ವಿದ್ಯಾರ್ಥಿಗಳನ್ನು ಸಮಕಾಲಿನ ಸಮಾಜದ ಅಭ್ಯುದಯಕ್ಕೆ ತಕ್ಕಂತೆ ರೂಪಗೊಳಿಸುವುದು ಆಧುನಿಕ ಶಿಕ್ಷಣದ ನೀತಿ ಆ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಶಿಕ್ಷಣ -ಕೌಶಲದ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಯ ದಿಕ್ಕಿನಲ್ಲಿ ಮಧುಗಿರಿಯನ್ನು ಕೊಂಡ್ಯೊಯ್ಯುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳನ್ನು ಸಮಕಾಲಿನ ಸಮಾಜದ ಅಭ್ಯುದಯಕ್ಕೆ ತಕ್ಕಂತೆ ರೂಪಗೊಳಿಸುವುದು ಆಧುನಿಕ ಶಿಕ್ಷಣದ ನೀತಿ ಆ ನಿಟ್ಟಿನಲ್ಲಿ ಇಂದಿನ ಯುವ ಜನಾಂಗಕ್ಕೆ ಶಿಕ್ಷಣ -ಕೌಶಲದ ಉದ್ಯೋಗದಲ್ಲಿ ಹೊಸ ಅವಕಾಶಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಯ ದಿಕ್ಕಿನಲ್ಲಿ ಮಧುಗಿರಿಯನ್ನು ಕೊಂಡ್ಯೊಯ್ಯುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

ತಾಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ಬಡವನಹಳ್ಳಿ- ರಂಗಾಪುರ ಗೊಲ್ಲರಹಟ್ಟಿ ಸಮೀಪ 75 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿಷ್ಠಿತ ಜಿಟಿಟಿಸಿ ಕಾಲೇಜು ನಿರ್ಮಾಣ ಕಾಮಗಾರಿಯನ್ನು ಅಧಿಕಾರಿಗಳು ಮತ್ತು ಮುಖಂಡರ ಜೊತೆ ವೀಕ್ಷಿಸಿ ಮಾತನಾಡಿದರು.

ಹೊಸತನದ ಹುಡುಕಾಟ ದೇಶವನ್ನು ಬಲಿಷ್ಠಗೊಳಿಸುತ್ತದಲ್ಲದೆ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಜ್ಞಾನ ನವೀನ ಕುಶಲತೆ ಬೆಳೆಯಲು ಮತ್ತು ಉದ್ಯೋಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಕೌಶಲಗಳನ್ನು ಹುಟ್ಟು ಹಾಕಿ ಪ್ರಸ್ತುತ ಸಮಾಜಕ್ಕೆ ಹೊಂದಿಕೊಳ್ಲುವಂತೆ ಸಜ್ಜುಗೊಳಿಸುತ್ತದೆ. ಆ ಮೂಲಕ ಮಧುಗಿರಿ ಕ್ಷೇತ್ರವನ್ನು ಶೈಕ್ಷಣಿಕ ಹಾಗೂ ಕೌಶಲಾಭಿವೃದ್ಧಿಯ ಕ್ಷೇತ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಹೊಸ ದಿಕ್ಕಿನತ ಹೆಜ್ಜೆ ಇಡಲು ಜಿಟಿಟಿಸಿ ಕಾಲೇಜು ನಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವರದಾನವಾಗಿದೆ.ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು .ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.

ನಮ್ಮ ಕ್ಷೇತ್ರದ ಯುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹೊಸ ಭರವಸೆಯ ಕೇಂದ್ರವಾಗಲಿದೆ. ಆಧುನಿಕ ,ತಾಂತ್ರಿಕ ಶಿಕ್ಷಣ,ಕೌಶಲಾಭಿವೃದ್ಧಿ ಹಾಗೂ ಕೈಗಾರಿಕಾ ವಲಯಕ್ಕೆ ಅಗತ್ಯವಿರುವ ಉದ್ಯೋಗ ಪರ ತರಬೇತಿಯನ್ನು ನೀಡುವ ಉದ್ದೇಶ ಹೋದಿರುವ ಜಿಟಿಟಿಸಿ ಕಾಲೇಜು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಂತಮ್ಮ ಗ್ರಾಮಗಳಲ್ಲೇ ಗುಣಮಟ್ಟದ ತಾಂತ್ರಿಕ ಶಿಕ್ಷಣ ಮತ್ತು ಕೌಶಲ ತರಬೇತಿ ಪಡೆಯುವ ಅವಕಾಶ ಕಲ್ಪಿಸಿದೆ ಎಂದರು.

ಇಲ್ಲಿ ತರಬೇತಿ ಪಡೆದ ಮಕ್ಕಳು ನಮ್ಮ ರಾಜ್ಯವಲ್ಲದೆ ಕಡಲಾಚೆಗೂ ಉದ್ಯೋಗವಕಾಶಗಳು ದೊರೆಯಲಿವೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಟ್ಟಡ ಕಾಮಗಾರಿಯನ್ನು ಜನರ್ಪಣೆಗೊಳಿಸುವ ಜೊತೆಗೆ ಕಾಲೇಜು ಕೂಡ ಪ್ರಾರಂಭವಾಗಲಿದೆ ಎಂದರು. ಇಂದಿರಾ ಗ್ರಾಮದಲ್ಲಿರುವ ತೋಟಗಾರಿಕೆ ನರ್ಸರಿ ಫಾರ್ಮಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಸಲಹೆ ನೀಡಿದರು. ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ವಿವಿಧ ತೋಟಗಾರಿಕೆ ಬೆಳೆಗಳ ಗುಣಮಟ್ಟದ ಸಸಿ ಹಾಗೂ ಕಸಿ ಗಿಡಗಳನ್ನು ವೈಜ್ಞಾನಿಕವಾಗಿ ಬೆಳಸಿ ರೈತರಿಗೆ ಲಭ್ಯವಾಗುವಂತೆ ಮಾಡಬೇಕು.ಉತ್ತಮ ಗುಣಮಟ್ಟದ ಸಸಿಗಳ ಬಳಕೆಯಿಂದ ಉತ್ತಮ ಇಳುವರಿ ಉತ್ಪಾದಕತೆ ಹಾಗೂ ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್ ನಂದಿನಿ,ಇಒ ಉತ್ತಮ್,ಜಂಟಿ ನಿರ್ದೇಶಕ ಶಾರದಮ್ಮ, ಉಪ ನಿರ್ದೇಶಕ ರಮೇಶ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಶಿಧರ್, ಅಭಿಲಾಷ್‌ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಮುಖಂಡರು ಇದ್ದರು.