ಸಾರಾಂಶ
ಶಾಸಕ ಸಿ.ಎಸ್.ನಾಡಗೌಡಗೆ ಅಸ್ಕಿ ಸನ್ಮಾನ
ಮುದ್ದೇಬಿಹಾಳ:
ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಕರ್ನಾಟಕ ರಾಜ್ಯ ಸೋಪ್ ಆ್ಯಂಡ್ ಡಿಟರ್ಜಂಟ್ ನಿಗಮ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡು ಸೋಮವಾರ ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಎಸ್ಸಿ,ಎಸ್ಟಿ ಘಟಕದ ತಾಲೂಕಾಧ್ಯಕ್ಷ ಶ್ರೀಕಾಂತ ಚಲವಾದಿ, ಗುತ್ತಿಗೆದಾರ ಸಿ ಜೆ ವಿಜಯಕರ, ಯಲ್ಲಪ್ಪ ಚಲವಾದಿ, .ವೈ.ವೈ.ಚಲವಾದಿ, ವೀರೇಶ ಭಜಂತ್ರಿ, ಶರಣು ಚಲವಾದಿ, ಶೇಕು ಕಟ್ಟಿಮನಿ, ಭೀಮಣ್ಣ ಬಿಜ್ಜೂರ, ಸಿದ್ದು ಕಟ್ಟಿಮನಿ, ಲಕ್ಷ್ಮಣ ಚಲವಾದಿ, ಮಲ್ಲಪ್ಪ ಮುದ್ನಾಳ, ಸಂಗಪ್ಪ ವಿಜಯಕರ ಗೋನಾಳ, ಯಲ್ಲಪ್ಪ ನಗರಬೆಟ್ಟ ಮುಂತಾದವರು ಇದ್ದರು.