ಮೊದಲನೇ ದಿನ ಸುಮಾರು ಶೇ. 95 ರಷ್ಟು ಮಕ್ಕಳಿಗೆ ನೀಡಲಾಗುವುದು. ಸುಮಾರು 1,600 ಅಧಿಕ ಬೂತುಗಳಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಯಲಕ್ಷ್ಮಿಪುರಂನ ವಿ.ವಿ. ಹೆರಿಗೆ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 2025ರ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮವನ್ನು ಶಾಸಕ ಕೆ. ಹರೀಶ್ ಗೌಡ ಅವರು ಮಕ್ಕಳಿಗೆ ಪೋಲಿಯೋ ಹನಿ ಹಾಕುವುದರ ಮೂಲಕ ಉದ್ಘಾಟಿಸಿದರು.ಮೊದಲನೇ ದಿನ ಸುಮಾರು ಶೇ. 95 ರಷ್ಟು ಮಕ್ಕಳಿಗೆ ನೀಡಲಾಗುವುದು. ಸುಮಾರು 1,600 ಅಧಿಕ ಬೂತುಗಳಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದೆ. 4000 ಅಧಿಕ ಸಿಬ್ಬಂದಿ ವರ್ಗದವರು ವೈದ್ಯರು ಮತ್ತು ತಾಲೂಕು ವೈದ್ಯಾಧಿಕಾರಿಗಳು ಒಳಗೊಂಡ ತಂಡಗಳು ಲಸಿಕಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಡಿಎಚ್.ಒ ಡಾ.ಪಿ.ಸಿ. ಕುಮಾರಸ್ವಾಮಿ ಹೇಳಿದರು. ಮೈಸೂರು ನಗರದಲ್ಲಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳು 88,879 ಮಂದಿ ಇದ್ದು 352 ಕೇಂದ್ರಗಳು, 23 ಸಂಚಾರಿ ಕೇಂದ್ರಗಳನ್ನು ತೆರೆಯಲಾಗಿದ್ದು, 67 ಮಂದಿ ಮೇಲ್ವಿಚಾರಕರು, 1500 ಮಂದಿ ಲಸಿಕೆ ನೀಡುವ ಸಿಬ್ಬಂದಿ ನೇಮಿಸಲಾಗಿದೆ. ಅಂತೆಯೇ ಜಿಲ್ಲೆಯಲ್ಲಿ ಒಟ್ಟಾರೆ 2.22,084 ಮಂದಿ ಐದು ವರ್ಷದೊಳಗಿನ ಮಕ್ಕಳಿದ್ದು, ಇವರಿಗೆ 1,648 ಕೇಂದ್ರಗಳು, 50 ಸಂಚಾರಿ ಕೇಂದ್ರಗಳು, 323 ಮಂದಿ ಮೇಲ್ವಿಚಾರಕರು, 6,792 ಮಂದಿ ಲಸಿಕೆ ಹಾಕುವ ಸಿಬ್ಬಂದಿಯನ್ನು ನೇಮಿಸಲಾಗಿದೆ.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತಕ ಡಾ. ಸತೀಶ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಮಹಮ್ಮದ್ ಶಿರಾಜ್ ಅಹಮದ್ ಮೊದಲಾದವರು ಇದ್ದರು.