ಕುಣಿಗಲ್ ಬೀದಿ, ಕಲ್ಯಾಣಿ ಬೀದಿ ತಿರುಮಂಗಿ ಆಳ್ವಾರ್ ಬೀದಿಯ ರಸ್ತೆ ಕಾಮಗಾರಿಗಳು ಆರಂಭವಾಗಲಿವೆ. ಬಳಿಘಟ್ಟ, ರಾಂಪುರ ಮತ್ತು ಕೊಡಗಳ್ಳಿಯಲ್ಲಿ ಗುಟಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದೆ ಕಾಮಗಾರಿ ನಿರ್ವಹಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಎರಡು ಕೋಟಿ ರು. ವೆಚ್ಚದ ಕಾಂಕ್ರೀಟ್ ರಸ್ತೆಗಳ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿದರು.

ಮೇಲುಕೋಟೆಯ ಒಳಭಾಗದ ಕಾಂಕ್ರೀಟ್ ರಸ್ತೆಗಳು ಹಾಳಾಗಿ ಓಡಾಡಲು ಸಹ ಕಷ್ಟಕರವಾಗಿತ್ತು. ರಸ್ತೆ ನವೀಕರಣ ಮಾಡಬೇಕೆಂಬ ನಾಗರಿಕರ ಮನವಿಗೆ ಸ್ಪಂದಿಸಿದ ಶಾಸಕರು ಎರಡು ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಗುಣಮಟ್ಟದ ಲೋಪವಿಲ್ಲದಂತೆ ನಿರ್ಮಾಣ ಮಾಡಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಕುಣಿಗಲ್ ಬೀದಿ, ಕಲ್ಯಾಣಿ ಬೀದಿ ತಿರುಮಂಗಿ ಆಳ್ವಾರ್ ಬೀದಿಯ ರಸ್ತೆ ಕಾಮಗಾರಿಗಳು ಆರಂಭವಾಗಲಿವೆ. ಬಳಿಘಟ್ಟ, ರಾಂಪುರ ಮತ್ತು ಕೊಡಗಳ್ಳಿಯಲ್ಲಿ ಗುಟಮಟ್ಟದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಗುಣಮಟ್ಟದಲ್ಲಿ ರಾಜಿಯಾಗದೆ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ನಿರ್ಮಾಣ ಮಾಡುವ ಜೊತೆಗೆ ಕ್ಷೇತ್ರದಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಪ್ರವಾಸಿ ಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.

ಮಾರ್ಚ್ 28ರಂದು ನಡೆಯುವ ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಶೀಘ್ರದಲ್ಲೇ ಮೇಲುಕೋಟೆಯಲ್ಲಿ ಅಧಿಕಾರಿಗಳು ಸಭೆ ಕರೆಯಲಾಗುತ್ತದೆ. ಸರ್ಕಾರಿ ಪ್ರೌಡಶಾಲೆ ಮಂಜೂರು ಸಂಬಂಧ ಪಾಂಡವಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ಸಲ್ಲಿಸಿದ್ದು, ಸರ್ಕಾರದಿಂದ ಎರಡು ಮೂರು ದಿನಗಳಲ್ಲಿ ಆದೇಶ ಮಾಡಿಸುತ್ತೇನೆ ಎಂದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ಜಿ.ಕೆ.ಕುಮಾರ್, ಭಾಗ್ಯಮ್ಮ, ಲಕ್ಷ್ಮಮ್ಮ, ಪಿಡಿಒ ರಾಜೇಶ್ವರ್, ವಿಎಸ್.ಎಸ್.ಎನ್ ಅಧ್ಯಕ್ಷ ಯೋಗನರಸಿಂಹೇಗೌಡ, ರೈತ ಸಂಘದ ಮುಖಂಡರಾದ ಟಗರು, ದೀಲೀಪ್, ಯೋಗಿ, ಗಂಗಾಧರ್, ರಾಮಸ್ವಾಮಿ, ಅಯ್ಯಂಗಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.