ಸಾರಾಂಶ
ಹಾನಗಲ್ಲ: ತಾಲೂಕಿನ ಮಲಗುಂದ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.ಪ್ರಸಕ್ತ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಮಲಗುಂದ ಗ್ರಾಮದಿಂದ ಯತ್ತಿನಹಳ್ಳಿವರೆಗೆ ೧೫ ಲಕ್ಷ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮ ಲೆಕ್ಕಶೀರ್ಷಿಕೆ ೫೦೫೪ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ೫೮ ಲಕ್ಷ ವೆಚ್ಚದಲ್ಲಿ ಮಲಗುಂದದಿಂದ ಹಾವಣಗಿ ೩ ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿನ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಗಮನ ನೀಡಲಾಗಿದೆ. ಈ ವರ್ಷ ಸುರಿದ ಭಾರಿ ಮಳೆಯಿಂದ ಗ್ರಾಮೀಣ ರಸ್ತೆಗಳು ಹದಗೆಟ್ಟಿವೆ. ಸುಗಮ ಸಂಚಾರದ ದೃಷ್ಟಿಯಿಂದ ರಸ್ತೆಗಳನ್ನು ಸುಧಾರಿಸಲು ಒತ್ತು ನೀಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಮಾನೆ ತಿಳಿಸಿದರು.ಗ್ರಾಪಂ ಉಪಾಧ್ಯಕ್ಷೆ ಗಂಗವ್ವ ಬಾರ್ಕಿ, ಸದಸ್ಯರಾದ ದೇವೇಂದ್ರಪ್ಪ ಹುಲ್ಲಾಳ, ಚಿದಾನಂದಯ್ಯ ಹಿರೇಮಠ, ಸುವರ್ಣಮ್ಮ ಪೂಜಾರ, ರೇಖಾ ಪೂಜಾರ, ಮಂಜಪ್ಪ ತಳವಾರ, ಮಂಜುಳಾ ವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ಮುಖಂಡರಾದ ಗುತ್ತೆಪ್ಪ ತಳವಾರ, ತಿಪ್ಪಣ್ಣ ದೊಡ್ಡಕೋವಿ, ಸುರೇಶ ತಳವಾರ, ಕಲವೀರಯ್ಯ ಹಿರೇಮಠ, ಮಾರ್ತಾಂಡಪ್ಪ ಕೂಸನೂರ, ಚಂದ್ರು ವಡ್ಡರ, ಗಜೇಂದ್ರ ಕಲ್ಲಾಪುರ, ರಾಘವೇಂದ್ರ ಗುಡ್ಡದವರ, ಹನುಮಂತ ಬಾರ್ಕಿ, ಯಲ್ಲಪ್ಪ ತಳವಾರ, ಚಂದ್ರು ದೊಡ್ಡಕೋವಿ, ಮಾಲತೇಶ ಕುಕ್ಕೇರ, ರಾಮಚಂದ್ರ ಪೂಜಾರ ಇದ್ದರು.ಫೋಟೊ: ೨೮ಎಚ್‌ಎನ್‌ಎಲ್೧ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದಲ್ಲಿ ೫೮ ಲಕ್ಷ ವೆಚ್ಚದಲ್ಲಿ ಮಲಗುಂದದಿಂದ ಹಾವಣಗಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.