ಸಾರಾಂಶ
ಪಾವಗಡ ತಾಲೂಕಿನ ಮಂಗಳವಾಡ, ಅರಸೀಕೆರೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ
ಕನ್ನಡಪ್ರಭ ವಾರ್ತೆ ಪಾವಗಡ
ಶಾಲಾ ಕಾಲೇಜು ವಿದ್ಯಾರ್ಥಿಗಳ ಒಡಾಟಕ್ಕಾಗಿ ಸರ್ಕಾರಿ ಬಸ್ ಸೌಲಭ್ಯ ಸೇರಿದಂತೆ ಮಾಸಾಶನ ಮಂಜೂರಾತಿ, ಹಕ್ಕುಪತ್ರ ವಿತರಣೆ ಇತರೆ ಆನೇಕ ಸ್ಥಳೀಯ ಸಮಸ್ಯೆ ನಿವಾರಣೆಗೆ ಒತ್ತಾಯಿಸಿ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಶಾಸಕ ವೆಂಕಟೇಶ್ ಅವರಿಗೆ ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಂದ ಸಾಲು ಸಾಲು ಸಮಸ್ಯೆಗಳ ಅರ್ಜಿ ಸಲ್ಲಿಸಿದರು.ತಾಲೂಕು ಕಚೇರಿ, ತಾ.ಪಂ. ಹಾಗೂ ತಾಲೂಕು ವಿವಿಧ ಇಲಾಖೆಗಳ ಸಹಯೋಗದಲ್ಲಿ ಬುಧವಾರ ತಾಲೂಕಿನ ಅರಸೀಕೆರೆ ಹಾಗೂ ಮಂಗಳವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಜನಸಂಪರ್ಕ ಸಭೆಯ ಉದ್ಘಾಟನೆ ನೆರೆವೇರಿಸಿದ ಬಳಿಕ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿದರು.
ನಿಮ್ಮ ಅರ್ಜಿ ಸ್ವೀಕರಿಸಿ, ನಿಮ್ಮ ಸಮಸ್ಯೆ ಅಲಿಸಿದ್ದೇನೆ. ಮಾಶಾಸನ, ಕುಡಿವ ನೀರು, ವಸತಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಸೇರಿದಂತೆ ಆರ್ಹರ ಸಮಸ್ಯೆ ಸ್ಥಳದಲ್ಲಿಯೇ ನಿವಾರಿಸುವ ಸಲುವಾಗಿ ಜನ ಸಂಪರ್ಕ ಸಭೆ ಏರ್ಪಾಡಿಸಿದ್ದು, ಸ್ಥಳದಲ್ಲಿಯೇ ಗ್ರಾಮೀಣ ಪ್ರದೇಶದ ಜನತೆಯ ಕಣ್ಣೀರು ಒರೆಸುವ ಸಲುವಾಗಿಜೀ ಜನಸಂಪರ್ಕ ಸಭೆ ಇರುವುದು ಎಂದರು.ತಹಸೀಲ್ದಾರ್ ಡಿ.ಎನ್. ವರದರಾಜ್ ಹಾಗೂ ಕೃಷಿ,ತೋಟಗಾರಿಕೆ ಹಾಗೂ ರೇಷ್ಮೆ ಇತರೆ ಇಲಾಖೆಯ ಅಧಿಕಾರಿಗಳು ಸೌಲಭ್ಯ ಸದ್ಬಳಿಕೆ ಕುರಿತು ಮಾತನಾಡಿದರು.
ಮಾಶಾಸನ ಮಂಜೂರಾತಿ, ವಸತಿ ರಸ್ತೆ ನಿರ್ಮಾಣ ಜಮೀನುಗಳ ಸಮಸ್ಯೆ ನಿವಾರಣೆಗೆ ಸಂಬಂಧಪಟ್ಟಂತೆ 250ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹರಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದ್ದು, ಇದೇ ವೇಳೆ ಎಪಿಎಂಸಿ ಮಾಜಿ ಅಧ್ಯಕ್ಷ ಕರೆಕ್ಯಾತನಹಳ್ಲಿ ಮಂಜುನಾಥ್, ಗ್ರಾಪಂ ಅಧ್ಯಕ್ಷ ಸೋರಣ್ಣ, ಮಾಜಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶಿವಪ್ಪ ಗೋಪಿ, ಪ್ರಕಾಶ್ ಹಾಗೂ ಲಕ್ಷ್ಮೀನರಸಿಂಹಪ್ಪ ಸೇರಿದಂತೆ ತಾಪಂ ಇಒ ಜಾನಕಿರಾಮ್ ಇತರೆ ಎಲ್ಲಾ ಇಲಾಖಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.BOXನಮ್ಮ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸಿ: ವಿದ್ಯಾರ್ಥಿಗಳ ಅಳಲು
ತಮ್ಮ ಗ್ರಾಮಕ್ಕೆ ಸಾರಿಗೆ ಬಸ್ ಬಾರದ ಹಿನ್ನೆಲೆ ಶಾಲೆಗೆ ಹೋಗಲು ತಡವಾಗುತ್ತಿದೆ ಎಂದು ಆನೇಕ ಮಂದಿ ವಿದ್ಯಾರ್ಥಿಗಳು ಶಾಸಕರ ಬಳಿ ಆಳಲು ತೋಡಿಕೊಂಡಿದೆ. ತಾಲೂಕಿನ ನಿಡಗಲ್ ಹೋಬಳಿಯ ಕಾಮನಹಟ್ಟಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಬಸ್ ವ್ಯವಸ್ಥೆ ಇಲ್ಲದ ಕಾರಣ ಸರಿಯಾದ ಸಮಯಕ್ಕೆ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಶೀಘ್ರವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.ಇದಕ್ಕೆ ಸ್ಪಂದಿಸಿದ ಶಾಸಕ ಎಚ್.ವಿ. ವೆಂಕಟೇಶ್ ಸಮೀಪದಲ್ಲಿಯೇ ಇದ್ದ ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್ ಹನುಮಂತರಾಯಪ್ಪರನ್ನು ಕರೆಸಿ ನಾಳೆಯಿಂದಲೇ ಕಾಮನಹಟ್ಟಿಯ ಗ್ರಾಮಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಪೋ ಮ್ಯಾನೇಜರ್ ಇನ್ನೂ ಎರಡು ದಿನಗಳಲ್ಲಿ ನಿಮ್ಮ ಊರಿಗೆ ಬಸ್ ಸೌಲಭ್ಯ ಕಲ್ಪಿಸುತ್ತೇವೆ ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.