ಸಾರಾಂಶ
ನೂತನ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಸೇವೆಯೇ ಪ್ರಧಾನವಾಗಿಸಿ ಕೊಂಡಿರುವ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ನ ಎಲ್ಲ ಕಾರ್ಯಕ್ರಮಗಳಿಗೂ ತಾವು ಸಹಕರಿಸುವುದಾಗಿ ಹೇಳಿದ ಶಾಸಕ ಜಿ.ಎಚ್.ಶ್ರೀನಿವಾಸ್ ಸಮಾಜದಲ್ಲಿ ಉತ್ತಮ ಸೇವಾ ಕಾರ್ಯಮಾಡುವಂತೆ ಕರೆ ನೀಡಿದರು.ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ತರೀಕೆರೆಯಿಂದ ಪಟ್ಟಣದ ಸಪ್ತಗಿರಿ ಕನ್ ವೆನ್ ಷನ್ ಹಾಲ್ ನಲ್ಲಿ ನಡೆದ ನೂತನ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಹೊಸದಾಗಿ ಪ್ರಾರಂಭಿಸುತ್ತಿರುವ ಲಯನ್ಸ್ ಕ್ಲಬ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷವಾಗುತ್ತದೆ. ರೋಟರಿ ಮತ್ತು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಎರಡೂ ಪ್ರತಿಷ್ಠಿತ ಸಂಸ್ಥೆಗಳಾಗಿದ್ದು ಸೇವೆಯೇ ಪ್ರಧಾನ ಎಂದ ಅವರು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ನ ಎಲ್ಲ ಕಾರ್ಯಕ್ರಮಗಳಿಗೂ ತಾವು ಸಹಕರಿಸುವುದಾಗಿ ಹೇಳಿದರು
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಜಿಲ್ಲಾ ಗವರ್ನರ್ ಎಂ.ಬಿ. ಭಾರತಿ ಪ್ರತಿಜ್ಞಾ ವಿಧಿ ಬೋಧಿಸಿ, ಜನರ ಸಂಕಷ್ಟ ನಿವಾರಣೆ ಸಲುವಾಗಿಯೇ ಲಯನ್ಸ್ ಮುಡುಪಾಗಿದೆ. ಇತ್ತೀಚಿಗೆ ಕೇರಳದಲ್ಲಿ ನಡೆದ ಅನಾಹುತಕ್ಕೆ ಸರ್ಕಾರಕ್ಕಿಂತ ಮೊದಲೇ ಲಯನ್ಸ್ ಇಂಟರ್ ನ್ಯಾಷನಲ್ ಕೋಟ್ಯಂತರ ಹಣ ಬಿಡುಗಡೆ ಮಾಡಿತು. ಪ್ರಪಂಚದಲ್ಲಿ ಎಲ್ಲೇ ಸಮಸ್ಯೆ ಆದರೂ ಲಯನ್ಸ್ ನವರು ಸಹಾಯದಲ್ಲಿ ಮೊದಲಿಗರು ಎಂದು ಹೇಳಿದರು. ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಚಾರ್ಟರ್ ಅಧ್ಯಕ್ಷರಾಗಿ ಲಯನ್ ಸಾಯಿಕುಮಾರ್ ಎ.ಎಸ್. ಅಧಿಕಾರ ಸ್ವೀಕರಿಸಿ ಮಾತನಾಡಿ ದೇವರು ನಮಗೆ ಎಲ್ಲಾ ಅಂಗಾಂಗ ನೀಡಿದ್ದಾನೆ. ಆದರೆ ಸಮಾಜ ಸೇವೆ ಮಾಡುವ ಮನಸ್ಸು ಕೊಡಬೇಕು ಹಾಗೂ ಈ ಲಯನ್ಸ್ ಕ್ಲಬ್ ಸೇವೆಗಾಗಿಯೇ ಮುಡುಪಾಗಿರುವುದರಿಂದ ಎಲ್ಲರ ಸಹಕಾರದಿಂದ ಸೇವೆ ಮಾಡೋಣ. ಜನ ಸೇವೆಯೇ ಜನಾರ್ದನ ಸೇವೆ ಎಂದು ಹೇಳಿ ಎಲ್ಲೊ ಹುಡುಕಿದೆ ಇಲ್ಲದ ದೇವರ ಹಾಡನ್ನು ಸುಶ್ರಾವ್ಯವಾಗಿ ಹಾಡಿದರು. ಅನುಷ್ಠಾನ ಅಧಿಕಾರಿ ಲಯನ್ ಎಚ್.ಆರ್. ಹರೀಶ್ ಮಾತನಾಡಿ ನೂತನ ಅಧ್ಯಕ್ಷ ಲಯನ್ ಸಾಯಿಕುಮಾರ್ ಅವರ ತಂಡ ನೋಡಿದರೆ ತುಂಬಾ ಸಂತೋಷ ಆಗುತ್ತಿದೆ. ಕನಿಷ್ಠ ನೂರು ವರುಷ ಈ ಸಂಸ್ಥೆ ಇರುತ್ತದೆ ಎಂದು ಹೇಳಿದರು. ಪುರಸಭೆ ಅಧ್ಯಕ್ಷ ವಸಂತ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮತ್ತಿತರರು ಮಾತನಾಡಿದರು. 2024-2025 ನೇ ಸಾಲಿಗೆ ಲಯನ್ಸ್ ಕ್ಲಬ್ ಪದಾಧಿಕಾರಿಗಳಾಗಿ ಲಯನ್ ಮುರಳಿ ಟಿ.ಆರ್., ಕಾರ್ಯದರ್ಶಿ, ಖಜಾಂಚಿ ಲಯನ್ ಹರೀಶ್, ಉಪಾಧ್ಯಕ್ಷರಾಗಿ ಲಯನ್ ಟಿ.ಎನ್. ಮಂಜುನಾಥ್ ಮತ್ತಿತರರು ಅಧಿಕಾರ ಸ್ವೀಗಕರಿಸಿದರು. ಲಯನ್ ಲೀಲಾ ಸಾಯಿಕುಮಾರ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚಿಕ್ಕಮಗಳೂರು ಲಯನ್ಸ್ ಕ್ಲಬ್ ಪದಾದಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ತರೀಕೆರೆ ಲಯನ್ಸ್ ಕ್ಲಬ್ ನ ಎಲ್ಲಾ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಕ್ಲಬ್ ನಿಂದ ಸಹಾಯ ನೀಡಲಾಯಿತು.4ಕೆಟಿಆರ್.ಕೆ.1ಃತರೀಕೆರೆಯಲ್ಲಿ ನೂತನ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ನಿಂದ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಉದ್ಗಾಟನೆ ಮತ್ತು ಪದಗ್ರಹಣ ಸಮಾರಂಭದ ಉದ್ಗಾಟನೆಯನ್ನು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಚಾರ್ಟರ್ ಅಧ್ಯಕ್ಷ ಲಯನ್ ಸಾಯಿಕುಮಾರ್ ಎ.ಎಸ್.ಮತ್ತು ಲಯನ್ ಲೀಲಾ ಸಾಯಿಕುಮಾರ್ ಅವರು ನೆರವೇರಿಸಿದರು. ಶಾಸಕ ಜಿ.ಹೆಚ್.ಶ್ರೀನಿವಾಸ್, ಪುರಸಬೆ ಅಧ್ಯಕ್ಷ ವಸಂತಕುಮಾರ್ ಮತ್ತಿತರರು ಇದ್ದಾರೆ.