ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಕುಟ್ಟ ಸಮೀಪ ಕಾಯಿಮಾನಿ ಬಳಿ ಕಾಡಾನೆ ದಾಳಿಗೆ ಬಲಿಯಾದ ಬೆಳೆಗಾರ ಮೂಕಳಮಾಡ ರತ್ತು ಬೋಪಯ್ಯ ಅವರ ಮನೆಗೆ ತೆರಳಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮೃತಪಟ್ಟ ಬೆಳೆಗಾರನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಮಡಿಕೇರಿ: ಶ್ರೀಮಂಗಲ ಹೋಬಳಿ ವ್ಯಾಪ್ತಿಯ ಕುಟ್ಟ ಸಮೀಪ ಕಾಯಿಮಾನಿ ಬಳಿ ಕಾಡಾನೆ ದಾಳಿಗೆ ಬಲಿಯಾದ ಬೆಳೆಗಾರ ಮೂಕಳಮಾಡ ರತ್ತು ಬೋಪಯ್ಯ ಅವರ ಮನೆಗೆ ತೆರಳಿದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಮೃತಪಟ್ಟ ಬೆಳೆಗಾರನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪ್ರಮುಖರಾದ ಪಲ್ವಿನ್ ಪೂಣಚ್ಚ, ಪೆಮ್ಮಂಡ ರಾಜ ಕುಶಾಲಪ್ಪ, ತೀತಿರ ಮಂದಣ್ಣ, ಮಚ್ಚಮಾಡ ಪ್ರತು ಮತ್ತಿತರರು ಹಾಜರಿದ್ದರು.----------------------------------------ಹೈಕಮಾಂಡ್ ನಿರ್ಣಯಕ್ಕೆ ಬದ್ಧ: ಮಂತರ್ ಗೌಡಮಡಿಕೇರಿ: ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿ ಪರೇಡ್ ನಡೆಸುತ್ತಿರುವುದು ನನಗೆ ಗೊತ್ತಿರುವಂತೆ ಇದು ನಾಲ್ಕನೇ ಬಾರಿಗೆ ಶಾಸಕರು ದೆಹಲಿಗೆ ಹೋಗುತ್ತಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೋ, ಹೊಸ ಸಂಪುಟ ರಚನೆಯಾಗುತ್ತೋ ಗೊತ್ತಿಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಗೆಯೇ ನಮ್ಮ ಕೆಪಿಸಿಸಿ ಅಧ್ಯಕ್ಷರು ಏನು ಹೇಳಿದ್ದಾರೋ ಅದಕ್ಕೆ ಬದ್ಧರಾಗಿದ್ದೇವೆ. ರಾಜ್ಯದಲ್ಲಿ ಮೊದಲ ಬಾರಿಗೆ 35ಕ್ಕೂ ಹೆಚ್ಚು ಜನ ಶಾಸಕರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಶಾಸಕರು ಗೆದ್ದಿದ್ದೇವೆ. ಇಲ್ಲಿನ ಸಮಸ್ಯೆ ಬಗೆಹರಿಸಲು ಜಿಲ್ಲೆಗೆ ಸಚಿವ ಸ್ಥಾನ ಬೇಕಾಗಿದೆ ಎಂದರು.ರಾಜ್ಯದಲ್ಲಿ ನಮಗಿಂತಲೂ ಹಿರಿಯ ಶಾಸಕರು ಹಲವರಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ನಾನು ಕೂಡ ಸಚಿವ ಸಂಪುಟ ಪುನರ್ ರಚನೆ ಬೇಡಿಕೆಗೆ ಸಹಿ ಹಾಕಿದ್ದೆ. ಯಾರೇ ಸಚಿವ ಸ್ಥಾನ ಕೇಳಿದರೂ ಅದು ತಪ್ಪಿಲ್ಲ. ಆದರೆ ಕೊಡುವುದು ಬಿಡುವುದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಹೇಳಿದರು.