ಸಾರಾಂಶ
ವೃದ್ಧಾಶ್ರಮ ವಾಸಿಗಳೊಂದಿಗೆ ಕೇಕ್ ಕತ್ತರಿಸಿ ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಹುಟ್ಟು ಹಬ್ಬವನ್ನು ಎನ್‌ಎಸ್‌ಯುಐ ವತಿಯಿಂದ ನಂದಗೋಕುಲ ವೃದ್ಧಾಶ್ರಮದಲ್ಲಿ ಶನಿವಾರ ಆಚರಣೆ ಮಾಡ ಲಾಯಿತು.
ರಾಮನಗರ: ವೃದ್ಧಾಶ್ರಮ ವಾಸಿಗಳೊಂದಿಗೆ ಕೇಕ್ ಕತ್ತರಿಸಿ ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಹುಟ್ಟು ಹಬ್ಬವನ್ನು ಎನ್‌ಎಸ್‌ಯುಐ ವತಿಯಿಂದ ನಂದಗೋಕುಲ ವೃದ್ಧಾಶ್ರಮದಲ್ಲಿ ಶನಿವಾರ ಆಚರಣೆ ಮಾಡ ಲಾಯಿತು.
ಈ ವೇಳೆ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್‌ಕುಮಾರ್ ಮಾತನಾಡಿ, ಹುಟ್ಟುಹಬ್ಬ ಎಂದರೆ ಅದ್ದೂರಿ ಪಾರ್ಟಿಗಳನ್ನು ಮಾಡುವ ಇಂದಿನ ದಿನಗಳಲ್ಲಿ ನಮ್ಮ ಕ್ಷೇತ್ರದ ಶಾಸಕರು ಕ್ಷೇತ್ರದ ಜನರಿಗೆ ಉಪಯುಕ್ತವಾದ ಕಾರ್ಯಕ್ರಮಗಳನ್ನು ನೀಡಿ ಉಚಿತ ಆರೋಗ್ಯ ತಪಾಸಣೆಯಲ್ಲಿ ಸುಮಾರು ೩ ಸಾವಿರಕ್ಕೂ ಹೆಚ್ಚು ಜನರಿಗೆ ಆರೋಗ್ಯ ತಪಾಸಣೆ ಮತ್ತು 285 ಯುನಿಟ್ ರಕ್ತದಾನ ಸಂಗ್ರಹಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.ಇನ್ನೊಂದೆಡೆ ಹೆತ್ತವರಿಗೆ ಹೊರೆಯಾಗಿ ಮನೆಯಿಂದ ಹೊರ ಬಂದು ವೃದ್ಧಾಶ್ರಮವನ್ನು ಅವಲಂಬಿಸಿ ರುವವರ ಜೊತೆ ಶಾಸಕರು ಕೇಕ್ ಕತ್ತರಿಸಿ ಅವರಿಗೆ ಸಿಹಿ ತಿನಿಸುವ ಮೂಲಕ ಸರಳತೆಯನ್ನು ಮೆರೆದರು. ಅಷ್ಟೆ ಅಲ್ಲದೆ ವೃದ್ಧಾಶ್ರಮದಲ್ಲಿ ಇದ್ದೇವೆ ಎಂಬ ಭಾವನೆ ನಿಮ್ಮಲ್ಲಿ ಮೂಡುವುದು ಬೇಡ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಆತ್ಮಸ್ಥೈರ್ಯ ತುಂಬಿದರಲ್ಲದೆ ಅವರಿಗೆ ಸಮವಸ್ತ್ರಗಳನ್ನು ನೀಡುವುದಾಗಿ ಹೇಳಿದರು. ಇದು ನಮ್ಮ ಶಾಸಕರು ಹುಟ್ಟು ಹಬ್ಬ ಆಚರಿಸಿಕೊಂಡ ಪರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಅಮರ್, ತಾಲ್ಲೂಕು ಉಪಾಧ್ಯಕ್ಷ ಎಂ.ಕೆ.ಪೈರೋಜ್, ನಗರ ಘಟಕದ ಅಧ್ಯಕ್ಷ ಪುನಿತ್, ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ಆದರ್ಶ್, ಮಂಜು, ಕಾರ್ತಿಕ್, ಎನ್.ಎಸ್.ಕಾರ್ತಿಕ್, ಮೋಹನ್, ಪ್ರತಾಪ್, ತಿರುಮಲ, ಸಂತೋಷ್, ನಾಗೇಶ್, ಪ್ರಮೋದ್, ನಗರಸಭೆ ಸದಸ್ಯೆ ವಿಜಯಕುಮಾರಿ ಮತ್ತಿತರರು ಇದ್ದರು.