ಮುಖೇಶ ಪತಂಗೆ ಮನೆಗೆ ಶಾಸಕ ಕಂದಕೂರ ಭೇಟಿ, ಸಾಂತ್ವನ

| Published : Nov 30 2024, 12:45 AM IST

ಮುಖೇಶ ಪತಂಗೆ ಮನೆಗೆ ಶಾಸಕ ಕಂದಕೂರ ಭೇಟಿ, ಸಾಂತ್ವನ
Share this Article
  • FB
  • TW
  • Linkdin
  • Email

ಸಾರಾಂಶ

MLA Kandakur visits Mukesh Patange's house, consoles him

ಕನ್ನಡಪ್ರಭ ವಾರ್ತೆ ಗುರುಮಠಕಲ್

ಕಳೆದ ತಿಂಗಳು ಆಕಸ್ಮಿಕವಾಗಿ ಮೃತಪಟ್ಟ ಭಾವಸಾರ ಕ್ಷತ್ರೀಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರ ಅವರು ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪತಂಗೆ ಅವರು ಸಮಾಜದ ಬಗ್ಗೆ ಸಾಕಷ್ಟು ಕಳಕಳಿಯುಳ್ಳ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಸಾಕಷ್ಟು ನೋವು ತರಿಸಿದೆ ಎಂದರು. ಭಾವಸಾರ ಕ್ಷತ್ರಿಯ ಸಮಾಜಕ್ಕೆ ಮಾತಾ ಹಿಂಗುಲಾಂಬಿಕಾ ದೇವಿಯ ದೇವಸ್ಥಾನ ನಿರ್ಮಾಣ ಮಾಡಬೇಕು ಎನ್ನುವ ಕನಸು ಅವರದ್ದಾಗಿತ್ತು. ಈ ಕುರಿತು ತಮಗೆ ಮನವಿ ಕೂಡ ಮಾಡಿದ್ದು, ಅವರ ಕನಸು ನನಸಾಗಿಸುವಲ್ಲಿ ಸಮಾಜದವರಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಅವರ ತಂದೆ, ಪತ್ನಿ ಹಾಗೂ ಮಕ್ಕಳಿಗೆ ಧೈರ್ಯ ಹೇಳಿದರು. ಶ್ರೀಕಾಂತ ಢಗೆ, ದತ್ತು ಬೋಡಕೆ, ರವಿ ಪತಂಗೆ, ನಾಗರಾಜ ಪತಂಗೆ, ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಆವಂಟಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ ನಿರೇಟಿ, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಆಶಣ್ಣ ಬುದ್ದ, ಬಸಣ್ಣ ದೇವರಹಳ್ಳಿ, ರಾಘನಾಥ ರೆಡ್ಡಿ ಗವಿನೋಳ್, ಸತ್ಯನಾರಾಯಣ ತಿವಾರಿ, ನರಸಪ್ಪ ಧನ್ವಾಡ ವಕೀಲರು, ಅಶೋಕ ಕಲಾಲ್, ಸಂತೋಷ ಗೌಡ, ಶಿವು ಪುರುಷೋತ್ತಮ್, ನಾಗೇಶ್ ಪತಂಗೆ, ರಾಮಲಿಂಗ ಇದ್ದರು.

----

ಫೋಟೊ:ಗುರುಮಠಕಲ್ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಮುಖೇಶ್ ಪತಂಗೆ ಮನೆಗೆ ಶಾಸಕ ಶರಣಗೌಡ ಕಂದಕೂರು ಅವರು ಭೇಟಿ ನೀಡಿ ಸಾಂತ್ವನ ಹೇಳಿದರು.

28ವೈಡಿಆರ್11