ಸಾರಾಂಶ
ತಿಪಟೂರು : ತಾಲೂಕಿನ ಹಾಸನ-ತಿಪಟೂರು ರಸ್ತೆ ಹಾಗೂ ತಿಪಟೂರು-ಚಿಕ್ಕನಾಯ್ಕನಹಳ್ಳಿ ರಸ್ತೆ ಅಭಿವೃದ್ದಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು.
ತಿಪಟೂರು : ತಾಲೂಕಿನ ಹಾಸನ-ತಿಪಟೂರು ರಸ್ತೆ ಹಾಗೂ ತಿಪಟೂರು-ಚಿಕ್ಕನಾಯ್ಕನಹಳ್ಳಿ ರಸ್ತೆ ಅಭಿವೃದ್ದಿಗೆ ಶಾಸಕ ಕೆ.ಷಡಕ್ಷರಿ ಗುದ್ದಲಿಪೂಜೆ ನೆರವೇರಿಸಿದರು. ನಗರದ ಹಾಸನ ರಸ್ತೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಕೆ.ಎಂ.ಆರ್.ಸಿ ಯೋಜನೆ ಅಡಿ ತಿಪಟೂರು ಹಾಸನ ರಸ್ತೆಯ ಗಡಿಭಾಗದವರೆಗೆ ಒಟ್ಟು 11ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 41ಕೋಟಿ ಹಣ ಮುಂಜೂರಾಗಿದ್ದು, ಚಿಕ್ಕನಾಯ್ಕನಹಳ್ಳಿ - ತಿಪಟೂರು ರಸ್ತೆಯ ಚಿಕ್ಕನಾಯ್ಕನಹಳ್ಳಿ ಗಡಿಯವರೆಗೆ 10ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ 29 ಕೋಟಿ ಹಣಮುಂಜೂರಾಗಿದೆ. ನಗರದ ಅಭಿವೃದ್ದಿ ದೃಷ್ಠಿಯಿಂದ ತಿಪಟೂರು-ಯಡಿಯೂರು ರಸ್ತೆ ಹಾಗೂ ಹಾಸನ ತಿಪಟೂರು ರಸ್ತೆಯನ್ನು ಹೆದ್ದಾರಿಯಾಗಿ ಮಾರ್ಪಡಿಸಲು ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಸರ್ಕಾರದಲ್ಲಿ ಯೋಜನೆ ಮುಂಜೂರಿಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಜಿಲ್ಲಾಧ್ಯಕ್ಷ ನಿಖಿಲ್ ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷರಾದ ತರಕಾರಿ ಪ್ರಕಾಶ್, ಮೇಘಶ್ರೀ ಭೂಷಣ್, ಪಿಡಬ್ಲೂಡಿ ಎಇಇ ನಟರಾಜ್, ವಿರುಪಾಕ್ಷ, ಗುತ್ತಿಗೆದಾರರಾದ ಚಂದನ್, ಸತೀಶ್, ಮುಖಂಡರಾದ ಆದಿತ್ಯ ಜಯಣ್ಣ, ಗಂಗಾಧರಯ್ಯ, ಲೋಕನಾಥ್ ಸಿಂಗ್, ಸುಜಿತ್ ಭೂಷಣ್ ಮತ್ತಿತರರಿದ್ದರು.;Resize=(128,128))
;Resize=(128,128))
;Resize=(128,128))