ಶಿಥಿಲೀಕರಣ ಘಟಕ ನಿರ್ಮಾಣಕ್ಕೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ

| Published : Dec 16 2024, 12:48 AM IST

ಶಿಥಿಲೀಕರಣ ಘಟಕ ನಿರ್ಮಾಣಕ್ಕೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಸದರಿ ಶಿಥಿಲೀಕರಣ ಎರಡು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ರೈತರು ಹಣ್ಣು ಮತ್ತು ತರಕಾರಿಗಳ ಬೆಲೆ ಕುಸಿದಾಗ ಮಧ್ಯವರ್ತಿಗಳು ಕೇಳಿದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿತ್ತು. ಈಗ ಇಲ್ಲಿ ಶಿಥಿಲೀಕರಣ ಕೇಂದ್ರ ಆರಂಭವಾಗುವುದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕನಿಷ್ಠ ೦೩ ತಿಂಗಳ ಕಾಲ ಇಲ್ಲಿ ಸ್ಟೋರೇಜ್ ಮಾಡಿ ಅತ್ಯುತ್ತಮ ಬೆಲೆ ಬಂದಾಗ ಮಾರಾಟ ಮಾಡಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಮುರುಕನಹಳ್ಳಿ ಬಳಿಯ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ 10.25 ಕೋಟಿ ರು. ವೆಚ್ಚದ ಅತ್ಯಾಧುನಿಕ ತೋಟಗಾರಿಕಾ ಬೆಳೆಗಳ ಶಿಥಿಲೀಕರಣ ಘಟಕ ನಿರ್ಮಾಣಕ್ಕೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು, ಹಣ್ಣು ಮತ್ತು ತರಕಾರಿ ಬೆಳೆಗಳ ರೈತರ ಹಿತದೃಷ್ಟಿಯಿಂದ ಈ ಹಿಂದಿನ ಸರ್ಕಾರದಲ್ಲಿ ಸುಮಾರು 5.75 ಕೋಟಿ ರು. ವೆಚ್ಚದಲ್ಲಿ ತೋಟಗಾರಿಕಾ ಬೆಳೆಗಳ ಸಂರಕ್ಷಣೆಯ ಉದ್ದೇಶದಿಂದ ಶಿಥಿಲೀಕರಣ ಘಟಕಕ್ಕೆ ಹಸಿರು ನಿಶಾನೆ ದೊರಕಿತ್ತು ಎಂದರು.

ಕಡಿಮೆ ಸಾಮರ್ಥ್ಯದ ಶಿಥಿಲೀಕರಣ ಘಟಕದಿಂದ ರೈತರಿಗೆ ಪೂರ್ಣ ಪ್ರಮಾಣದ ಅನುಕೂಲ ಆಗುತ್ತಿರಲಿಲ್ಲ. ಇದನ್ನು ಮನಗಂಡು ನಾನು ಶಾಸಕನಾದ ನಂತರ ಹೊಸದಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಆರ್ ಐಡಿಎಫ್ ಯೋಜನೆಯಡಿ 10.25 ಕೋಟಿ ರು. ವೆಚ್ಚದ ಅತ್ಯಾಧುನಿಕ ತೋಟಗಾರಿಕಾ ಶಿಥಿಲೀಕರಣ ಘಟಕವನ್ನು ತಾಲೂಕಿಗೆ ಮಂಜೂರು ಮಾಡಿಸಿ ಇಂದು ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆ ಮಾಡಿದ್ದೇನೆ ಎಂದು ಹೇಳಿದರು.

ಮಂಡ್ಯ ಜಿಲ್ಲೆಯಲ್ಲಿ ಆರಂಭವಾಗುತ್ತಿರುವ ಮೊಟ್ಟ ಮೊದಲ ತೋಟಗಾರಿಕಾ ಬೆಳೆಗಳ ಶಿಥಿಲೀಕರಣ ಘಟಕ ಇದಾಗಿದೆ. ಇದಕ್ಕೆ ಸಹಕರಿಸಿದ ರಾಜ್ಯ ತೋಟಗಾರಿಕಾ ಇಲಾಖೆ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಸದರಿ ಶಿಥಿಲೀಕರಣ ಎರಡು ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ರೈತರು ಹಣ್ಣು ಮತ್ತು ತರಕಾರಿಗಳ ಬೆಲೆ ಕುಸಿದಾಗ ಮಧ್ಯವರ್ತಿಗಳು ಕೇಳಿದ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾಗಿತ್ತು. ಈಗ ಇಲ್ಲಿ ಶಿಥಿಲೀಕರಣ ಕೇಂದ್ರ ಆರಂಭವಾಗುವುದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕನಿಷ್ಠ ೦೩ ತಿಂಗಳ ಕಾಲ ಇಲ್ಲಿ ಸ್ಟೋರೇಜ್ ಮಾಡಿ ಅತ್ಯುತ್ತಮ ಬೆಲೆ ಬಂದಾಗ ಮಾರಾಟ ಮಾಡಿಕೊಳ್ಳಬಹುದು. ಅತ್ಯಂತ ಕಡಿಮೆ ಬಾಡಿಗೆಗೆ ಇದ್ದು ರೈತರು ಘಟಕದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ತಾಲೂಕು ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್, ಅಧಿಕಾರಿ ಜಯರಾಂ, ಗ್ರಾಪಂ ಅಧ್ಯಕ್ಷ ಎಚ್.ಜಿ.ಶೇಖರ್, ಉಪಾಧ್ಯಕ್ಷ ಪುನೀತ್ ಕುಮಾರ್, ಸದಸ್ಯರಾದ ಜಗದೀಶ್, ವೆಂಕಟರಾಮು, ಕುಮಾರಸ್ವಾಮಿ, ಬಾಬು, ಆನಂದ, ಗ್ರಾಪಂ ಮಾಜಿ ಅಧ್ಯಕ್ಷರಾದ ಎ.ಎನ್.ದೇವರಾಜು, ಎಂ.ಎಲ್.ಶಿವಕುಮಾರ್, ಮುಖಂಡರಾದ ತಿಮ್ಮೇಗೌಡ, ಅಗಸರಹಳ್ಳಿ ವೆಂಕಟರಾಮು, ಪಿ.ಡಿ.ಓ ಸೈಯದ್ ಮುಜಾಕೀರ್ ಸೇರಿದಂತೆ ಹಲವರಿದ್ದರು.