ಗ್ರಾಮದ ಜನರು, ಎತ್ತಿನಗಾಡಿ ಬಂಡಿ ಓಡಾಡಲು ಅನುಕೂಲಕ್ಕಾಗಿ ಹೊಳಲು ಗ್ರಾಮದ ಚಿಕ್ಕಬೀದಿ 45 ಲಕ್ಷ ರು. ಮತ್ತು ದೊಡ್ಡ ಬೀದಿ 45 ಲಕ್ಷ ರು. ರಸ್ತೆ ಮತ್ತು 2 ಕೋಟಿ ರು. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಚರಂಡಿ ಕಾಂಕ್ರಿಟ್ ರಸ್ತೆ ಮತ್ತು ಗ್ರಾಮದ ಕೆರೆ ಏರಿಯಿಂದ ಗದ್ದೆ ಕಡೆಗೆ ಡಾಂಬರ್ ರಸ್ತೆ (ಸುಮಾರು 4 ಕಿಲೋಮೀಟರ್ ವರೆಗೆ) ಗುದ್ದಲಿ ಪೂಜೆ ನೆರವೇರಿಸಲಾಗಿದೆ.
ಮಂಡ್ಯ:
ತಾಲೂಕು ಹೊಳಲು ಗ್ರಾಮದಲ್ಲಿ (ಕರ್ನಾಟಕ ಭೂಸೇನಾ ನಿಗಮ ಹಾಗೂ ಕಾವೇರಿ ನೀರಾವರಿ ನಿಗಮದ ವತಿಯಿಂದ) ಸುಮಾರು 2 ಕೋಟಿ 90 ಲಕ್ಷ ರು. ವೆಚ್ಚದಲ್ಲಿ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗುದ್ದಲಿ ಪೂಜೆ ನೆರವೇರಿಸಿದರು.ಗ್ರಾಮದ ಜನರು, ಎತ್ತಿನಗಾಡಿ ಬಂಡಿ ಓಡಾಡಲು ಅನುಕೂಲಕ್ಕಾಗಿ ಹೊಳಲು ಗ್ರಾಮದ ಚಿಕ್ಕಬೀದಿ 45 ಲಕ್ಷ ರು. ಮತ್ತು ದೊಡ್ಡ ಬೀದಿ 45 ಲಕ್ಷ ರು. ರಸ್ತೆ ಮತ್ತು 2 ಕೋಟಿ ರು. ವೆಚ್ಚದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಚರಂಡಿ ಕಾಂಕ್ರಿಟ್ ರಸ್ತೆ ಮತ್ತು ಗ್ರಾಮದ ಕೆರೆ ಏರಿಯಿಂದ ಗದ್ದೆ ಕಡೆಗೆ ಡಾಂಬರ್ ರಸ್ತೆ (ಸುಮಾರು 4 ಕಿಲೋಮೀಟರ್ ವರೆಗೆ) ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ಈ ವೇಳೆ ಮಾಜಿ ಶಾಸಕರಾದ ಎಚ್.ಬಿ.ರಾಮು, ಗ್ರಾಪಂ ಅಧ್ಯಕ್ಷೆ ರಮ್ಯ ಚೇತನ್, ಮಾಜಿ ಅಧ್ಯಕ್ಷ ಎಚ್.ಎಲ್.ಅಭಿನಂದನ್, ಅರ್ಪಿತ, ಮಾಜಿ ಉಪಾಧ್ಯಕ್ಷ ನಾರಾಯಣಪ್ಪ, ಡೈರಿ ಅಧ್ಯಕ್ಷ ಸಾವಿತ್ರಮ್ಮ, ಸೊಸೈಟಿ ಅಧ್ಯಕ್ಷ ಸಚ್ಚಿದಾನಂದ, ಮಾಜಿ ಅಧ್ಯಕ್ಷ ನಿಂಗೇಗೌಡ, ಮುಖಂಡರಾದ ಸದಾನಂದ, ಜೆಟ್ಟಿ ಕುಮಾರ್, ಪಟೇಲ್ ರಾಮ್, ತಿಮ್ಮೇಗೌಡ, ತಾಂಡವಯ್ಯ ಶಿವಪ್ಪ, ತಂಟಿರ ಶಿವಪ್ಪ, ರಾಜಶೇಖರ್, ವಿನೋದ್, ಎಚ್.ಬಿ.ಕೃಷ್ಣ, ಚೇತನ್, ಬಾಬು,ನಿಂಗರಾಜಮ್ಮ, ಪದ್ಮ, ಶ್ರೀ ತಾಂಡವೇಶ್ವರ ದೇವಸ್ಥಾನದ ಅರ್ಚಕರಾದ ದೀಪು ದೀಕ್ಷಿತ್, ಕಿರಿಯ ಕಾರ್ಯಪಾಲಕ ಎಂಜಿನಿಯರ್ ಕೆಂಪರಾಜು, ಸಹಾಯ ಕಾರ್ಯ ಪಾಲಕ ಇಂಜಿನಿಯರ್ ವಿಶ್ವನಾಥ್ ಹಾಗೂ ಗುತ್ತಿಗೆದಾರರಾದ ಅಭಿನಂದನ್, ಚಂದನ್, ಶ್ಯಾಮ್, ಹಾಗೂ ಗ್ರಾಮಸ್ಥರು, ಸ್ಥಳೀಯ ಸಂಘದ ಪದಾಧಿಕಾರಿಗಳು ಗ್ರಾಪಂ ಸದಸ್ಯರುಗಳು ಉಪಸ್ಥಿತರಿದ್ದರು.ಇಂದು ಸತ್ಸಂಗ ಕಾರ್ಯಕ್ರಮನಾಗಮಂಗಲ: ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ಜಯಂತ್ಯುತ್ಸವದ ಪ್ರಯುಕ್ತ ತಾಲೂಕಿನ ಚಿಣ್ಯ ಸರ್ಕಲ್‌ನಲ್ಲಿ ಜ.29ರ ಸಂಜೆ 5.30ಕ್ಕೆ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಈ ಸತ್ಸಂಗ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.