ರಾಗಿ, ಕೊಬ್ಬರಿ ಖರೀದಿ ಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ

| Published : Feb 09 2024, 01:53 AM IST

ರಾಗಿ, ಕೊಬ್ಬರಿ ಖರೀದಿ ಕೇಂದ್ರಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಖರೀದಿ ಕೇಂದ್ರಗಳಲ್ಲಿ ನಡೆಯುವ ವ್ಯವಹಾರ, ವಹಿವಾಟು ನೇರವಾಗಿ ರೈತರೊಂದಿಗೆ ಇರಬೇಕು. ರೈತರ ಮಧ್ಯೆ ದಲ್ಲಾಳಿಗಳು ಮಧ್ಯಪ್ರವೇಶಿಸ ಬಾರದು. ಎಪಿಎಂಸಿಗಳಲ್ಲಿ ದಲ್ಲಾಳಿಗಳಿಗೆ ಮಧ್ಯಪ್ರವೇಶವಿಲ್ಲ ಎಂದು ಬೋರ್ಡ್ ಹಾಕಬೇಕು. ಖರೀದಿ ಕೇಂದ್ರಗಳು ವರ್ಷವಿಡಿ ತೆರೆದಿರಬೇಕು. ಸೀಮಿತ ಅವಧಿಯಲ್ಲಿ ತೆರೆದು ಮುಚ್ಚುವುದರಿಂದ ರೈತರಿಗೆ ಅನಾನುಕೂಲ ಉಂಟಾಗಲಿದೆ. ಈಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು.

ಕನ್ನಡಪ್ರಭ ವಾರ್ತೆ ಪಾಂಡವಪುರ

ರಾಗಿ ಮತ್ತು ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳ ಮಧ್ಯ ಪ್ರವೇಶಕ್ಕೆ ಅವಕಾಶ ನೀಡಬೇಡಿ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಾಲೂಕಿನ ಹಾರೋಹಳ್ಳಿ ಎಪಿಎಂಸಿ ಆವರಣದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವತಿಯಿಂದ ಆರಂಭಗೊಂಡ ರಾಗಿ ಮತ್ತು ಉಂಡೆಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ಖರೀದಿ ಕೇಂದ್ರಗಳಲ್ಲಿ ನಡೆಯುವ ವ್ಯವಹಾರ, ವಹಿವಾಟು ನೇರವಾಗಿ ರೈತರೊಂದಿಗೆ ಇರಬೇಕು. ರೈತರ ಮಧ್ಯೆ ದಲ್ಲಾಳಿಗಳು ಮಧ್ಯಪ್ರವೇಶಿಸ ಬಾರದು. ಎಪಿಎಂಸಿಗಳಲ್ಲಿ ದಲ್ಲಾಳಿಗಳಿಗೆ ಮಧ್ಯಪ್ರವೇಶವಿಲ್ಲ ಎಂದು ಬೋರ್ಡ್ ಹಾಕಿ ಎಂದು ಸೂಚಿಸಿದರು.

ಖರೀದಿ ಕೇಂದ್ರಗಳು ವರ್ಷವಿಡಿ ತೆರೆದಿರಬೇಕು. ಸೀಮಿತ ಅವಧಿಯಲ್ಲಿ ತೆರೆದು ಮುಚ್ಚುವುದರಿಂದ ರೈತರಿಗೆ ಅನಾನುಕೂಲ ಉಂಟಾಗಲಿದೆ. ಈಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ತಾಲೂಕಿನ ರೈತರು ಕೊಬ್ಬರಿ ಮಾರಾಟಕ್ಕಾಗಿ ಕೆ.ಆರ್.ಪೇಟೆ ಖರೀದಿ ಕೇಂದ್ರಕ್ಕೆ ಹೋಗಬೇಕಾಗಿತ್ತು. ಇದೀಗ ಪಾಂಡವಪುರದಲ್ಲಿ ಆರಂಭಗೊಂಡಿರುವುದರಿಂದ ಅನುಕೂಲವಾಗಲಿದೆ. ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಸೋಮವಾರದಿಂದ ಆರಂಭಗೊಳ್ಳುವ ಅಧಿವೇಶನದಲ್ಲೂ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಖರೀದಿ ಕೇಂದ್ರದಲ್ಲಿ 3606 ಮಂದಿ ರೈತರು 84,224 ಕ್ವಿಂಟಲ್ ರಾಗಿ ನೋಂದಾಯಿಸಿಕೊಂಡಿದ್ದಾರೆ. 933 ಮಂದಿ ರೈತರು 12,142 ಟನ್ ಕೊಬ್ಬರಿಗೆ ನೊಂದಾಯಿಸಿದ್ದಾರೆ. ಎಳ ನೀರು ಮಾರಾಟದಲ್ಲೂ ಸಾಕಷ್ಟು ಅವ್ಯವಹಾರಗಳನ್ನು ನಡೆಯುತ್ತಿದೆ ಎಂದರು.

ಇದೇ ವೇಳೆ ರಾಜ್ಯ ಸಹಕಾರ ಮರಾಟ ಮಹಾ ಮಂಡಳಿ ನಿದೇರ್ಶಕ ಕೆ.ಎಸ್.ಮೋಹನ್, ಅಧಿಕಾರಿಗಳಾದ ವೆಂಕಟೇಶ್, ಆರ್.ಶೀಲಾ, ಕಾರ್ಯದರ್ಶಿ ಪಂಕಜ, ಸಹಕಾರ್ಯದರ್ಶಿ ಸಾಕಮ್ಮ, ಶಿರಸ್ತೇದಾರ್ ರಮ್ಯ ಸೇರಿದಂತೆ ರೈತ ಮುಂಖಡರು ಹಾಜರಿದ್ದರು.