ಸಾರಾಂಶ
ಅರಣ್ಯ ಇಲಾಖೆ ಆವರಣದಲ್ಲಿ ₹20 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಿಬ್ಬಂದಿ ಜನರ ಕಚೇರಿ ನಿರ್ಮಾಣ ಕಾಮಗಾರಿಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಗದ್ದನಕೇರಿ ಕ್ರಾಸ್ ಬಳಿ ಇರುವ ಅರಣ್ಯ ಇಲಾಖೆ ಆವರಣದಲ್ಲಿ ₹20 ಲಕ್ಷಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಿಬ್ಬಂದಿ ಜನರ ಕಚೇರಿ ನಿರ್ಮಾಣ ಕಾಮಗಾರಿಗೆ ಬೀಳಗಿ ಶಾಸಕ ಜೆ.ಟಿ.ಪಾಟೀಲ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅರಣ್ಯ ಕ್ರಮೇಣ ಬೆಳೆಯುತ್ತಿರುವುದರಿಂದ ಅರಣ್ಯರಕ್ಷಣೆಗೆ ಹಾಗೂ ಸಿಬ್ಬಂದಿಗೆ ಅನೂಕೂಲವಾಗುವ ದೃಷ್ಟಿಯಿಂದ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವದರ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಚಂದ್ರಶೇಖರ್ ಸಾಳಗುಂದಿ, ಗ್ರಾಪಂ ಸದಸ್ಯ ಶಿವು ರಾಠೋಡ, ಮಾಜಿ ಅಧ್ಯಕ್ಷ ಸಂಗಣ್ಣ ನಾಲತ್ವಾಡ, ವೆಂಕಟೇಶ ಮಜ್ಜಗಿ, ಪಾಂಡು ಪೊಲೀಸ್, ಮಹಾದೇವಪ್ಪ ಪೂಜಾರಿ, ಪಾಂಡು ಯಡಹಳ್ಳಿ, ವಿಠಲ ಪೂಜಾರಿ, ಭರಮಪ್ಪ ಕೋಟಿ, ಮುತ್ತಪ್ಪ ಮಾದರ್, ಡಿ.ಡಿ.ತುಂಬರಮಟ್ಟಿ, ಆರ್.ಎಫ್.ಓ ಬಿ.ಸಿ.ಅರಿಷಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.