ಹಾದ್ರಿಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಪರಿಶೀಲಿಸಿದ ಶಾಸಕ ಬಣಕಾರ

| Published : May 13 2025, 11:49 PM IST

ಹಾದ್ರಿಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿಗಳ ಸಮೀಕ್ಷೆ ಪರಿಶೀಲಿಸಿದ ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಂದು ಮನೆಗೆ ಭೇಟಿ ನೀಡಿ ಅವರಿಗೆ ಜಾತಿ ಗಣತಿ ಎಂದರೇನು ಎಂಬುದನ್ನು ಮೊದಲು ಮನದಟ್ಟು ಮಾಡಿಕೊಡಬೇಕು ಎಂದು ಶಾಸಕ ಯು.ಬಿ. ಬಣಕಾರ ಅವರು ಸಿಬ್ಬಂದಿಗೆ ಸೂಚಿಸಿದರು.

ಹಿರೇಕೆರೂರು: ತಾಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ 2025ರ ಸಮೀಕ್ಷೆ ಕಾರ್ಯದ ಸಿಬ್ಬಂದಿಯೊಂದಿಗೆ ಭಾನುವಾರ ಶಾಸಕ ಯು.ಬಿ. ಬಣಕಾರ ಪರಿಸಿಲಿಸಿದರು.

ಆನಂತರ ಮಾತನಾಡಿದ ಅವರು, ಗಣತಿ ಸಮಯದಲ್ಲಿ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಸಮುದಾಯದ ವಿವಿಧ ಅಂಶಗಳ ಬಗ್ಗೆ ದತ್ತಾಂಶ ಶೇಖರಿಸುತ್ತಿದ್ದಾರೆ. ಈ ಸಮಯದಲ್ಲಿ ಸಾರ್ವಜನಿಕರು ಗಣತಿದಾರರಿಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್, ಮೊಬೈಲ್‌ ನಂಬರ್ ನೀಡಿ, ಸಮರ್ಪಕ ಮಾಹಿತಿ ನೀಡಬೇಕು. ತಪ್ಪು ಮಾಹಿತಿ ನೀಡಬಾರದು ಎಂದು ಸಲಹೆ ನೀಡಿದರು.

ಪ್ರತಿಯೊಂದು ಮನೆಗೆ ಭೇಟಿ ನೀಡಿ ಅವರಿಗೆ ಜಾತಿ ಗಣತಿ ಎಂದರೇನು ಎಂಬುದನ್ನು ಮೊದಲು ಮನದಟ್ಟು ಮಾಡಿಕೊಡಬೇಕು. ಅದರ ಪ್ರಯೋಜನದ ಕುರಿತು ಮಾಹಿತಿ ನೀಡಬೇಕು. ಆನಂತರ ಅವರ ಕುಟುಂಬದ ಸದಸ್ಯರ ಸಂಪೂರ್ಣ ಮಾಹಿತಿ ಪಡೆದು, ವ್ಯವಸ್ಥಿತವಾಗಿ ಮೊಬೈಲ್‌ ಆ್ಯಪ್‌ನಲ್ಲಿ ದಾಖಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಗಣತಿಯಲ್ಲಿ ಸಮಾಜದ ಬಾಂಧವರು ಯಾರೂ ವಂಚಿತರಾಗಬಾರದು. ಸಮೀಕ್ಷೆಯ ಸಿಬ್ಬಂದಿ ಮನೆ ಮನೆಗೆ ಬಂದು ಭೇಟಿ ನೀಡಿದಾಗ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಕಲ್ಲಣ್ಣನವರ, ಸದಸ್ಯರಾದ ಜಯಮ್ಮ ಮರಿಗೌಡ್ರ, ಜಯಮ್ಮ ಕೊರವರ, ಚನ್ನಬಸಪ್ಪ ಹೊಟ್ಟಗೌಡ್ರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಬೂಬ್ ಸಾಬ್ ನದಾಫ್, ಎಂಜಿನಿಯರ್ ಸಿದ್ದೇಶ್ವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಮುಖಂಡರಾದ ರಮೇಶ ಹಡಗದ, ನಾಗರಾಜ ಸುಣ್ಣದಕೊಪ್ಪ, ಸಿದ್ದಪ್ಪ ಬನ್ನಿಹಟ್ಟಿ, ಶಶಿಕಲಾ ಆರೀಕಟ್ಟಿ, ನಿಂಗಪ್ಪ ಹರಿಜನ, ಚಂದ್ರಪ್ಪ ಕೆಳಗಿನಮನಿ, ತಿರಕಪ್ಪ ಹರಿಜನ, ಬೈರಪ್ಪ ಮೇಗಳಮನಿ, ಸಿದ್ದಪ್ಪ ದೊಡ್ಮನಿ, ಕೀರ್ತಿ ಕೆಳಗಿನಮನಿ, ಮಾಲತೇಶ ಬಸರಿಹಳ್ಳಿ, ಹೂವಪ್ಪ ಕೆಳಗಿನಮನಿ ಇದ್ದರು.ವಿದ್ಯುತ್ ಖಾಸಗೀಕರಣ ವಿರೋಧಿಸಿ ನಾಳೆ ಪ್ರತಿಭಟನೆ

ಹಾವೇರಿ: ವಿದ್ಯುತ್ ಖಾಸಗೀಕರಣ ವಿರೋಧಿಸಿ ಮೇ 15ರಂದು ಬೆಳಗ್ಗೆ 11 ಗಂಟೆಗೆ ನಗರದಲ್ಲಿ ಇಂಧನ ಸಚಿವರ ಅಣಕು ಶವಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಡಿ. ಕಾಲೇಬಾಗ್ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಲಾಗುವುದು. ರಾಜ್ಯ ಸರ್ಕಾರ ರೈತರ ಪಂಪಸೆಟ್‌ಗಳಿಗೆ ಸ್ಮಾರ್ಟ್‌ ಕಾರ್ಡ್, ಡಿಜಿಟಲ್ ಮೀಟರ್ ಅಳವಡಿಸಲು ₹10 ಸಾವಿರ ಠೇವಣಿ ಶುಲ್ಕವನ್ನು ನಿಗದಿಪಡಿಸಿರುವುದನ್ನು ರದ್ದುಗೊಳಿಸಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಮಾಡಿರುವ ಯತ್ನವನ್ನು ನಿಲ್ಲಿಸಬೇಕು. ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ- ಸಕ್ರಮ ಅಡಿಯಲ್ಲಿ ಈ ಹಿಂದೆ ನೀಡಿದಂತೆಯೇ ರೈತರ ಉಚಿತ ವಿದ್ಯುತ್‌ನ್ನು ಗೌರವದಿಂದ ನೀಡಬೇಕು. ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ್ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಪ್ರಮುಖರಾದ ಡಿ.ಎಸ್. ಓಲೇಕಾರ, ಗಂಗಾಧರಯ್ಯ ಚರಂತಿಮಠ, ಹೇಮಣ್ಣ ದೊಡ್ಡಮನಿ, ಇಮಾಮಸಾಬ್ ಗದಗ, ನಿರ್ಮಲಾ ಬಡಿಗೇರ, ಕಮಲವ್ವ ಪಾಟೀಲ, ಶಾಂತಾ ಹಿರೇಮಠ, ಕವಿತಾ ಭರತನೂರಮಠ, ರೇಖಾ ಬನ್ನಿಕೊಪ್ಪ, ಕಾವ್ಯಾ ಬತ್ತಿಕೊಪ್ಪ ಇತರರು ಇದ್ದರು.