ಪ್ರತಿವರ್ಷ ನಡೆಯುವ ದತ್ತಪೀಠ ದತ್ತಾತ್ರೇಯ ಪಾದ ದರ್ಶನ ಯಾತ್ರೆಗೆ ಈ ಬಾರಿ ಸಕಲೇಶಪುರದಿಂದ ಸುಮಾರು ಐನ್ನೂರಕ್ಕೂ ಹೆಚ್ಚು ಭಕ್ತರು ದತ್ತಮಾಲೆ ಧರಿಸಿ ಪಾದುಕೆಯ ದರ್ಶನಕ್ಕೆ ತೆರಳುವುದರಿಂದ ಶ್ರಿನಿವಾಸ ಕನ್ವೆನ್ಷನ್ ಆವರಣ ಭಕ್ತಿ ಭಾವನೆಯಿಂದ ಕಂಗೊಳಿಸಿತು. ಭಕ್ತರ ಉತ್ಸಾಹಭರಿತ ಸಮೂಹ, ದತ್ತನಾಮ ಸ್ಮರಣೆಯ ಜಪ ಹಾಗೂ ಪಾದಯಾತ್ರೆಗೆ ತಯಾರಾದ ವಾತಾವರಣ ಮನಮೋಹಕವಾಗಿತ್ತು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಶ್ರಿನಿವಾಸ ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಬೆಳಗ್ಗೆ ನಡೆದ ದತ್ತಮಾಲಾ ಅಭಿಯಾನಕ್ಕೆ ಶಾಸಕ ಸಿಮೆಂಟ್ ಮಂಜು ಚಾಲನೆ ನೀಡಿದರು.

ಪ್ರತಿವರ್ಷ ನಡೆಯುವ ದತ್ತಪೀಠ ದತ್ತಾತ್ರೇಯ ಪಾದ ದರ್ಶನ ಯಾತ್ರೆಗೆ ಈ ಬಾರಿ ಸಕಲೇಶಪುರದಿಂದ ಸುಮಾರು ಐನ್ನೂರಕ್ಕೂ ಹೆಚ್ಚು ಭಕ್ತರು ದತ್ತಮಾಲೆ ಧರಿಸಿ ಪಾದುಕೆಯ ದರ್ಶನಕ್ಕೆ ತೆರಳುವುದರಿಂದ ಶ್ರಿನಿವಾಸ ಕನ್ವೆನ್ಷನ್ ಆವರಣ ಭಕ್ತಿ ಭಾವನೆಯಿಂದ ಕಂಗೊಳಿಸಿತು. ಭಕ್ತರ ಉತ್ಸಾಹಭರಿತ ಸಮೂಹ, ದತ್ತನಾಮ ಸ್ಮರಣೆಯ ಜಪ ಹಾಗೂ ಪಾದಯಾತ್ರೆಗೆ ತಯಾರಾದ ವಾತಾವರಣ ಮನಮೋಹಕವಾಗಿತ್ತು.ಈ ಸಂದರ್ಭದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಸಿಮೆಂಟ್ ಮಂಜು, ಪ್ರತಿವರ್ಷ ದತ್ತಮಾಲಾಧಾರಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇದು ಧರ್ಮ ಜಾಗೃತಿ, ರಾಷ್ಟ್ರರಕ್ಷಣೆ ಮತ್ತು ಹಿಂದೂ ಸಂಸ್ಕೃತಿಯ ಬಗ್ಗೆ ಯುವಜನತೆ ತೆಗೆದುಕೊಳ್ಳುತ್ತಿರುವ ಹೊಣೆಗಾರಿಕೆಯ ಸಂಕೇತ, ಈ ಸಂದರ್ಭದಲ್ಲಿ ಅವರು ಇನ್ನಷ್ಟು ಮಹಿಳೆಯರು ದತ್ತಮಾಲೆ ಧರಿಸಿ ಪಾದುಕೆಯ ದರ್ಶನಕ್ಕೆ ತೆರಳುತ್ತಿರುವುದು ಸಂತೋಷದ ಸಂಗತಿ ಎಂದರು. ದತ್ತಪೀಠದಲ್ಲಿ ನೇಮಿಸಿರುವ ಹಿಂದೂ ಅರ್ಚಕರ ಮಾರ್ಗದರ್ಶನದಲ್ಲಿ ದಿನನಿತ್ಯ ಪೂಜೆ-ಹೋಮಗಳು ನಡೆಯಬೇಕು, ಭಕ್ತರಿಗೆ ಪ್ರತಿದಿನವೂ ದತ್ತಪಾದುಕೆಯ ದರ್ಶನ ಸಿಗಬೇಕು ಎಂದು ಅಭಿಪ್ರಾಯಪಟ್ಟರು. ಯಾತ್ರಿಕರು ಸುರಕ್ಷಿತವಾಗಿ ಸಂಚಾರ ಮಾಡಬೇಕು ಎಂದು ಕರೆ ನೀಡಿದ ಅವರು, ಪಾದುಕೆಯ ದರ್ಶನಕ್ಕೆ ತೆರಳುವ ಪ್ರತಿಯೊಬ್ಬರೂ ಸಹ ಶಾಂತಿ, ತಾಳ್ಮೆಯಿಂದ ವಾಹನ ಸಂಚಾರ ಮಾಡಬೇಕು. ನಿಯಮಗಳನ್ನು ಪಾಲಿಸಿ, ಭಕ್ತಿಭಾವದಿಂದ ದರ್ಶನ ಪಡೆದು ಮರಳಬೇಕು ಹಾಗೂ ಇದು ನಮ್ಮ ಹಿಂದೂಗಳ ಅಸ್ಮಿತೆಗಾಗಿ ಮಾಡುತ್ತಿರುವ ಹೋರಾಟ ಎಷ್ಟೋ ಬಲಾಢ್ಯರು ದತ್ತಪಾದುಕೆಯ ಸ್ಥಳದ ವಿಚಾರವಾಗಿ ಆಲಸ್ಯ ತೋರುತ್ತಿರುವುದು ಗಮನಕ್ಕೆ ಬಂದಿದೆ. ಆ ಸ್ಥಳವನ್ನು ಉತ್ಖನನ ಮಾಡುವುದರಿಂದ ನಿಜವಾದ ಅಂಶ ಬಯಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಜರಂಗದಳದ ಮುಖಂಡರುಗಳಾದ ವಿಜಿ ಕುಮಾರ್, ವಿಷ್ಣು ರಾವ್, ಮಹೇಂದ್ರ, ತಾಲೂಕು ಬಿಜೆಪಿ ಅಧ್ಯಕ್ಷ ವಲಳಹಳ್ಳಿ ಅಶ್ವತ್, ದತ್ತಭಕ್ತರು, ಸಂಘಟಕರು, ಮಂಡಳಿ ಸದಸ್ಯರು ಸೇರಿ ಅನೇಕರು ಭಾಗಹಿಸಿದ್ದರು.