ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ಸುಮಾರು 33 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಬಡ್ತಿ ಮುಖ್ಯ ಶಿಕ್ಷಕ ಜಕ್ಕನಹಳ್ಳಿ ಜೆ.ಬಿ.ನಾಗರಾಜು, ನಿವೃತ್ತ ವೀರಯೋಧ ರಜಿತ್ ಕುಮಾರ್ ಅವರನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು.ತಾಲೂಕಿನ ಹರಿಹರಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶಾಲೆ ಎಸ್ಡಿಎಂಸಿ ಹಾಗೂ ಗ್ರಾಮಸ್ಥರ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕರು ಮಾತನಾಡಿ, ನಿಸ್ವಾರ್ಥ, ಅರ್ಪಣಾ ಭಾವನೆಯಿಂದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವುದು ಸೇರಿದಂತೆ ಮಾದರಿಯಾಗಿ ನಿರ್ವಹಣೆ ಮಾಡುವ ಮೂಲಕ ಜನ ಮೆಚ್ಚಿದ ಶಿಕ್ಷಕ ಎಂಬ ಕೀರ್ತಿಗೆ ಜೆ.ಬಿ.ನಾಗರಾಜು ಭಾಜನರಾಗಿದ್ದಾರೆ ಎಂದರು.
ಗ್ರಾಮದ ವೀರಯೋಧ ಎಚ್.ಎನ್.ರಜತ್‌ಕುಮಾರ್ ಸುಮಾರು 17 ವರ್ಷ ಭಾರತೀಯ ಸೇನೆಯಲ್ಲಿ ಯೋಧರಾಗಿ ವಿವಿಧ ಹಂತಗಳಲ್ಲಿ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರಿಗೆ ಗ್ರಾಮಸ್ಥರು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸಂತಸದ ವಿಚಾರ ಎಂದರು.ಕಾರ್ಯಕ್ರಮದಲ್ಲಿ ಎಸ್ಡಿಎಂಸಿ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್. ಪೂರ್ಣಚಂದ್ರತೇಜಸ್ವಿ ಮಾತನಾಡಿದರು. ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಅಂ.ಚಿ.ಸಣ್ಣಸ್ವಾಮೀಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಆರ್.ಆನಂದಕುಮಾರ್, ಪ್ರಧಾನ ಕಾರ್ಯದರ್ಶಿ ಎಲ್.ಎಸ್.ಧರ್ಮಪ್ಪ, ನಿರ್ದೇಶಕರಾದ ಪದ್ಮೇಶ್, ಲಕ್ಷ್ಮಣಗೌಡ, ಜಿ.ಎಸ್.ಮಂಜು, ನಾರಾಯಣ್, ಸ್ನೇಕ್ ರಂಗಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್, ಗ್ರಾಪಂ ಅಧ್ಯಕ್ಷೆ ರತಿ ಶ್ರೀಧರ್, ಉಪಾಧ್ಯಕ್ಷ ನಂದೀಶ್, ಪಿಡಿಒ ನಯಿದಾ ಅಕ್ತರ್, ತಾಲೂಕು ಶಿಕ್ಷಣ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ರಮೇಶ್, ನಿರ್ದೇಶಕರಾದ ಹಳೆಯೂರು ಯೋಗೇಶ್ ಸೇರಿದಂತೆ ನೂರಾರು ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.