ಸದಸ್ಯತ್ವ ಅಭಿಯಾನ ಚುರುಕುಗೊಳಿಸಲು ಶಾಸಕ ಚವ್ಹಾಣ್‌ ಕರೆ

| Published : Sep 25 2024, 12:50 AM IST

ಸಾರಾಂಶ

ಹಲವು ಗ್ರಾಮಗಳಿಗೆ ಶಾಸಕ ಪ್ರಭು ಚವ್ಹಾಣ ಸಂಚರಿಸಿ ಬಿಜೆಪಿ ಸದಸ್ಯತ್ವ ಅಭಿಯಾನದ ಕೆಲಸ ತೀವ್ರಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕಮಲನಗರ

ತಾಲೂಕಿನ ಹಲವು ಗ್ರಾಮಗಳಿಗೆ ಮಂಗಳವಾರ ಶಾಸಕ ಪ್ರಭು ಚವ್ಹಾಣ ಸಂಚರಿಸಿ ಬಿಜೆಪಿ ಸದಸ್ಯತ್ವ ಅಭಿಯಾನದ ಕೆಲಸ ತೀವ್ರಗೊಳಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು. ಡೋಣಗಾಂವ್‌ ವಾಡಿ, ಡೋಣಗಾಂವ್‌ (ಎಂ), ರಂಡ್ಯಾಳ, ಖತಗಾಂವ್‌, ಮದನೂರ, ಕಮಲನಗರ, ಮುರುಗ (ಕೆ), ಬಾಳೂರ, ಹೊರಂಡಿ, ಸೋನಾಳ, ಸೋನಾಳವಾಡಿ, ಕಾಳಗಾಪೂರ, ಹುಲಸೂರ, ಖೇಡ್‌, ಸಂಗಣ್‌, ಡಿಗ್ಗಿ, ರಾಂಪೂರ, ಕೊಟಗ್ಯಾಳ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಚರಿಸಿ ಬೂತ್‌ ಅಧ್ಯಕ್ಷರು, ಗ್ರಾಮದ ಪ್ರಮುಖರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಅಭಿಯಾನದಡಿ ಗ್ರಾಮದಲ್ಲಿ ಈವರೆಗೆ ಆಗಿರುವ ಕೆಲಸವನ್ನು ಪರಿಶೀಲಿಸಿದರು. ಪ್ರತಿ ಗ್ರಾಮಕ್ಕೆ ಗುರಿ ನೀಡಲಾಗಿದೆ. ಅದರಂತೆ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಬೇಕೆಂದು ಹೇಳಿದರು.

ಪಕ್ಷದ ಸದಸ್ಯರು ಹೊಸದಾಗಿ ಸದಸ್ಯತ್ವ ಪಡೆಯಲೇಬೇಕು. ಪ್ರಧಾನಿ ನರೇಂದ್ರ ಮೋದಿ ಒಳಗೊಂಡು ಪಕ್ಷದ ಪ್ರಮುಖರೆಲ್ಲರೂ ಸದಸ್ಯತ್ವ ಪಡೆದಿದ್ದಾರೆ. ಅದರಂತೆ ಪಕ್ಷದ ಪ್ರತಿಯೊಬ್ಬರೂ ಕೂಡ ಸದಸ್ಯರಾಗಬೇಕಿದೆ. ಆ್ಯಪ್‌ ಮುಖಾಂತರ ನೋಂದಣಿಗೆ ಅವಕಾಶವಿದ್ದು, ಮೊದಲಿಗೆ ಕಾರ್ಯಕರ್ತರು ಕಡ್ಡಾಯವಾಗಿ ನೋಂದಣಿಯಾಗಬೇಕು. ನಂತರ ತಮ್ಮ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರ ಹೆಸರನ್ನು ಸೇರಿಸಬೇಕು. ಕ್ಷೇತ್ರದಿಂದ ಗರಿಷ್ಠ ಸಂಖ್ಯೆಯ ಸದಸ್ಯರನ್ನು ಸೇರ್ಪಡೆ ಮಾಡಬೇಕಿದೆ. ಸಮಯ ಕಡಿಮೆಯಿದ್ದು, ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ್‌, ಬಂಟಿ ರಾಂಪೂರೆ ಸೇರಿದಂತೆ ಪಕ್ಷದ ಮುಖಂಡರು, ಗ್ರಾಮದ ಹಿರಿಯರು, ಬೂತ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.