ನಂದಿಗುಂದ ಗ್ರಾಮಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ

| Published : Oct 13 2025, 02:03 AM IST

ಸಾರಾಂಶ

ನಂದಿಗುಂದ ಗ್ರಾಮಕ್ಕೆ ಶಾಸಕ ಡಾ. ಮಂತರ್‌ಗೌಡ ಈಚೆಗೆ ಭೇಟಿ ನೀಡಿ ಆಗಬೇಕಾದ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನ ನಂದಿಗುಂದ ಗ್ರಾಮಕ್ಕೆ ಶಾಸಕ ಡಾ. ಮಂತರ್‌ಗೌಡ ಈಚೆಗೆ ಭೇಟಿ ನೀಡಿ ಗ್ರಾಮದಲ್ಲಿ ಆಗಬೇಕಾದ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಂಡರು.ನಂದಿಗುಂದ ಶ್ರೀ ನಂಜುಂಡೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಉಮೇಶ್ ಚಿಣ್ಣಪ್ಪ ಮಾತನಾಡಿ, ಗ್ರಾಮದೊಳಗಿನ ರಸ್ತೆ ಅಭಿವೃದ್ಧಿ, ಆಯ್ದಭಾಗಗಳನ್ನು ಚರಂಡಿ ನಿರ್ಮಾಣ ಹಾಗು ದೇವಾಲಯ ಪ್ರಾಂಗಣ ಕಾಮಗಾರಿಗೆ ಅನುದಾನ ನೀಡುವಂತೆ ಮನವಿ ಮಾಡಿದರು.ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಲಾಗುವುದು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಲಾಗುವುದು ಎಂದು ಶಾಸಕರು ಹೇಳಿದರು. ಈ ಸಂದರ್ಭ ಗ್ರಾಮ ಸಮಿತಿ ಕಾರ್ಯದರ್ಶಿ ಎನ್.ಟಿ. ಗುರುಪ್ರಸಾದ್, ಹಿರಿಯರಾದ ಎನ್.ಎಸ್. ರಾಜಪ್ಪ, ರಜಿನಿ ಹೊನ್ನರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್ ಮತ್ತಿತರರು ಇದ್ದರು.