ಸ್ಲಂ ನಿವಾಸಿಗಳಿಗೆ ವಸತಿ ಒದಗಿಸಲು ಅರ್ಹರ ಪಟ್ಟಿ ಸಿದ್ಧಪಡಿಸಲು ಶಾಸಕ ಸೂಚನೆ

| Published : Mar 22 2025, 02:05 AM IST

ಸ್ಲಂ ನಿವಾಸಿಗಳಿಗೆ ವಸತಿ ಒದಗಿಸಲು ಅರ್ಹರ ಪಟ್ಟಿ ಸಿದ್ಧಪಡಿಸಲು ಶಾಸಕ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಲಂ ನಿವಾಸಿಗಳಿಗೆ ವಸತಿ ಒದಗಿಸಲು ಅರ್ಹರಿರುವವರ ಪಟ್ಟಿ ನೀಡಿ. ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ನೀಡಲು ತಾಲೂಕಿನಲ್ಲಿ 5 ರಿಂದ 10 ಎಕರೆ ಭೂಮಿ ಗುರುತಿಸಬೇಕು. ನ್ಯೂ ತಮಿಳು ಕಾಲೋನಿ, ಹೊನ್ನಯ್ಯ ಬಡಾವಣೆ, ವಿವೇಕಾನಂದ ಬಡಾವಣೆ, ಕಾಳಪ್ಪ ಬಡಾವಣೆ, ಜಯರಾಂ ಲೇಔಟ್, ಆರ್.ಟಿ‌.ಒ ಸ್ಲಂ ನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸ್ಲಂ ನಿವಾಸಿಗಳಿಗೆ ವಸತಿ ಒದಗಿಸಲು ಅರ್ಹರಿರುವವರ ಪಟ್ಟಿಯನ್ನು ನೀಡುವಂತೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ನಿವೇಶನ ಹಾಗೂ ವಸತಿ ರಹಿತರಿಗೆ ನಿವೇಶನ ನೀಡಲು ತಾಲೂಕಿನಲ್ಲಿ 5 ರಿಂದ 10 ಎಕರೆ ಭೂಮಿ ಗುರುತಿಸುವಂತೆ ತಿಳಿಸಿದರು.

ನ್ಯೂ ತಮಿಳು ಕಾಲೋನಿ, ಹೊನ್ನಯ್ಯ ಬಡಾವಣೆ, ವಿವೇಕಾನಂದ ಬಡಾವಣೆ, ಕಾಳಪ್ಪ ಬಡಾವಣೆ, ಜಯರಾಂ ಲೇಔಟ್, ಆರ್.ಟಿ‌.ಒ ಸ್ಲಂ ನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸ್ವಂತ ಹಾಸ್ಟಲ್ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಮುಡಾ ಅಧ್ಯಕ್ಷ ನಯೀಮ್, ಜಿಲ್ಲಾಧಿಕಾರಿ ಡಾ.ಕುಮಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಯಣ್ಣಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನೋಂದಣಿ ಇಲ್ಲದೆ ಸಾಲ ನೀಡುವುದು ಕಾನೂನು ಬಾಹಿರ

ಮಂಡ್ಯ: ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರು ನೀಡುವ ದುಬಾರಿ ಬಡ್ಡಿದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ತಡೆಗಟ್ಟಲು ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025 ರನ್ನು ಸರ್ಕಾರ ಜಾರಿಗೊಳಿಸಿದೆ.

ಆದೇಶ ಜಾರಿಗೊಂಡ ಒಂದು ತಿಂಗಳೂಳಗೆ ಜಿಲ್ಲೆಯ ಸಹಕಾರ ಇಲಾಖೆಯಿಂದ ನೋಂದಾಯಿತ ಹಾಗೂ ನೋಂದಾವಣಿಯಾಗದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರು ಜಿಲ್ಲಾಧಿಕಾರಿಗಳ ಬಳಿ ನೋಂದಣಿ ಮಾಡಲು ಸೂಚಿಸಿದರೂ ಸಹ ಇಲ್ಲಿಯವರೆಗೆ ಮಾಡಿಕೊಂಡಿಲ್ಲ.

ಅಧ್ಯಾದೇಶದ ಪ್ರಕಾರ ಜಿಲ್ಲಾಧಿಕಾರಿಗಳ ಬಳಿ ನೋಂದಣಿಯಾಗದೆ ಸಾಲ ನೀಡುವುದು ಕಾನೂನು ಬಾಹಿರ. ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಅರ್ಥಿಕವಾಗಿ ದುರ್ಬಲ ಹೊಂದಿದ ಗುಂಪುಗಳು ಮತ್ತು ವ್ಯಕ್ತಿಗಳು, ವಿಶೇಷವಾಗಿ ರೈತರು, ಮಹಿಳೆಯರು ಮತ್ತು ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ(ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ-2025 ರನ್ನು ಸರ್ಕಾರ ಜಾರಿಗೊಳಿಸಿದೆ.

ಸದರಿ ಅಧ್ಯಾದೇಶದಂತೆ ಜಿಲ್ಲೆಯಲ್ಲಿ ರಿಸರ್ವ್ ಬ್ಯಾಂಕ್ ಅಫ್ ಇಂಡಿಯಾದಲ್ಲಿ ನೋಂದಾಯಿಸದೆ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿದಾರರು ಸಹ ಸಾಲ ನೀಡುವುದು ಕಾನೂನು ಬಾಹಿರವಾಗಿದೆ. ಇಂತಹ ಸಂಸ್ಥೆಗಳ ವಿರುದ್ಧವು ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.