ಶ್ರೀ ಭೀಮಸತಿ ಚಲನಚಿತ್ರಕ್ಕೆ ಶಾಸಕ ಕೆಎಂ ಶಿವಲಿಂಗೇಗೌಡ ಚಾಲನೆ

| Published : Jan 25 2025, 01:00 AM IST

ಸಾರಾಂಶ

ಹಿಂದೆ ಪತಿ ನಿಧನರಾದರೆ ಸತಿಯೂ ಸಹ ಅದೇ ಚಿತೆಯಲ್ಲಿ ಸಹಗಮನ ಪದ್ಧತಿ ಇತ್ತು. ಇದನ್ನು ತಡೆಗಟ್ಟುವ ಸಲುವಾಗಿ ಭೀಮಸತಿಯು ತನ್ನನ್ನೇ ಅರ್ಪಣೆ ಮಾಡಿಕೊಂಡ ಕಥೆ ಇದಾಗಿದ್ದು ರಾಮ ನಾಯಕ್ ಅವರು ಬಹಳ ಪರಿಶ್ರಮ ದಿಂದ ಈ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ ಇದು ಶತದಿನ ಆಚರಿಸಲಿ.

ಅರಸೀಕೆರೆ: ತಾಲೂಕಿನವರೇ ಆದ ರಾಮ ನಾಯಕ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ತಯಾರಿಸಿರುವ ಚಲನಚಿತ್ರಕ್ಕೆ ಶಾಸಕ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆಎಂ ಶಿವಲಿಂಗೇಗೌಡ ಚಾಲನೆ ನೀಡಿದರು. ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ, ಹಿಂದೆ ಪತಿ ನಿಧನರಾದರೆ ಸತಿಯೂ ಸಹ ಅದೇ ಚಿತೆಯಲ್ಲಿ ಸಹಗಮನ ಪದ್ಧತಿ ಇತ್ತು. ಇದನ್ನು ತಡೆಗಟ್ಟುವ ಸಲುವಾಗಿ ಭೀಮಸತಿಯು ತನ್ನನ್ನೇ ಅರ್ಪಣೆ ಮಾಡಿಕೊಂಡ ಕಥೆ ಇದಾಗಿದ್ದು ರಾಮ ನಾಯಕ್ ಅವರು ಬಹಳ ಪರಿಶ್ರಮ ದಿಂದ ಈ ಚಿತ್ರವನ್ನು ತೆರೆಯ ಮೇಲೆ ತಂದಿದ್ದಾರೆ ಇದು ಶತದಿನ ಆಚರಿಸಲಿ ಎಂದು ಶುಭ ಕೋರಿದರು.ನಿರ್ಮಾಪಕ, ನಿರ್ದೇಶಕ ರಾಮ ನಾಯಕ್ ಮಾತನಾಡಿ, ಚಲನಚಿತ್ರ ನೋಡಿ ಪ್ರೇಕ್ಷಕರು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮ ಶೇಖರ್, ಅಖಿಲ ಭಾರತ ಬಂಜಾರ ಯಾತ್ರಾ ಸ್ಥಳ ಶ್ರೀ ಭೀಮಾಸತಿ ತೀತಾ ರಾಜ ಸಮಿತಿ ಅಧ್ಯಕ್ಷ ರಾಜ ನಾಯಕ್, ಬಂಜಾರ ಸಮುದಾಯ ಭವನ ಸಮಿತಿ ಕಾರ್ಯದರ್ಶಿ ಮಂಜುನಾಥ್ ಉಪಸ್ಥಿತರಿದ್ದರು.