ರೈತ ಸಂಘದ ಪ್ರತಿಭಟನೆಯಲ್ಲಿ ಗಣೇಶ್‌ ಪ್ರಸಾದ್‌ ವಾಕ್ಸಮರಕ್ಕೆ ಮಾಜಿ ಶಾಸಕ ಆಕ್ರೋಶ

ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಸುಮೋಟೋ ಕೇಸಿಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಒತ್ತಾಯ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ನೀವು ಸರ್ವಾಧಿಕಾರಿಯಲ್ಲ. ನಿಮ್ಮ ಕುಮ್ಮಕ್ಕಿನಿಂದಲೇ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ನಡೆಸಲು ಹೋಗಿದ್ದಾರೆ. ಇದು ಅಕ್ಷಮ್ಯ ಅಪರಾಧ ಎಂದು ಮಾಜಿ ಶಾಸಕ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್‌. ನಿರಂಜನ ಕುಮಾರ್‌ ಹರಿಹಾಯ್ದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರು, ಶಾಸಕರೇ ನೀವು ಮೊದಲು ರೈತ ಕುಲಕ್ಕೆ ಕ್ಷಮೆ ಕೋರಬೇಕು. ದೌರ್ಜನ್ಯ ಎಸಗಿದವರ ಮೇಲೆ ಸುಮೋಟೋ ಕೇಸು ದಾಖಲಿಸಬೇಕು. ಶಾಸಕರೇ ನಿಮ್ಮ ಕೋಪ-ತಾಪ, ವೀರಾವೇಷ, ತಾಕತ್ತು ಕಳೆದ 3 ವರ್ಷಗಳಿಂದ ತಾಲೂಕಿನಲ್ಲಿ ತುಂಬದ ಕೆರೆಗಳಿಗೆ ನೀರು ತುಂಬಿಸುವಲ್ಲಿ ತೋರಲಿಲ್ಲ. ಇನ್ನಾದರೂ ಕೆರೆಗಳಿಗೆ ನೀರು ತುಂಬಿಸಿ ಎಂದು ಸವಾಲು ಹಾಕಿದರು.ಪ್ರಶ್ನಿಸುವ ಹಾಗಿಲ್ಲ:ನಿಮ್ಮನ್ನು ಜನ, ಸಂಘಟನೆಗಳು ಪ್ರಶ್ನಿಸುವಂತಿಲ್ಲವೇ? ನೀವೇನು ಸರ್ವಾಧಿಕಾರಿಯೇ? ಜನರ ಕೆಲಸ ಮಾಡುವ ಜವಾಬ್ದಾರಿ ನಿಮ್ಮದು. ಅದು ಬಿಟ್ಟು ಕ್ಷೇತ್ರದಲ್ಲಿ ನಿಮ್ಮ ಕೆಲ ಬೆಂಬಲಿಗರೊಂದಿಗೆ ಪ್ರತಿಭಟನಾನಿರತರ ಮೇಲೆ ಗೂಂಡಾಗಿರಿ ಮಾಡಲು ಹೊರಟಿದ್ದೀರಲ್ಲ ಇದಕ್ಕೇ ನೀವು ಶಾಸಕರಾಗಬೇಕಿತ್ತಾ ಎಂದು ಗುಡುಗಿದರು.ರೈತರೆಂದರೆ ಅಸಡ್ಡೆಯೇ?ರೈತರು ಅಂದ್ರೆ ನಿಮಗೆ ಅಷ್ಟು ಅಸೆಡ್ಡೆಯೇ? ಕಳೆದ ೩ ವರ್ಷಗಳಿಂದ ಕೆರೆಗಳಿಗೆ ನೀರು ತುಂಬಿಸಲು ಆಗಲಿಲ್ಲ. ನೆರೆಯ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ನೀವು ತಾಂತ್ರಿಕ ಸಮಸ್ಯೆ ಎಂದು ಪದೇ ಪದೇ ಹೇಳುತ್ತಿದ್ದಿರಲ್ಲ. ನಿಜಕ್ಕೂ ನಿಮಗೆ ಮಾನ, ಮಾರ್ಯಾದೆ, ನಾಚಿಕೆ ಎಂಬುದು ಇಲ್ಲವೇ ಎಂದು ವಾಗ್ದಾಳಿ ನಡೆಸಿದರು.ಕೇಳುವುದರಲ್ಲಿ ತಪ್ಪೇನಿದೆ:ರೈತರ ಪ್ರತಿಭಟನೆಯಲ್ಲಿ ತಾವು ಭಾಗವಹಿಸಿದ್ದಿರಿ. ಪ್ರತಿಭಟನಾನಿರತ ದಿಲೀಪ್‌ ಅವರು ಹಂಗಳದಲ್ಲಿ ಬಸ್‌ ನಿಲ್ದಾಣವಿಲ್ಲ. ಕುಡಿಯುವ ನೀರಿಲ್ಲ ಎಂದು ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಹೇಳಿ. ಶಾಸಕನಾಗಿ ತಾಳ್ಮೆಯಿಂದ ಪ್ರತಿಭಟನಾಕಾರರ ಪ್ರಶ್ನೆಗೆ ಉತ್ತರ ನೀಡಲಾಗದೆ ತೋಳೆರಿಸಿಕೊಂಡು ಹೋದರಲ್ಲ. ಇದು ಸರಿಯೇ ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲಸ್ವಾಮಿ, ಮಂಡಲ ಬಿಜೆಪಿ ಅಧ್ಯಕ್ಷ ಸಿ. ಮಹದೇವ ಪ್ರಸಾದ್‌, ಮಾಜಿ ಅಧ್ಯಕ್ಷ ಎಲ್. ಸುರೇಶ್‌, ಗ್ರಾಪಂ ಮಾಜಿ ಅಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ದಲಿತ ಮುಖಂಡ ಹಂಗಳಪುರ ರೇವಣ್ಣ, ಬಸವರಾಜು, ಪುರಸಭೆ ಮಾಜಿ ಸದಸ್ಯ ನಾಗೇಶ್‌, ಹನುಮಂತಶೆಟ್ಟಿ ಇದ್ದರು.

---ಇದಕ್ಕಾ ಎಂಎಲ್‌ಎ ಆಗಿರೋದು!ಕೇರಳಕ್ಕೆ ಜಾನುವಾರು ಹೋಗುತ್ತಿವೆ.ಕಲ್ಲು ಸಾಗಾಣಿಕೆ ಆಗುತ್ತಿದೆ.ಗಾಂಜಾ ಹಾಗೂ ಕೇರಳ ಲಾಟರಿ ಹಾಗೂ ಪಡಿತರ ಅಕ್ಕಿ ಮಾರಾಟವಾಗುತ್ತಿದೆ. ಇದಕ್ಕಾ ನೀವು ಶಾಸಕರಾಗಿರೋದು ಎಂದು ಮಾಜಿ ಶಾಸಕ ಸಿ.ಎಸ್. ನಿರಂಜನ್‌ ಕುಮಾರ್‌ ಪ್ರಶ್ನಿಸಿದರು.ಶಾಸಕರೆ ಕೇರಳಕ್ಕೆ ಗುಂಡ್ಲುಪೇಟೆ ಸಂಪತ್ತು ಲೂಟಿಯಾದರೂ ಪರವಾಗಿಲ್ಲ. ನಿಮಗೆ ಬೇಕಾಗಿರುವುದು ಲಾಭ. ಅನುಕೂಲ ಹಾಗೂ ಕಮೀಷನ್‌ ಎಂದು ಆರೋಪಿಸಿದರು.ಕಂಟ್ರಾಕ್ಟರ್‌ ಕಥೆತಾಲೂಕಿನ ಲೋಕಲ್‌ ಗುತ್ತಿಗೆದಾರರ ಕಥೆ ಏನಾಗಿದೆ ನಿಮಗೆ ಗೊತ್ತೇ. ನೆರೆ ಜಿಲ್ಲೆಗಳ ಗುತ್ತಿಗೆದಾರರ ಏಜೆನ್ಸಿ ಮೂಲಕ ಕಾಮಗಾರಿಗಳನ್ನು ಕೊಡುತ್ತಿದ್ದೀರಿ. ನಿಮಗೆ ಕಮೀಷನ್‌ ಮುಖ್ಯವೇ ಹೊರತು ಸ್ಥಳೀಯ ಕಂಟ್ರಾಕ್ಟರ್‌ ಬೇಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.---


ಬಾಕ್ಸ್‌...)))

ನಿಮ್ಮ ತಂದೆ ರೈತರನ್ನು ಮೈಗಳ್ಳ ಅಂದಿದ್ರು: ನಿರಂಜನ್ಶಾಸಕ ಗಣೇಶ್‌ ಪ್ರಸಾದ್‌ರ ತಂದೆ ಎಚ್.ಎಸ್. ಮಹದೇವ ಪ್ರಸಾದ್‌ ಸಚಿವರಾಗಿದ್ದ ವೇಳೆ ರೈತರ ಸಭೆಯಲ್ಲಿ ರೈತರನ್ನು ಮೈಗಳ್ಳರು ಎಂದಿದ್ದರು. ಆದರೆ ನೀವು ರೈತರ ಮೇಲೆ ನಿಮ್ಮ ಬೆಂಬಲಿಗರನ್ನು ಬಿಟ್ಟು ದೌರ್ಜನ್ಯ ಮಾಡಿಸಲು ಪ್ರಯತ್ನಿಸಿದಿರಿ ಎಂದು ಕುಟುಕಿದರು.ಇನ್ಮುಂದೆ ನಿಮ್ಮಪ್ಪನ ಹೆಸರೇಳ್ಬೇಡಿ:ಗುಂಡ್ಲುಪೇಟೆ: ಪ್ರತಿಭಟನಾ ಸಭೆಯಲ್ಲಿ ರೈತರೊಬ್ಬರು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕುರಿತು ನಿಮ್ಮಪ್ಪ, ನಿಮ್ಮಮ್ಮ ಹೆಸರು ಹೇಳಿದರು ಎಂದಾಕ್ಷಣ ರೊಚ್ಚಿಗೆದ್ದಿರಿ ,ಆದರೆ ನೀವೇ ಸಭೆ, ಸಮಾರಂಭದಲ್ಲಿ ನಮ್ಮಪ್ಪ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳುತ್ತಿರಲ್ಲ. ಇನ್ಮುಂದೆ ನಿಮ್ಮಪ್ಪನ ಹೆಸರು ಹೇಳುವುದು ಬಿಡಿ ಎಂದು ತಾಕೀತು ಮಾಡಿದರು.ಸಭೆ, ಸಮಾರಂಭದಲ್ಲಿ ಮಹದೇವ ಪ್ರಸಾದ್‌ ಹೆಸರೇಳಿಕೊಂಡು ಭಾಷಣ ಬಿಗಿಯುತ್ತೀರಿ. ಅದೇ ಜನ ನಿಮ್ಮಪ್ಪನ ಕಾಲದಲ್ಲೂ ಕೆಲಸ ಆಗಿಲ್ಲ ಎಂದಾಕ್ಷಣ ಕೋಪ ಏಕೆ ಎಂದರು.ದಾರಿಯಲ್ಲಿ ಹೋಗುವವರನ್ನು ಕೇಳುವುದಕ್ಕಾಗುತ್ತದೆಯೇ?

ಶಾಸಕರೆ ಎಚ್.ಎಂ. ಗಣೇಶ್‌ ಪ್ರಸಾದ್‌ ಅವರೇ ನಿಮ್ಮ ತಂದೆ (ಮಹದೇವ ಪ್ರಸಾದ್‌) ಹಾಗೂ ನಿಮ್ಮಮ್ಮ (ಗೀತಾ ಮಹದೇವ ಪ್ರಸಾದ್) ಶಾಸಕ ಹಾಗೂ ಸಚಿವರಾಗಿದ್ದಕ್ಕೆ ಜನ ಕೇಳುತ್ತಾರೆ. ನಮ್ಮಪ್ಪನನ್ನು ಕೇಳೋಕ್ಕಾಗುತ್ತಾ ಅಥವಾ ದಾರಿಯಲ್ಲಿ ಹೋಗುವವರನ್ನು ಕೇಳುವುದಕ್ಕೆ ಆಗುತ್ತದೆಯೇ ಹೇಳಿ ಎಂದು ಪ್ರಶ್ನಿಸಿದರು.

---೨೨ಜಿಪಿಟಿ೧ಗುಂಡ್ಲುಪೇಟೆ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ,ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.