ನಿಡಂಬಳ್ಳಿ ಆರೋಗ್ಯ, ಸ್ವಾಸ್ಥ್ಯ ಕೇಂದ್ರ ಕಾಮಗಾರಿಗೆ ಶಾಸಕ ಚಾಲನೆ

| Published : Mar 11 2025, 12:47 AM IST

ಸಾರಾಂಶ

ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಂಬಳ್ಳಿಯಲ್ಲಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಲ್ಲಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಂಬಳ್ಳಿಯಲ್ಲಿ ಸುಮಾರು 65 ಲಕ್ಷ ರು. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಲ್ಲಿರುವ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರದ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ, ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಮಂದಿರ ಯೋಜನೆಯಡಿ ಗ್ರಾಮೀಣ ಭಾಗದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಶೀಘ್ರವಾಗಿ ನಿರ್ಮಾಣಗೊಳ್ಳಲಿರುವ ಆರೋಗ್ಯ ಸ್ವಾಸ್ಥ್ಯ ಕೇಂದ್ರದ ಮೂಲಕ ಉತ್ತಮ ಸೇವೆ ನೀಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಕಲ್ಯಾಣ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಕುಂದರ್, ಉಪಾಧ್ಯಕ್ಷೆ ಪ್ರೇಮಲತಾ, ಗಣಪತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ನವೀನ್ ಕಾಂಚನ್, ಜಾನ್ಸನ್, ಪ್ರಶಾಂತ್, ಅನಿತಾ,ರತ್ನ ಕೇಶವ, ಹಿರಿಯ ಕಾರ್ಯಕರ್ತರಾದ ಗುರುರಾಜ್ ಗಾಣಿಗ, ಶ್ರೀಧರ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.ದೀಪಕ್ ನಾಯಕ್‌ಗೆ ಪಿಎಚ್‌ಡಿ ಪದವಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಅಂಗಸಂಸ್ಥೆ ಮಣಿಪಾಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಪ್ರಾಧ್ಯಾಯಾಪಕ ದೀಪಕ್‌ ನಾಯಕ್, ‘ಕರಾವಳಿ ಕರ್ನಾಟಕದ ಲಿಥೋಮಾರ್ಜಿಕ್ ಮಣ್ಣಿನ ಭೌತಿಕ ಹಾಗೂ ಖನಿಜ ಶಾಸ್ತ್ರೀಯ ಗುಣಲಕ್ಷಣಗಳ ಅಧ್ಯಯನ ಮತ್ತು ತೆಂಗಿನ ನಾರನ್ನು ಬಳಸಿ ಅದರ ಸುಧಾರಣೆ’ ಎಂಬ ವಿಷಯದ ಕುರಿತಾಗಿ ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ದೀಪಕ್, ಈ ಸಂಶೋಧನಾ ಪ್ರಬಂಧವನ್ನು ಎಂಐಟಿಯ ಸಿವಿಲ್ ಎಂಜಿನಿಯರ್ ವಿಭಾಗದ ಪ್ರಾಧ್ಯಾಪಕ ಡಾ. ಪುರುಷೋತ್ತಮ್ ಜಿ. ಸರ್ವದೆ ಮತ್ತು ಡಾ. ಎಚ್.ಎನ್. ಉದಯಶಂಕರ್ ಮಾರ್ಗದರ್ಶನದಲ್ಲಿ ರಚಿಸಿದ್ದಾರೆ. ದೀಪಕ್ ನಾಯಕ್, ಜ್ಯೋತಿ ಆರ್. ನಾಯಕ್ ಮತ್ತು ರಮಾನಾಥ್ ನಾಯಕ್ ದಂಪತಿ ಪುತ್ರ.