ಸಾರಾಂಶ
ಶ್ರೀ ರೇವಣಸಿದ್ದೇಶ್ವರ ಪ್ರಾ.ಕೃ.ಪತ್ತಿನ ಸಹಕಾರ ಸಂಘಕ್ಕೆ ಎಂ.ರಮೇಶ್ ಅಧ್ಯಕ್ಷರ ಅವಿರೋಧ ಆಯ್ಕೆ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ಸಹಕಾರ ಸಂಘದಿಂದ ತಾಲೂಕಿನ ರೈತರಿಗೆ ಗೊಬ್ಬರ ಆಧಾರ ಸಾಲವನ್ನು ವಿತರಿಸಲು ಕ್ರಮ ವಹಿಸಿಲಾಗುವುದು ಎಂದು ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಟಿ.ಎಸ್.ಪ್ರಕಾಶ್ ವರ್ಮ ಹೇಳಿದ್ದಾರೆ.ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ.ರಮೇಶ್ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಅಡಕೆ ದಾಸ್ತಾನು ಸಾಲ, ಬಂಗಾರ ಅಡಮಾನ ಸಾಲ, ವಾಹನ ಖರೀದಿ ಸಾಲ, ಕೆಸಿಸಿ ಬೆಳೆ ಸಾಲಗಳನ್ನು ಈಗಾಗಲೇ ರೈತರಿಗೆ ಸಂಘದಿಂದ ವಿತರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೊಸ ಕೆಸಿಸಿ ಸಾಲ, ಹೆಚ್ಚುವರಿ ಕೆಸಿಸಿ ಸಾಲಗಳನ್ನು ವಿತರಿಸಲಾಗುವುದು, 2023-24ನೇ ಸಾಲಿಗೆ ಸಂಘ ಹತ್ತು ಲಕ್ಷದ ಎಂಭತ್ತು ಸಾವಿರ ನಿವ್ವಳ ಲಾಭ ಗಳಿಸಿರುವುದು ಸಂತೋಷ ತಂದಿದೆ, ರೈತರಿಗೆ ಹೆಚ್ಚು ಸೌಲಭ್ಯ ಒದಗಿಸಿ ಇನ್ನೂ ಹೆಚ್ಚಿನ ಲಾಭ ಗಳಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.
ನಿಕಟಪೂರ್ವ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ, ನಮ್ಮ ಅವಧಿಯಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ನಿಂದ ನಮ್ಮ ಸಹಕಾರ ಸಂಘಕ್ಕೆ ಎರಡು ಲಕ್ಷ ರು.ಅನುದಾನ ಮಂಜೂರಾಗಿದೆ, ಶಾಸಕ ಜಿ.ಎಚ್.ಶ್ರೀನಿವಾಸ್ ಸಹಕಾರ ಪಡೆದು ಸಂಘದ ಮೇಲ್ಮಹಡಿಯಲ್ಲಿ ಸಭಾಂಗಣ ನಿರ್ಮಿಸಲು ಅನುದಾನ ಪಡೆಯಲು ಸರ್ವರೂ ಸಹಕರಿಸಬೇಕೆಂದು ಮನವಿ ಮಾಡಿ, ನೂತನ ಅಧ್ಯಕ್ಷ ಎಂ.ರಮೇಶ್ ರನ್ನು ಅಭಿನಂದಿಸಿದರು.ಸಂಘದ ನೂತನ ಅಧ್ಯಕ್ಷ ಎಂ.ರಮೇಶ್ ಮಾತನಾಡಿ ತಾಲೂಕಿನ ರೈತರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿ ಎಲ್ಲರ ಸಹಕಾರದಿಂದ ಸಂಘವನ್ನು ಇನ್ನು ಹೆಚ್ಚಿನ ಅಭಿವೃದ್ದಿ ಪಡಿಸಲಾಗುವುದು, ತಮ್ಮನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಎಲ್ಸರಿಗೂ ಕೃತಜ್ಞತೆ ಅರ್ಪಿಸಿದರು,ಸಂಘದ ಉಪಾಧ್ಯಕ್ಷ ಎಚ್.ಪರಶುರಾಮ್, ನಿರ್ದೇಶಕರಾದ ಟಿ.ಜಿ.ಸುರೇಶ್, ಟಿ.ಜಿ.ಮಂಜುನಾಥ್, ಟಿ.ಎಸ್.ಎಸ್.ಆರ್.ಎಸ್.ರಾಮಚಂದ್ರ ಮಾತನಾಡಿದರು. ನಿರ್ದೇಶಕರಾದ ಟಿ.ವಿ.ಗಿರಿರಾಜ್, ಈಶ್ವರ ಸಂಕಿ, ಕಲಾವತಿ, ರೇಣುಕಮ್ಮ ಸಿ.ಇ.ಒ.ಮೋಹನರಾಜ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.29ಕೆಟಿಆರ್.ಕೆ.08ಃ
ತರೀಕೆರೆಯಲ್ಲಿ ಶ್ರೀ ರೇವಣ ಸಿದ್ದೇಶ್ವರ ಪ್ರಾ.ಕೃ.ಪತ್ತಿನ ಸಹಕಾರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಎಂ.ರಮೇಶ್ ಅವರನ್ನು ಅಭಿನಂದಿಸಲಾಯಿತು. ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ನರೇಂದ್ರ, ಸಂಘದ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್ ವರ್ಮ, ಸಂಘದ ನಿರ್ದೇಶಕರು ಇದ್ದಾರೆ.