ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 40ನೇ ಕೋರ್ಟ್ ವಾರ್ಡಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಎದುರು ರಿಕ್ಷಾ ಮಾಲೀಕ-ಚಾಲಕರ ಹಾಗೂ ಸಾರ್ವಜನಿಕರ ಬೇಡಿಕೆಯ ಮೇರೆಗೆ 18 ಲಕ್ಷ ರು. ವಿಶೇಷ ಅನುದಾನದಲ್ಲಿ ಆಟೋ ಪಾರ್ಕ್ ಅಭಿವೃದ್ಧಿಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಶಿಲಾನ್ಯಾಸ ನಡೆಯಿತು.ನಂತರ ಮಾತನಾಡಿದ ಶಾಸಕರು, ಇಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಮೇಲ್ಛಾವಣಿಯಿಂದಾಗಿ ರಿಕ್ಷಾ ಚಾಲಕರು ಉರಿ ಬಿಸಿಲು ಹಾಗೂ ಮಳೆಗಾಲದಲ್ಲಿ ಆಶ್ರಯ ಪಡೆಯಲು ಅನುಕೂಲವಾಗಲಿದೆ. ಇಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರೈಲ್ವೆ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಆ ನಿಟ್ಟಿನಲ್ಲಿ ರೈಲ್ವೆ ಅಧಿಕಾರಿ ಯಾಧವ್ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಗೊಂದು ಕುಡಿಯುವ ಶುದ್ಧ ನೀರಿನ ಘಟಕವನ್ನೂ ನಿರ್ಮಿಸಲಾಗುವುದು ಎಂದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಅನಿಲ್ ಹೊಯ್ಗೆ ಬಜಾರ್, ದಯಾನಂದ್, ಸುಶೀಲ್, ನೆಲ್ಸನ್, ಮಂಜುನಾಥ್, ಶರಣ್, ಮೋಹನ್, ಸ್ಥಳೀಯ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಇದ್ದರು.ಆಟೊ ಪಾರ್ಕ್ ಅಭಿವೃದ್ಧಿಗೆ ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 40ನೇ ಕೋರ್ಟ್ ವಾರ್ಡಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಎದುರು ರಿಕ್ಷಾ ಮಾಲೀಕ-ಚಾಲಕರ ಹಾಗೂ ಸಾರ್ವಜನಿಕರ ಬೇಡಿಕೆಯ ಮೇರೆಗೆ 18 ಲಕ್ಷ ರು. ವಿಶೇಷ ಅನುದಾನದಲ್ಲಿ ಆಟೋ ಪಾರ್ಕ್ ಅಭಿವೃದ್ಧಿಗೊಳ್ಳಲಿದ್ದು, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಶಿಲಾನ್ಯಾಸ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.