10 ದಿನಗಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

| Published : Sep 29 2024, 01:40 AM IST

10 ದಿನಗಳ ಆರೋಗ್ಯ ತಪಾಸಣೆ ಶಿಬಿರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಲು ಲಯನ್ಸ್ ಕ್ಲಬ್ ಆಫ್ ಸಂಸ್ಥೆಯೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು. ಜನರು ಆರೋಗ್ಯ ತಪಾಸಣೆಗಾಗಿ ಸಾವಿರಾರು ಹಣ ಖರ್ಚು ಮಾಡಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸೇವೆ ವೃತ್ತಿ ವಾಣಿಜ್ಯಕರಣಗೊಳ್ಳುತ್ತಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಲಯನ್ಸ್ ಕ್ಲಬ್ ಆಫ್ ಫ್ರೆಂಚ್‌ರಾಕ್ಸ್ ಸಂಸ್ಥೆ ತಾಲೂಕಿನ ವಿವಿಧೆಡೆ 10 ದಿನಗಳ ಕಾಲ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆ ಶಿಬಿರಕ್ಕೆ ಹಳೇಬೀಡು ಗ್ರಾಮದಲ್ಲಿ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಚಾಲನೆ ನೀಡಿದರು.

ಗ್ರಾಮದಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ ಕಾರ್‍ಯಕ್ರಮದಲ್ಲಿ ಲಯನ್ಸ್ ಕ್ಲಬ್ ಆಫ್ ಫ್ರೆಂಚ್‌ ರಾಕ್ಸ್ ಪಾಂಡವಪುರ, ಅಂತಾರಾಷ್ಟ್ರೀಯ ಲಯನ್ ಸಂಸ್ಥೆ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಈಸ್ಟ್ ಪ್ರಾಜೆಕ್ಟ್, ನಯನಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮೈಸೂರು, ಆಪ್ತ ಪಾಲಿ ಕ್ಲಿನಿಕ್ ಮತ್ತು ಡೇ ಕೇರ್ ಸೆಂಟರ್ ಹಾಗೂ ಪ್ರಕಾಶ್ ಗ್ಯಾಸ್ ಏಜೆನ್ಸಿ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡಲು ಲಯನ್ಸ್ ಕ್ಲಬ್ ಆಫ್ ಸಂಸ್ಥೆಯೂ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುತ್ತಿದೆ. ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ತಹಸೀಲ್ದಾರ್ ಸಂತೋಷ್ ಮಾತನಾಡಿ, ಜನರು ಆರೋಗ್ಯ ತಪಾಸಣೆಗಾಗಿ ಸಾವಿರಾರು ಹಣ ಖರ್ಚು ಮಾಡಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯ ಸೇವೆ ವೃತ್ತಿ ವಾಣಿಜ್ಯಕರಣಗೊಳ್ಳುತ್ತಿದೆ. ಲಯನ್ಸ್ ಸಂಸ್ಥೆಗಳು ಇಂತಹ ಆರೋಗ್ಯ ಶಿಬಿರವನ್ನು ನಡೆಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದರು.

ಸಂಸ್ಥೆ ಅಧ್ಯಕ್ಷ ಕರೀಗೌಡ ಮಾತನಾಡಿ, ಇಂದು ಹಳೇಬೀಡು, ಸೆ.29ರಂದು ನಾರಾಯಣಪುರ, ಸೆ.30 ಜಕ್ಕನಹಳ್ಳಿ, ಅ.1 ರಂದು ಚಿನಕುರಳಿ, ಅ.3 ಪಾಂಡವಪುರ, ಅ.4 ಬ್ಯಾಡರಹಳ್ಳಿ, ಅ.5 ಕ್ಯಾತನಹಳ್ಳಿ. ಅ.6 ಕೆನ್ನಾಳು, ಅ.7 ಕೆರೆತೊಣ್ಣೂರು, ಹಾಗೂ ಅ.8ರಂದು ಕೆ.ಬೆಟ್ಟಹಳ್ಳಿ ಗ್ರಾಮಗಳಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದರು.

ಈ ವೇಳೆ ತಾಪಂ ಇಒ ಲೋಕೇಶ್ ಮೂರ್ತಿ, ಸಂಸ್ಥೆ ಕಾರ್‍ಯದರ್ಶಿ ಪುಟ್ಟಬಸವೇಗೌಡ, ಗ್ರಾಪಂ ಅಧ್ಯಕ್ಷ ಧನಂಜಯ, ಉಪಾಧ್ಯಕ್ಷೆ ಗೌರಮ್ಮ, ಸದಸ್ಯೆ ಪುಟ್ಟೇಗೌಡ, ಲಯನ್ಸ್ ಸದಸ್ಯರಾದ ದಯಾನಂದ, ವಿಜಯೇಂದ್ರ, ವಿಜಿಕುಮಾರ್, ತಿಮ್ಮೇಗೌಡ, ಡಾ.ಸಿ.ಎ.ಅರವಿಂದ್ ಸೇರಿದಂತೆ ಹಲವರು ಇದ್ದರು.