಗರಿಮೆ ಹಿರಿಮೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶ್ಲಾಘಿಸಿದರು.ಅವರು ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಪಂಪ್‌ಹೌಸ್ ಆವರಣದಲ್ಲಿ ಪುರಸಭೆ ವತಿಯಿಂದ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ದಿನನಿತ್ಯ ಮುಂಜಾನೆ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು, ಪೌರ ಕಾರ್ಮಿಕರು ಸದಾ ಸ್ಮರಣೀಯರು. ಅವರಿಗೆ ಸಿಗಬೇಕಾದ ಸವಲತ್ತುಗಳು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ನೌಕರರನ್ನು ಕಾಯಂಗೊಳಿಸಿರುವುದು ಸ್ವಾಗತಾರ್ಹ ಎಂದರು.ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಃಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡುವುದು ಹೆಮ್ಮೆಯ ವಿಷಯ. ದೊಡ್ಡ ವ್ಯಕ್ತಿ ಮತ್ತು ಉನ್ನತ ಹುದ್ದೆಯಲ್ಲಿರುವವರನ್ನು ಸತ್ಕರಿಸುವುದು, ಗೌರವಿಸುವುದು ದೊಡ್ಡ ಕಾರ್ಯವಲ್ಲ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ. ನಿಮ್ಮ ಉತ್ತಮ ಆರೋಗ್ಯದಿಂದ ಪಟ್ಟಣದ ಉತ್ತಮ ಆರೋಗ್ಯ ಸಾಧ್ಯ. ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದರು.ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್ ಮಾತನಾಡಿ, ಸ್ವಚ್ಛತೆಯ ಆಸ್ತಿ ಪೌರ ಕಾರ್ಮಿಕ ಬಂಧುಗಳು, ಪಟ್ಟಣದ ಅಂದ ಚೆಂದ ತುಂಬುವ ಕೆಲಸ ಮಾಡುವ ನಿಮ್ಮ ಶ್ರಮದಿಂದ ನಗರಗಳು ಸ್ವಚ್ಛವಾಗಿರಲು ಸಾಧ್ಯ. ನಿಮ್ಮ ಕಷ್ಟ, ನೋವುಗಳಿಗೆ ಸ್ಪಂದಿಸುವ ಕೆಲಸವನ್ನು ಪುರಸಭೆ ಆಡಳಿತ ಮಂಡಳಿ ಮಾಡುತ್ತಿದೆ. ಜನ ಎದ್ದೇಳುವ ಮುಂಚೆ ನೀವು ಪಟ್ಟಣದ ಸ್ವಚ್ಛ ಮಾಡಿ, ಸುಂದರ ಪಟ್ಟಣವನ್ನಾಗಿಸಿದ್ದೀರಿ. ಈ ಹಿನ್ನೆಲೆಯಲ್ಲಿ 2023-24ನೆ ಸಾಲಿನ ಚನ್ನರಾಯಪಟ್ಟಣ ಪುರಸಭೆಗೆ ರಾಷ್ಟ್ರೀಯ ಸನ್ಮಾನದ ಗೌರವ ಸಿಕ್ಕಿದೆ. ಇದು ನಿಮ್ಮ ಶ್ರಮದಿಂದ ಸಾಧ್ಯವಾಗಿದೆ ಎಂದು ಶ್ಲಾಘಿಸಿದರು.ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿವಿಧ ಕ್ರೀಡಾಕೂಟದಲ್ಲಿ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಗೆದ್ದ ಪೌರಕಾರ್ಮಿಕರಿಗೆ ಬಹುಮಾನ ವಿತರಣೆ ಹಾಗೂ ನಿವೃತ್ತಿ ಹೊಂದಿದ ಪೌರಕಾರ್ಮಿಕರಿಗೆ ಸನ್ಮಾನಿ ಸಲಾಯಿತು. ಶಾಸಕರು ವೈಯುಕ್ತಿಕವಾಗಿ ಎಲ್ಲ ಪೌರಕಾರ್ಮಿಕರಿಗೂ ಹಬ್ಬದ ಸಲುವಾಗಿ ಹೊಸ ಬಟ್ಟೆ ವಿತರಣೆ ಮಾಡಿದರು.ಇತ್ತೀಚಿಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಹಾಗೂ ಇಬ್ಬರು ಪೌರಕಾರ್ಮಿಕರಾದ ನಾಗೇಂದ್ರ, ಕಿಶನ್ ಅವರಿಗೆ ಸಮಾರಂಭದ ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಎಲ್ಲ ಪೌರಕಾರ್ಮಿಕರು ಪಟ್ಟಣದ ಪುರಸಭೆ ಕಾರ್ಯಾಲಯದಿಂದ ಪಂಪ್‌ಹೌಸ್‌ವರೆಗೂ ಮೆರವಣಿಗೆಯಲ್ಲಿಸಾಗಿದರು. ಮೆರವಣಿಗೆಯುದ್ದಕ್ಕೂ ಡಿಜೆ ಸೌಂಡ್‌ಗೆ ಪೌರಕಾರ್ಮಿಕರು, ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಪುರಸಭಾ ಸದಸ್ಯರು ಕುಣಿದು ಸಂಭ್ರಮಿಸಿದರು.ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್, ಪುರಸಭಾ ಉಪಾಧ್ಯಕ್ಷೆ ಕವಿತಾರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್ ಸದಸ್ಯರಾದ ಬನಶಂಕರಿ ರಘು, ರಾಧಾಮಂಜುನಾಥ್, ರೇಖಾ ಅನಿಲ್, ಜಿ.ಆರ್.ಸುರೇಶ್, ರಾಣಿಕೃಷ್ಣ, ಯೋಗೇಶ್, ಲಕ್ಷ್ಮಮ್ಮ, ಧರಣೀಶ್, ಪ್ರಕಾಶ್, ನಾಮನಿರ್ದೇಶಕ ಸದಸ್ಯರಾದ ಉಮಾಶಂಕರ್, ಪ್ರೇಮ್, ರವಿ, ಕಾವ್ಯಾ ಇತರರು ಇದ್ದರು.