ಸಾರಾಂಶ
ಆಲೂರಿನ ವಾಟೆಹೊಳೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸುಮಾರು ಹದಿನೆಂಟು ಸಾವಿರ ಹೆಕ್ಟರ್ ಭೂ ಪ್ರದೇಶವಿದ್ದು ಎಲ್ಲರೂ ಮಧ್ಯಮವರ್ಗದ ರೈತಾಪಿಜನರು ಈ ವಾಟೆಹೊಳೆ ಜಲಾಶಯದ ನೀರನ್ನು ಬೇಸಿಗೆ ಕಾಲದಲ್ಲಿ ಅವಲಂಬಿಸಿದ್ದು ಕೃಷಿ ಮಾಡಲು ಅನುಕೂಲವಾಗುತ್ತದೆ. ಬೇಸರದ ವಿಷಯವೆಂದರೆ ವಾಟೆಹೊಳೆ ನಾಲೆಯು ಹದಗೆಟ್ಟು ಅವೈಜ್ಞಾನಿಕವಾಗಿರುವುದು ರೈತರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದರು. ಜನರ ಜೀವನಾಡಿಯಾಗಿರುವ ವಾಟೆಹೊಳೆ ಜಲಾಶಯ ಮಳೆಗಾಲಕ್ಕೂ ಮುಂಚೆಯೇ ಜೂನ್ ತಿಂಗಳಲ್ಲೆ ಉತ್ತಮ ಮಳೆಯಾಗಿ ಭರ್ತಿಯಾಗಿದೆ ಎಂದರು.
ಹಾಸನ: ಜನರ ಜೀವನಾಡಿಯಾಗಿರುವ ವಾಟೆಹೊಳೆ ಜಲಾಶಯ ಮಳೆಗಾಲಕ್ಕೂ ಮುಂಚೆಯೇ ಜೂನ್ ತಿಂಗಳಲ್ಲೆ ಉತ್ತಮ ಮಳೆಯಾಗಿ ಭರ್ತಿಯಾಗಿದ್ದು, ರೈತರಲ್ಲಿ ಸಂತಸ ತಂದಿದೆ ಎಂದು ಶಾಸಕರಾದ ಸಿಮೆಂಟ್ ಮಂಜು ತಿಳಿಸಿದ್ದಾರೆ.
ಆಲೂರಿನ ವಾಟೆಹೊಳೆ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಭಾಗದಲ್ಲಿ ಸುಮಾರು ಹದಿನೆಂಟು ಸಾವಿರ ಹೆಕ್ಟರ್ ಭೂ ಪ್ರದೇಶವಿದ್ದು ಎಲ್ಲರೂ ಮಧ್ಯಮವರ್ಗದ ರೈತಾಪಿಜನರು ಈ ವಾಟೆಹೊಳೆ ಜಲಾಶಯದ ನೀರನ್ನು ಬೇಸಿಗೆ ಕಾಲದಲ್ಲಿ ಅವಲಂಬಿಸಿದ್ದು ಕೃಷಿ ಮಾಡಲು ಅನುಕೂಲವಾಗುತ್ತದೆ. ಬೇಸರದ ವಿಷಯವೆಂದರೆ ವಾಟೆಹೊಳೆ ನಾಲೆಯು ಹದಗೆಟ್ಟು ಅವೈಜ್ಞಾನಿಕವಾಗಿರುವುದು ರೈತರಲ್ಲಿ ಅಸಮಾಧಾನ ಉಂಟುಮಾಡಿದೆ ಎಂದರು.ನಾಲೆಯು ಅವೈಜ್ಞಾನಿಕವಾಗಿರುವ ಕಾರಣದಿಂದ ನೀರನ್ನು ಬಿಟ್ಟ ಕೂಡಲೇ ನಾಲೆಯಲ್ಲಿ ಹರಿಯದೆ ಎಲ್ಲೆಂದರಲ್ಲಿ ನೀರು ಪೋಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅದನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.