ಸಾರಾಂಶ
- ಇಲ್ಲದಿದ್ದರೆ ಬಿ.ಪಿ.ಹರೀಶ್ ವಿರುದ್ಧ ಉಗ್ರ ಪ್ರತಿಭಟನೆ: ವೀರಶೈವ ಲಿಂಗಾಯತ ಮಹಾಸಭಾ ಎಚ್ಚರಿಕೆ- - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ವಿರುದ್ಧ ಹಗುರ ಹೇಳಿಕೆ ನೀಡಿರುವ ಹರಿಹರ ಶಾಸಕ ಬಿ.ಪಿ.ಹರೀಶ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಎಚ್ಚರಿಸಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಶಂಭು ಎಸ್.ಉರೇಕೊಂಡಿ ಅವರು, ಹರಿಹರ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ವೇಳೆ ಶಾಮನೂರು ಕುಟುಂಬದ ಬಗ್ಗೆ ರಾಜಕೀಯವಾಗಿ ಮಾತನಾಡಿದ್ದಾರೆ. ಆದರೆ, ಐಪಿಎಸ್ ಅಧಿಕಾರಿಯಾದ ಎಸ್‌ಪಿ ಉಮಾ ಪ್ರಕಾಶ ಅವರನ್ನು ಪಮೇರಿಯನ್ ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ಬಿ.ಪಿ.ಹರೀಶ ತಕ್ಷಣ ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಎಸ್‌ಪಿ ಅವರಿಗೆ ಕ್ಷಮೆ ಕೇಳಬೇಕು ಎಂದರು.ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಹಿರಿಯ ಶ್ರೇಣಿಯ ಐಪಿಎಸ್ ಅಧಿಕಾರಿ. 2 ವರ್ಷದಿಂದ ದಾವಣಗೆರೆ ನಗರ, ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನ್ಯಾಮತಿಯ ಬ್ಯಾಂಕ್‌ನ ಬಹುಕೋಟಿ ಚಿನ್ನಾಭರಣ ದರೋಡೆ ಪ್ರಕರಣ ಭೇದಿಸಿ, ದೇಶದ ಗಮನ ಸೆಳೆದಿದ್ದರು. ಕಳೆದ ವರ್ಷ ಗಣೇಶೋತ್ಸವ ವೇಳೆ ಹಿಂದೂ-ಮುಸ್ಲಿಂ ಗಲಾಟೆ ಆಗುವುದನ್ನು ಮುನ್ನೆಚ್ಚರಿಕೆ ವಹಿಸಿ, ಜಿಲ್ಲಾ ಕೇಂದ್ರದಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು ಹಗಲಿರುಳು ಶ್ರಮಿಸಿದ್ದಾರೆ. ಡಿಜೆ ಸೌಂಡ್ ಸಿಸ್ಟಂಗೆ ಅನುಮತಿಗಾಗಿ ಎಷ್ಟೇ ಒತ್ತಬಂದರೂ ಸಂಪೂರ್ಣ ನಿಷೇಧ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದ ಅವರು, ಶಾಸಕ ಹರೀಶ್ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದ್ದೇವೆ ಎಂದರು.
ಎಸ್‌ಪಿ ನಿಮಗೆ ಗೌರವ ನೀಡುತ್ತಿಲ್ಲವೆಂದರೆ ಗೃಹ ಮಂತ್ರಿಗಳ ಬಳಿ ದೂರು ಹೇಳಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದಲ್ಲ. ಒಬ್ಬ ಪ್ರಾಮಾಣಿಕ, ಪ್ರತಿಭಾವಂತ ಐಪಿಎಸ್ ಅಧಿಕಾರಿಯಾದ ಉಮಾ ಬಗ್ಗೆ ಕೀಳಾಗಿ ಮಾತನಾಡುವ ಮುನ್ನ ಎಚ್ಚರ ವಹಿಸಬೇಕು ಎಂದು ಶಂಭು ತಾಕೀತು ಮಾಡಿದರು.ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಜೆ.ಶಿವರಾಜ, ಅಜಿತ್ ಆಲೂರು, ಸುನಿಲ್ ಬಾಗೇವಾಡಿ, ಮಲ್ಲಿಕಾರ್ಜುನ ಕಟ್ಟಿಮನಿ, ಜಿ.ಜೆ.ನಯನ್ ಇತರರು ಇದ್ದರು.
- - --3ಕೆಡಿವಿಜಿ12:
ದಾವಣಗೆರೆಯಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಶಂಭು ಎಸ್.ಉರೇಕೊಂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.